ಏರ್‌ಇಂಡಿಯಾ ವಿಮಾನದ ಸೀಟ್‌ನಲ್ಲೇ ಮಲ-ಮೂತ್ರ ಮಾಡಿದ ವ್ಯಕ್ತಿಯ ಬಂಧನ!

ವಿಮಾನದಲ್ಲಿ ಪ್ರಯಾಣಿಕರ ದುರ್ವತನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಸಹ ಪ್ರಯಾಣಿಕನ ಮೇಲೆ ಮೂತ್ರ ಮಾಡಿದ ಘಟನೆ ದೊಡ್ಡ ಮಟ್ಟದಲ್ಲು ಸುದ್ದಿಯಾದ ಬೆನ್ನಲ್ಲಿಯೇ,  ಇತ್ತೀಚೆಗೆ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೀಟ್‌ನಲ್ಲಿಯೇ ಮಲ-ಮೂತ್ರ ಮಾಡಿದ ಘಟನೆ ನಡೆದಿದೆ.

Mumbai Delhi Air India flight Passenger arrested for defecating and urinating san

ನವದೆಹಲಿ (ಜೂನ್‌.26):  ಮುಂಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಮಾನದ ಸೀಟ್‌ನಲ್ಲಿಯೇ ಮಲ ಮತ್ತು ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ಐಜಿಐ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಫ್ಲೈಟ್ ಕ್ಯಾಪ್ಟನ್ ದಾಖಲಿಸಿದ ಎಫ್‌ಐಆರ್ ಪ್ರಕಾರ, ಜೂನ್ 24 ರಂದು ಮುಂಬೈನಿಂದ ದೆಹಲಿಗೆ ಪ್ರಯಾಣ ಮಾಡಿದ್ದ ಏರ್ ಇಂಡಿಯಾ ವಿಮಾನವಾದ ಎಐಸಿ 866ಯಲ್ಲಿ ಪ್ರಯಾಣಿಕನೊಬ್ಬ ಸೀಟ್ ನಂ. 17ರಲ್ಲಿ ಮಲ-ಮೂತ್ರ ವಿಸರ್ಜೆನೆ ಹಾಗೂ ಉಗುಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈತ ಮಾಡಿದ್ದ ದುಷ್ಕೃತ್ಯವನ್ನು ಕ್ಯಾಬಿನ್‌ ಸಿಬ್ಬಂದಿ ಗಮನಿಸಿದ್ದಾರೆ. ಅದರ ಬೆನ್ನಲ್ಲಿಯೇ ಕ್ಯಾಬಿನ್‌ ಸೂಪರ್‌ವೈಸರ್‌ ಆತನಿಗೆ ಮೌಖಿಕವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ತಿಳಿಸಲಾಗಿದೆ. ಬಳಿಕ ಫ್ಲೈಟ್ ಕ್ಯಾಪ್ಟನ್‌ಗೂ ದುರ್ವರ್ತನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಘಟನೆಯ ನಂತರ ದಾಖಲಾದ ಎಫ್‌ಐಆರ್ ಪ್ರಕಾರ, ತಕ್ಷಣವೇ ಕಂಪನಿಗೆ ಸಂದೇಶವನ್ನು ಕಳುಹಿಸಲಾಗಿದೆ ಮತ್ತು ಆಗಮನದ ನಂತರ ಪ್ರಯಾಣಿಕರನ್ನು ಹಿಡಿದಿಡಲು ವಿಮಾನ ನಿಲ್ದಾಣದ ಭದ್ರತೆಯನ್ನು ಕೋರಲಾಗಿತ್ತು. ಎಫ್‌ಐಆರ್‌ನ ಮಾಹಿತಿಯ ಪ್ರಕಾರ, ಸಹ ಪ್ರಯಾಣಿಕರು ಕೂಡ ವ್ಯಕ್ತಿಯ ವರ್ತನೆಯ ಬಗ್ಗೆ ಕಿಡಿಕಾರಿದ್ದಾರೆ. 

ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ  ಏರ್ ಇಂಡಿಯಾದ ಭದ್ರತಾ ಮುಖ್ಯಸ್ಥರು ಹಾಜರಾಗಿ ಆರೋಪಿ ಪ್ರಯಾಣಿಕರನ್ನು ಐಜಿಐ ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ದರು. ಆರೋಪಿಯಾಗಿರುವ ಪ್ರಯಾಣಿಕ ಆಫ್ರಿಕಾದಲ್ಲಿ ಅಡುಗೆ ಕೆಲಸದಲ್ಲಿದ್ದಾನೆ ಎನ್ನಲಾಗಿದೆ. ಅವರು ಜೂನ್ 24 ರಂದು ಏರ್ ಇಂಡಿಯಾ ವಿಮಾನ ಎಐಸಿ 866 ನಲ್ಲಿ ಮುಂಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು.

ಕಾಕ್‌ಪಿಟ್‌ಗೆ ಸ್ನೇಹಿತೆಯ ಕರೆತಂದ ಏರ್‌ ಇಂಡಿಯಾ ಪೈಲಟ್‌ ಸಸ್ಪೆಂಡ್‌

ಎಎನ್‌ಐಗೆ ಮಾತನಾಡಿದ ದೆಹಲಿ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು, "ಫ್ಲೈಟ್ ಕ್ಯಾಪ್ಟನ್‌ನ ದೂರಿನ ಮೇರೆಗೆ ದೆಹಲಿ ಪೊಲೀಸರು ಐಜಿಐ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಪೊಲೀಸ್ ಠಾಣೆಯಲ್ಲಿ ಆರೋಪಿ ಪ್ರಯಾಣಿಕನನ್ನು ಬಂಧಿಸಲಾಗಿದೆ. ಆತನನ್ನು ಕೋರ್ಟ್‌ಗೆ ಈಗಾಗಲೇ ಹಾಜರುಪಡಿಸಿದ್ದು, ಕೋರ್ಟ್‌ ಜಾಮೀನು ಮುಂಜೂರು ಮಾಡಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದಿದ್ದಾರೆ.

ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಚ್ಚಿದ ಚೇಳು!

Latest Videos
Follow Us:
Download App:
  • android
  • ios