ಮುಂಬೈ ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಬೇರೆ ಬೇರೆ ಪ್ರಕರಣದಲ್ಲಿ  ಸುಮಾರು 6.46 ಕೋಟಿ ಮೊತ್ತದ ಚಿನ್ನ ಹಾಗೂ ವಜ್ರವನ್ನು ವಶಕ್ಕೆ ಪಡೆದಿದ್ದಾರೆ. 

ಮುಂಬೈ: ಮುಂಬೈ ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಬೇರೆ ಬೇರೆ ಪ್ರಕರಣದಲ್ಲಿ ಸುಮಾರು 6.46 ಕೋಟಿ ಮೊತ್ತದ ಚಿನ್ನ ಹಾಗೂ ವಜ್ರವನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ಪ್ರಯಾಣಿಕರನ್ನು ಬಂಧಿಸಿದ್ದಾರೆ. ಆರೋಪಿಗಳು ನೂಡಲ್ಸ್‌ ಪ್ಯಾಕೇಟ್‌ನಲ್ಲಿ ಈ ಅಮೂಲ್ಯ ವಸ್ತುಗಳನ್ನು ತುಂಬಿಸಿ ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. 

ಒಟ್ಟು 4.44 ಕೋಟಿ ಮೊತ್ತದ 6.815 ಕೆಜಿ ಚಿನ್ನ ಹಾಗೂ 2.02 ಕೋಟಿ ಮೊತ್ತದ ಡೈಮಂಡ್‌ನ್ನು ವಶಕ್ಕೆ ಪಡೆಯಲಾಗಿದೆ . ವಜ್ರ ಸಾಗಣೆ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಈತ ನೂಡಲ್ಸ್ ಪ್ಯಾಕೇಟ್‌ನೊಳಗೆ ವಜ್ರ ಸಾಗಿಸುತ್ತಿದ್ದ, ಮುಂಬೈನಿಂದ ಬ್ಯಾಕಾಂಕ್‌ಗೆ ಹೊರಟಿದ್ದ. ಇದೇ ರೀತಿಯ ಮತ್ತೊಂದು ಕಳ್ಳ ಸಾಗಣೆ ಪ್ರಕರಣವೊಂದರಲ್ಲಿ ವಿದೇಶಿ ನಾಗರಿಕನೋರ್ವನನ್ನು ಬಂಧಿಸಲಾಗಿದೆ. ಆರೋಪಿ ಬಳಿ ಇದ್ದ 321 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಈತ ಶ್ರೀಲಂಕಾದ ಕೊಲಂಬೋದಿಂದ ಮುಂಬೈಗೆ ಆಗಮಿಸಿದ್ದ, ತನ್ನ ಒಳ ಉಡುಪಿನೊಳಗೆ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದ. 

ಬ್ಯಾಂಕಾಕ್‌ನಿಂದ ಹಾವು, ಕೋತಿ ಕಳ್ಳ ಸಾಗಣೆ: ಏರ್‌ಪೋರ್ಟ್‌ನಲ್ಲಿ ವಶಕ್ಕೆ

ಇದಲ್ಲದೇ ಒಟ್ಟು 10 ಭಾರತೀಯ ನಾಗರಿಕರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ದುಬೈನಿಂದ ಮತ್ತಿಬ್ಬರು ಅಬುಧಾಬಿಯಿಂದ ಹಾಗೂ ತಲಾ ಒಬ್ಬೊಬ್ಬರು ಬಹರೈನ್, ದೋಹಾ, ರಿಯಾದ್, ಮಸ್ಕತ್, ಬ್ಯಾಂಕಾಕ್‌ನಿಂದ ಬಂಧವರಾಗಿದ್ದಾರೆಎ. ಇವರೆಲ್ಲರಿಂದ ಒಟ್ಟಾಗಿ 6.199 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೊತ್ತ 4.04 ಕೋಟಿ. ದೇಹದ ಗುದನಾಳದಲ್ಲಿ ಇರಿಸಿ ಈ ಚಿನ್ನವನ್ನು ಆರೋಪಿಗಳು ಸಾಗಣೆ ಮಾಡಿದ್ದರು. ಇವರಲ್ಲಿ ಮೂವರನ್ನು ಬಂಧಿಸಲಾಗಿದೆ. 

ಬ್ಯಾಂಕಾಕ್‌ನಿಂದ ಬಂದವನ ಬ್ಯಾಗಲ್ಲಿತ್ತು ಹೆಬ್ಬಾವು, ಮೊಸಳೆ: ಏರ್ಪೋರ್ಟಲ್ಲಿ ಜಪ್ತಿ

Scroll to load tweet…