ನೀಟ್​ ಪರೀಕ್ಷೆ ಅನ್ಯಾಯದ ವಿರುದ್ಧ ದೆಹಲಿಯ ಜಂತರ್​ಮಂತರ್​ನಲ್ಲಿ ಕಾಕ್ರೋಚ್​ ಜನತಾ ಪಕ್ಷವು ಪ್ರತಿಭಟನೆ ನಡೆಸಿತು. ಆದರೆ, ಪ್ರತಿಭಟನಾಕಾರರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬದಲಿಗೆ 'ಅಮಿತ್ ಪ್ರಧಾನ್' ರಾಜೀನಾಮೆಗೆ ಆಗ್ರಹಿಸಿ ನಗೆಪಾಟಲಿಗೀಡಾದರು. ಈ ಎಡವಟ್ಟಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲವೊಮ್ಮೆ ಪ್ರತಿಭಟನೆಗಳ ಸಮಯದಲ್ಲಿ ಪ್ರತಿಭಟನಾಕಾರರನ್ನು ದುಡ್ಡು ಕೊಟ್ಟು ಕರೆಸಿಕೊಳ್ಳುವುದು ಇದೆ. ಇದೇ ಕಾರಣಕ್ಕೆ ದುಡ್ಡು ಪಡೆದುಕೊಂಡು ಬರುವವರಿಗೆ ತಾವು ಯಾಕೆ ಬರುತ್ತಾ ಇದ್ದೇವೆ, ಯಾರ ಪರ-ಯಾರ ವಿರುದ್ಧ ಘೋಷಣೆ ಕೂಗಬೇಕು, ಇಲ್ಲಿ ಏನು ನಡೀತಿದೆ, ಸಮಸ್ಯೆ ಏನು, ಪ್ರತಿಭಟನೆ ಯಾಕೆ ಎನ್ನುವ ಅರಿವೇ ಇರುವುದಿಲ್ಲ. ದುಡ್ಡಿಗಾಗಿ ಬರುತ್ತಾರೆ, ದುಡ್ಡು ಕೊಟ್ಟೋರು ಹೇಳಿದವರ ಜೊತೆ ತಾವೂ ಧಿಕ್ಕಾರ ಧಿಕ್ಕಾರ ಎಂದು ಹೇಳಿ ತಮ್ಮ ಡ್ಯೂಟಿ ಮುಗಿಸಿ ಹೋಗುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿಭಟನಾಕಾರರ ಎಡವಟ್ಟು

ಆದರೆ ಕೆಲವೊಮ್ಮೆ ಮೀಡಿಯಾದವರು ಒಬ್ಬೊಬ್ಬರನ್ನೇ ಮಾತನಾಡಿಸಿದಾಗ, ಅವರ ಎದುರು ಮೈಕ್​ ಹಿಡಿದಾಗಲೇ ಬಂಡವಾಳ ಬಯಲಾಗಿಬಿಡುತ್ತದೆ. ಈ ಹಿಂದೆಯೂ ಸಾಕಷ್ಟು ಪ್ರತಿಭಟನೆಗಳಲ್ಲಿ ಹೀಗೆಯೇ ಆಗಿವೆ ಎನ್ನಿ. ಇದೀಗ ಕಾಕ್ರೋಚ್​ ಜನತಾ ಪಕ್ಷದ ಪ್ರತಿಭಟನೆಯ ಸರದಿ. ದೆಹಲಿಯ ಜಂತರ್​ಮಂತರ್​ನಲ್ಲಿ ನಡೆದಿದ್ದ ಈ ಪ್ರತಿಭಟನೆಯಲ್ಲಿ ಇಂಥದ್ದೊಂದು ಹಾಸ್ಯಾಸ್ಪದ ಘಟನೆ ನಡೆದಿದೆ. ಅಸಲಿಗೆ ಇದರ ಸಂಸ್ಥಾಪಕ, ಅಮೆರಿಕ ಮೂಲದ ಅಭಿಜೀತ್​ ಡಿಪ್ಕೆ ಅವರು ಭಾರತದ ಉದ್ಧಾರ ಮಾಡುವ ಘೋಷಣೆಯೊಂದಿಗೆ ಈ ಪಾರ್ಟಿ ಕಟ್ಟಿದ್ದಾರೆ. ನೀಟ್​ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ತಮ್ಮ ಹೋರಾಟ, ಆದ್ದರಿಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ನೀಡಬೇಕು ಎಂದು ಧ್ಯೇಯ ಇಟ್ಟುಕೊಂಡು ತಮ್ಮ ಹೋರಾಟ ಎಂದು ಭಾರತಕ್ಕೆ ಕಾಲಿಟ್ಟಿದ್ದಾರೆ.

