ಪಹಲ್ಗಾಂ ದಾಳಿಯ ನಂತರ, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಮೂರು ದಿನಗಳಲ್ಲಿ ಆರು ಉಗ್ರರ ಮನೆ ಧ್ವಂಸೊಂಡಿದೆ. ಅರ ಬೆಂಬಲಿಗರಿಗೂ ಸೇನೆ ಹುಡುಕಾಟ ನಡೆಸುತ್ತಿದೆ. 

ಶ್ರೀನಗರ: ಪಹಲ್ಲಾಂ ದಾಳಿ ಬಳಿಕ ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ದ ಕಠಿಣ ಕ್ರಮ ಮುಂದುವರೆಸಿರುವ ಸೇನಾ ಪಡೆಗಳು ಮತ್ತೆ ನಾಲ್ಕು ಉಗ್ರರ ಮನೆಗ ಳನ್ನು ಧ್ವಂಸ ಮಾಡಿವೆ. ಇದರೊಂದಿಗೆ 26 ಪ್ರವಾಸಿಗರ ಹತ್ಯೆ ನಡೆದ ಮೂರು ದಿನಗಳಲ್ಲಿ ಒಟ್ಟು ಆರು ಉಗ್ರರ ಮನೆಗಳನ್ನು ಧ್ವಂಸ ಮಾಡಿದಂತಾಗಿದೆ. ಜೊತೆಗೆ ಉಗ್ರರಿಗಾಗಿ ಮನೆ ಮನೆ ಹುಡುಕಾಟದ ಕಾರ್ಯಾಚರಣೆಯನ್ನು ಶನಿವಾರ ತೀವ್ರಗೊಳಿಸಲಾಗಿದೆ. ಅಲ್ಲದೆ ಉಗ್ರರ ಬೆಂಬಲಿಗರು ಮತ್ತು ಅವರಿಗೆ ನೆರವು ನೀಡುವವರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ಹಲವಾರು ಜನರನ್ನು ವಶಕ್ಕೆ ಪಡೆದಿದ್ದು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಭಯೋತ್ಪಾದಕರು ಮತ್ತು ಅವರಿಗೆ ಪ್ರೋತ್ಸಾಹ ನೀಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಕಠಿಣ ಸಂದೇಶ ರವಾನಿಸಿದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಇಂಥ ಘಟನೆಗಳು ಆರಂಭವಾಗಿವೆ. 

ಭದ್ರತಾ ಪಡೆಗಳಿಂದ ಧ್ವಂಸಗೊಂಡ ಭಯೋತ್ಪಾದಕರ ಮನೆಗಳು 
ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಲಾಂ ಜಿಲ್ಲೆಗಳಲ್ಲಿ ಮೂವರು ಶಂಕಿತ ಉಗ್ರರ ಮನೆಗಳನ್ನು ದಿಢೀರ್ ನಾಶ ಮಾಡಲಾಗಿದೆ. 2018ರಲ್ಲಿ ಪಾಕಿಸ್ತಾನದಲ್ಲಿ ಉಗ್ರ ತರಬೇತಿ ಪಡೆದು ಇತ್ತೀಚೆಗೆ ಕಣಿವೆ ಪ್ರವೇಶಿಸಿದ್ದ ಪುಲ್ವಾಮಾ ಜಿಲ್ಲೆಯ ಮುರಾನ್‌ನಲ್ಲಿರುವ ಎಹ್ವಾನ್ ಉಲ್ ಹಕ್ ಶೇಖ್ ಮನೆ ಹಾಗೂ ಮೂರ್ನಾಲ್ಕು ವರ್ಷಗಳಿಂದ ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಶೋಪಿಯಾನ್ ಜಿಲ್ಲೆಯ ಭೋತಿಪೋರಾದ ಲಷ್ಕರ್ -ಎ-ತೊಯ್ದಾ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟಿ ಮನೆ ಹಾಗೂ 2023ರಿಂದ ಉಗ್ರರ ಜತೆಗೆ ಗುರುತಿಸಿಕೊಂಡಿರುವ ಕುಲ್ಲಾಂ ಜಿಲ್ಲೆಯ ಮತಲ್ಹಾಮಾದಲ್ಲಿರುವ ಝಾಕಿರ್ ಅಹ್ಮದ್ ಘನಿ ಮತ್ತು ಹಾಲಿ ಪಾಕಿಸ್ತಾನದಲ್ಲಿರುವ ಉಗ್ರ ಫಾರೂಖ್ ಶೇಖ್‌ ಗೆ ಸೇರಿದ ಪುಲ್ವಾಮಾದಲ್ಲಿನ ಮನೆ ಧ್ವಂಸ ಮಾಡಲಾಗಿದೆ. ಇದಕ್ಕೂ ಮೊದಲು ಗುರುವಾರ `ಆದಿಲ್ ಹುಸೈನ್ ಠೋಕರ್,ಆಸೀಫ್ ಶೇಖ್ ಮನೆ ಧ್ವಂಸಗೊಳಿಸಲಾಗಿತ್ತು.

