ಬ್ಯಾಂಕಾಕ್‌ನಿಂದ ಹಾವು, ಕೋತಿ ಕಳ್ಳ ಸಾಗಣೆ: ಏರ್‌ಪೋರ್ಟ್‌ನಲ್ಲಿ ವಶಕ್ಕೆ
ವಿದೇಶದಿಂದ ವನ್ಯಜೀವಿಗಳನ್ನು ಕಳ್ಳಸಾಗಣೆ ಮಾಡಿದ ಆರೋಪದಡಿ ಪ್ರಯಾಣಿಕನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರು (ಸೆ.8) : ವಿದೇಶದಿಂದ ವನ್ಯಜೀವಿಗಳನ್ನು ಕಳ್ಳಸಾಗಣೆ ಮಾಡಿದ ಆರೋಪದಡಿ ಪ್ರಯಾಣಿಕನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬ್ಯಾಂಕಾಕ್‌ನಿಂದ ಬುಧವಾರ ರಾತ್ರಿ ಕೆಐಎ ವಿಮಾನ ನಿಲ್ದಾಣ(KIA airport bengaluru)ಕ್ಕೆ ಬಂದು ಏರ್ ಏಷ್ಯಾ ವಿಮಾನದಲ್ಲಿ ಟ್ರಾಲಿ ಬ್ಯಾಗ್‌ನಲ್ಲಿ ತರಲಾಗಿದ್ದ ವಿವಿಧ ಬಣ್ಣದ 55 ಹೆಬ್ಬಾವು ಮರಿಗಳು, ಕಾಳಿಂಗ ಸರ್ಪದ 17 ಮರಿಗಳು ಹಾಗೂ 6 ಅಪರೂಪದ ಕೋತಿಮರಿಗಳು ಸೇರಿದಂತೆ ಒಟ್ಟು 78 ವನ್ಯಜೀವಿಗಳು ಪತ್ತೆಯಾಗಿವೆ. ಈ ಪೈಕಿ 72 ವನ್ಯಜೀವಿಗಳು ಜೀವಂತವಾಗಿದ್ದು, 6 ಕೋತಿಮರಿಗಳು ಸಾವನಪ್ಪಿವೆ.
ಜೀವಂತ ವನ್ಯಜೀವಿ(wildife)ಗಳನ್ನು ಮೂಲ ದೇಶಕ್ಕೆ ವಾಪಾಸ್ ಕಳುಹಿಸಲಾಗಿದೆ. ಮೃತ ವನ್ಯಜೀವಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ. ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಮಾವು ರಫ್ತಿನಲ್ಲಿ ದಾಖಲೆ ಬರೆದ ಕೆಂಪೇಗೌಡ ವಿಮಾನ ನಿಲ್ದಾಣ..!