ಬೆಂಗಳೂರಿಗೆ ಹೊರಟ ಏರ್ ಇಂಡಿಯಾ ವಿಮಾನದಲ್ಲಿ ದೋಷ, ಪ್ಯಾನ್ ಪ್ಯಾನ್ ಕರೆ ನೀಡಿದ ಪೈಲೆಟ್, ಟೇಕ್ ಆಫ್ ಆದ ಕೆಲ ಹೊತ್ತಲ್ಲೇ ಕಂಟ್ರೋಲ್ ರೂಂಗೆ ಏರ್ ಇಂಡಿಯಾ ಪೈಲೆಟ್ ಈ ಸಂದೇಶ ನೀಡಿದ್ದಾರೆ.
ಮುಂಬೈ(ಏ.09) ಮುಂಬೈನಿಂದ ಪ್ರಯಾಣಿಕರ ಹೊತ್ತು ಬೆಂಗಳೂರಿನತ್ತ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಟೇಕ್ ಆಫ್ ಆದ ಕೆಲ ಹೊತ್ತಲ್ಲೇ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ ಪೈಲೆಟ್ ಏರ್ ಟ್ರಾಫಿಕ್ ಕಂಟ್ರೋಲ್ ರೂಂಗೆ ತುರ್ತು ಕರೆ ನೀಡಿದ್ದಾರೆ. ಪೈಲೆಟ್ ಪ್ಯಾನ್ ಪ್ಯಾನ್ ಸಂದೇಶ ನೀಡಿ ವಿಮಾನವನ್ನು ಮತ್ತೆ ಮುಂಬೈ ನಿಲ್ದಾಣದತ್ತ ತಿರುಗಿಸಿದ ಘಟನೆ ನಡೆದಿದೆ.
ಪ್ಯಾನ್ ಪ್ಯಾನ್ ತುರ್ತು ಕರೆ
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ AI2812 ವಿಮಾನ ಟೇಕ್ ಆಫ್ ಆಗಿದೆ. ಹಾರಾಟ ಆರಂಭಿಸುತ್ತಿದ್ದಂತೆ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಒಂದು ಎಂಜಿನ್ ಕಾರ್ಯನಿರ್ವಹಿಸುವದಲ್ಲಿ ವ್ಯತ್ಯಾಸ ಆರಂಭಗೊಂಡಿದೆ. ಸೆಕೆಂಡ್ ಸೆಕೆಂಡ್‌ಗೆ ಅಪಾಯದ ಮಟ್ಟ ಮೀರಿದೆ. ಕೆಲವೇ ನಿಮಿಷಗಳಲ್ಲಿ ಒಂದು ಎಂಜಿನ್ ಸ್ಥಗಿತಗೊಂಡಿದೆ. ಈ ವೇಳೆ ಪೈಲೆಟ್ ಪ್ಯಾನ್ ಪ್ಯಾನ್ ತುರ್ತು ಕರೆ ನೀಡಿದ್ದಾರೆ.
ಕಂಟ್ರೋಲ್ ರೂಂನಿಂದ ಎಮರ್ಜೆನ್ಸಿ ಲ್ಯಾಂಡಿಂಗ್‌ಗ ವ್ಯವಸ್ಥೆ
ಪೈಲೆಟ್ ಪ್ಯಾನ್ ಪ್ಯಾನ್ ಕರೆ ನೀಡಿದ ಬೆನ್ನಲ್ಲೇ ವಿಮಾನಕ್ಕೆ ತುರ್ತು ಲ್ಯಾಂಡಿಂಗ್ ಮಾಡಲು ಛತ್ರಪತಿ ಶಿವಾಜಿ ಮಹಾರಾಜ ವಿಮಾನ ನಿಲ್ದಾಣದ ಕಂಟ್ರೋಲ್ ರೂಂ ಅವಕಾಶ ಮಾಡಿದೆ. ಫೈರ್ ಎಂಜಿನ್ ಸೇರಿದಂತೆ ಎಲ್ಲಾ ತುರ್ತು ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ತುರ್ತು ಲ್ಯಾಂಡಿಂಗ್‌ಗೆ ರನ್ ವೇ ನಿಯೋಜನೆ ಮಾಡಲಾಗಿದೆ. ಇತ್ತ ಬೆಂಗಳೂರಿನತ್ತ ಹೊರಟ ವಿಮಾನ ಮತ್ತೆ ಮುಂಬೈನ ಛತ್ರಪತಿ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡಿಂಗ್ ಆಗಿದೆ.
ಏನಿಗು ಪ್ಯಾನ್ ಪ್ಯಾನ್ ಕರೆ (Pan-Pan)
ವಿಮಾನದಲ್ಲಿ ಪೈಲೆಟ್ ಪ್ರತಿ ತುರ್ತು ಅಗತ್ಯಕ್ಕೆ ವಿಶೇಷ ಸಂದೇಶಗಳನ್ನು ರವಾನಿಸುತ್ತಾರೆ. ಅಂತಾರಾಷ್ಟ್ರೀಯ ವಿಮಾನಯಾನದಲ್ಲಿ ಈ ಕೋಡ್‌ಗಳನ್ನು ಬಳಸಲಾಗುತ್ತದೆ. ಪ್ರತಿ ಕೋಡ್ ವರ್ಡ್ ಹಿಂದೆ ಅದರ ಗಂಭೀರತೆ ಇರುತ್ತದೆ. ಪ್ಯಾನ್ ಪ್ಯಾನ್(Pan-Pan) ಕುರ್ತು ಕರೆ ಎಂದರೆ ವಿಮಾನದಲ್ಲಿ ಗಂಭೀರ ತಾಂತ್ರಿಕ ದೋಷವಿದ್ದಾರೆ, ವಿಮಾನ ಹಾರಾಟ ಮುಂದುವರಿಸಿವುದು ಅತ್ಯಂತ ಅಪಾಯಕಾರಿ ಎಂದಾಗ, ಮರಳಿ ಲ್ಯಾಂಡಿಂಗ್ ಮಾಡಲು ಅಥವಾ ಹತ್ತಿರದ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ತುರ್ತು ಅವಕಾಶ ಕೋರಿ ಸಲ್ಲಿಸುವ ಕೋಡ್ ಸಂದೇಶವಾಗಿದೆ. ವಿಮಾನದಲ್ಲಿ ಮೇಡೇ(Mayday) ತುರ್ತು ಕರೆಯನ್ನು ಪ್ರಾಣಾಪಾಯ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಅಹಮ್ಮಾದಾಬಾದ್ ವಿಮಾನ ದುರಂತದಲ್ಲಿ ಪೈಲೆಟ್ ಕಳುಹಿಸಿದ ಕೊನೆಯ ಸಂದೇಶ ಮೇಡೇ ಆಗಿತ್ತು.
ಎಲ್ಲಾ ಪ್ರಯಾಣಿಕರು ಸುರಕ್ಷಿತ
ಏರ್ ಇಂಡಿಯಾ ವಿಮಾನ ಸುರಕ್ಷಿತವಾಗಿ ಮುಂಬೈನಲ್ಲಿ ಲ್ಯಾಂಡ್ ಆಗಿದೆ. ಎಲ್ಲಾ ಪ್ರಯಾಣಿಕರು, ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ತಾಂತ್ರಿಕ ಸಿಬ್ಬಿಂದಿಗಳು ಎಂಜಿನ್ ದೋಷ ಸರಿಪಡಿಸಿದ್ದಾರೆ.ಇತ್ತ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.