ಇದನ್ನೂ ಓದಿ:ಭಾರತ ಬಿಡಲು ಇಂದೇ ಕೊನೆ ದಿನ : 3 ದಿನಗಳಲ್ಲಿ ತೆರಳಿದ ಪಾಕಿಗಳ ಸಂಖ್ಯೆ ಕೇವಲ 450

ಸತತ 2ನೇ ದಿನವೂ ಪಾಕ್ ಗುಂಡಿನ ದಾಳಿ 
ಶ್ರೀನಗರ: ಶಿಮ್ಲಾ ಒಪ್ಪಂದವನ್ನು ಸ್ಥಗಿತಗೊಳಿಸಿ ಭಾರತದ ವಿರುದ್ದ ಹಗೆ ಸಾಧಿಸಲು ಮುಂದಾಗಿರುವ ಪಾಕಿಸ್ತಾನ, ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ಮುಂದುವರೆಸಿದೆ. ಇದಕ್ಕೆ ಭಾರತೀಯ ಸೈನಿಕರೂ ತಕ್ಕ ಉತ್ತರ ನೀಡಿದ್ದಾರೆ. ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಗುರುವಾರ ಭಾರತದ ಗಡಿಯತ್ತ ಗುಂಡು ಹಾರಿಸಿ, ಭಾರತದಿಂದ ಅದೇ ಭಾಷೆಯಲ್ಲಿ ಉತ್ತರ ಸಿಕ್ಕಿದಾಗ ಸುಮ್ಮನಾಗಿದ್ದ ಪಾಕ್, 2ನೇ ದಿನವೂ ತನ್ನ ಚೇಷ್ಟೆ ಮುಂದುವರೆಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಗುಂಡು ಹಾರಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ವೇಳೆ ಯಾವುದೇ ಸಾವು ನೋವು ವರದಿಯಾಗಿಲ್ಲ.