ಯುಟ್ಯೂಬರ್​, ರೀಲ್ಸ್ ಮಾಡುವವರೇ ಅಧಿಕ

ಆದರೆ, ಅಸಲಿಗೆ ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಾಗಿ ಕಂಡದ್ದು ಯುಟ್ಯೂಬರ್​ಗಳು ಜೊತೆಗೆ ರೀಲ್ಸ್ ಮಾಡುವವರು ಹಾಗೂ ಇವರ ಪ್ರತಿಭಟನೆಯನ್ನು ಕವರ್​ ಮಾಡಲು ಬಂದ ಮಾಧ್ಯಮದವರು. ಅಲ್ಲಿ ಹುಡುಕಿದರೂ ವಿದ್ಯಾರ್ಥಿಗಳು ಕಂಡದ್ದು ಕಡಿಮೆಯೇ. ಈ ಪ್ರತಿಭಟನೆಯಲ್ಲಿ ಶಿಕ್ಷಣದ ವಿಷಯವೇ ಕಾಣಿಸಲಿಲ್ಲ. ಬದಲಿಗೆ ಒಂದಿಷ್ಟು ಮಂದಿ ಆಜಾದಿ ಆಜಾದಿ ಎಂದು ಕೂಗಿದ್ರೆ, ಮತ್ತೊಂದಿಷ್ಟು ಮಂದಿ ಬೇರೆಬೇರೆಯದ್ದೇ ವಿಷಯಗಳ ಬಗ್ಗೆ ಚರ್ಚೆ ಮಾಡಿದರು. ಇದರಿಂದಾಗಿ ಪ್ರತಿಭಟನೆಗೆ ಬಂದದ್ದು ಏಕೆ ಎನ್ನೋದನ್ನೇ ಮರೆತ ಹಾಗೆ ಕಾಣಿಸಿಸತು.

ಅಮಿತ್​ ಪ್ರಧಾನ್​ ವಿರುದ್ಧ ನಮ್ಮ ಪ್ರತಿಭಟನೆ!

ಅದೂ ಹೋಗಲಿ ಎಂದರೆ, ಅಲ್ಲಿ ಇರುವ ಪ್ರತಿಭಟನಾಕಾರರಿಗೆ ಮಾಧ್ಯಮದವರು ಮೈಕ್​ ಹಿಡಿದಾಗ, ನೀವು ಇಲ್ಲಿ ಏಕೆ ಬಂದಿದ್ದು ಎಂದರೆ, ಬಲು ಜೋಶ್​ನಿಂದ ಅವರು ಅಮಿತ್​ ಪ್ರಧಾನ್​ ವಿರುದ್ಧ ನಮ್ಮ ಹೋರಾಟ. ಅವರ ರಾಜೀನಾಮೆಗೆ ಬಂದಿರುವುದಾಗಿ ಹೇಳಿದ್ದಾನೆ. ಅಲ್ಲಿ ಇದ್ದವರು ಕೂಡ ಹೆಸರನ್ನು ಸರಿಪಡಿಸಲು ಹೋಗಲಿಲ್ಲ. ಏಕೆಂದರೆ ಅವರಿಗೂ ಅಸಲಿಗೆ ತಾವು ಯಾಕೆ ಬಂದಿದ್ದೇವೆ ಎನ್ನೋದೇ ತಿಳಿದಂತೆ ಇರಲಿಲ್ಲ! ಒಟ್ಟಿನಲ್ಲಿ ಅಮಿತ್​ ಪ್ರಧಾನ್​ ವಿರುದ್ಧ ಘೋಷಣೆ ಕೂಗುವುದರ ಜೊತೆ ಪ್ರತಿಭಟನಾಕಾರರು ತಾವು ಬಂದ ಕೆಲಸವನ್ನು ನಿಯತ್ತಿನಿಂದ ಮಾಡಿ ತೆರಳಿದರು. ಆದರೆ ಟ್ರೋಲರ್ಸ್​ ಬಿಡಬೇಕಲ್ಲ. ಈ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

View post on Instagram