ಕಾಶ್ಮೀರದಲ್ಲಿ ಉಗ್ರರ ಅಡಗು ತಾಣ ಪತ್ತೆ, ಭಾರಿ ಶಸ್ತ್ರಾಸ್ತ್ರವಶ 

ಶ್ರೀನಗರ: ಪಹಲ್ಗಾಂ ದುರಂತದ ಬಳಿಕ ಉಗ್ರರ ವಿರುದ್ಧ ಸಮರ ಸಾರಿರುವ ಭದ್ರತಾ ಪಡೆಗಳು ಶನಿವಾರ ಜಮ್ಮು, ಕಾಶ್ಮೀರದ ಕುಪ್ಪಾರಾ ಜಿಲ್ಲೆಯಲ್ಲಿ ಭಯೋತ್ಪಾದಕರ ಅಡಗು ತಾಣಗಳನ್ನು ಪತ್ತೆ ಹಚ್ಚಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆ ಸಿಬ್ಬಂದಿಗಳು ಉತ್ತರ ಕಾಶ್ಮೀರ ಜಿಲ್ಲೆಯ 
ಮುಪ್ತಕಾಬಾದ್ ಮಚಿಲ್ ವ್ಯಾಪ್ತಿಯ ಸೆಡೋರಿ ನಾಲಾ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಅಡಗು ತಾಣವನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಸ್ಥಳದಿಂದ ಎಕೆ-47 ರೈಫಲ್, ಪಿಸ್ತೂಲ್, ಸಜೀವ ಗುಂಡು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ:ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಪದಚ್ಯುತಿಗೆ ಪಾಕ್ ನಾಗರಿಕರಿಂದಲೇ ಆಗ್ರಹ

ವಿದ್ಯೆ ಕಲಿಯಲು ಪಾಕ್‌ಗೆ ಹೋಗಿ ಉಗ್ರನಾದ ಆದಿಲ್ 

ನವದೆಹಲಿ: ಪಹಲ್ಲಾಂ ದಾಳಿಯ ಮಾಸ್ಟರ್‌ಮೈಂಡ್ ಆದಿಲ್ ಥೋಕರ್ ಮುಲತಃ ಕಾಶ್ಮೀರದ ಅನಂತನಾಗ್ ಜಿಲ್ಲೆಯವ ವಿದ್ಯಾಭ್ಯಾಸಕ್ಕಾಗಿ ಪಾಕಿಸ್ತಾನಕ್ಕೆ ತೆರಳಿ, ಉಗ್ರನಾಗಿ ಮರಳಿದ್ದ ಎಂದು ತಿಳಿದು ಬಂದಿದೆ. ವಿದ್ಯಾರ್ಥಿ ವೀಸಾ ಪಡೆದು ಈತ 2018ರಲ್ಲಿ ಪಾಕ್‌ಗೆ ಹೋಗಿದ್ದ ಆದಿಲ್‌ನ ಮನಃಸ್ಥಿತಿ, ಮೊದಲೇ ಉಗ್ರವಾದದ ಹಾದಿ ಹಿಡಿಯುವ ಸೂಚನೆ ನೀಡುವಂತಿತ್ತು. ಅದಕ್ಕೆ ಪೂರಕವಾಗಿ ಆತ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಪಾಕ್ ತಲುಪಿ ಪರಿವಾರದೊಂದಿಗಿನ ಸಂಪರ್ಕ ಕಡಿದುಕೊಂಡ ಆದಿಲ್, 8 ತಿಂಗಳು ನಾಪತ್ತೆಯಾದ. ಈ ವೇಳೆ ಲಷ್ಕರ್‌ನಿಂದ ಸೈನಿಕ, ಸೈದ್ದಾಂತಿಕ ತರಬೇತಿ ಪಡೆಯುತ್ತಿದ್ದ ಎಂಬ ಶಂಕೆಯಿದೆ. 

ಉಗ್ರನಾಗಿ ಭಾರತಕ್ಕೆ: 2024ರಲ್ಲಿ ಗಡಿ ನುಸುಳಿ ಭಾರತಕ್ಕೆ ಬಂದ ಆದಿಲ್, ಜತೆಯಲ್ಲಿ ಪಾಕ್ ಪ್ರಜೆಯಾದ ಹಶೀಂ ಮೂಸಾ ಸೇರಿ ಮೂರ್ನಾಲ್ಕು ಉಗ್ರರನ್ನು ಕರೆತಂದಿದ್ದ. ಬಳಿಕ ಸ್ಥಳೀಯ ಉಗ್ರರ ಸಂಪರ್ಕವನ್ನು ಮತ್ತೆ ಸಾಧಿಸಿದ್ದ ಎನ್ನಲಾಗಿದೆ.