ಕೋತಿ ಆಯ್ತು ನಾಯಿ ಆಯ್ತು ಈಗ ಕಾಗೆಗಳ ಬಸ್‌ ರೈಡ್ : ವೀಡಿಯೋ ಸಖತ್ ವೈರಲ್

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಗೆ ಬಂದ ನಂತರ ಕೋತಿಯೊಂದು ಬಸ್‌ನಲ್ಲಿ ಕಿಟಕಿ ಪಕ್ಕದ ಸೀಟಲ್ಲಿ ಕುಳಿತು ಪ್ರಯಾಣಿಸಿದ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. 

Mumbai After dog and monkey now group of crows traveling in bus video goes viral akb

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಗೆ ಬಂದ ನಂತರ ಕೋತಿಯೊಂದು ಬಸ್‌ನಲ್ಲಿ ಕಿಟಕಿ ಪಕ್ಕದ ಸೀಟಲ್ಲಿ ಕುಳಿತು ಪ್ರಯಾಣಿಸಿದ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಇದಕ್ಕೂ ಮೊದಲು ಮುಂಬೈ ಲೋಕಲ್ ಮೆಟ್ರೋದಲ್ಲಿ ನಾಯಿಯೊಂದು ಪ್ರತಿದಿನವೂ ಪ್ರಯಾಣಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈಗ ಬಸ್ ರೈಡ್ ಮಾಡುವ ಸರದಿ ಕಾಗೆಗಳದ್ದು. ಹೌದು ಮುಂಬೈ ಮಹಾನಗರಿಯಲ್ಲಿ ಇಂತದೊಂದು ಅಪರೂಪದ ದೃಶ್ಯ ಸೆರೆ ಆಗಿದೆ.

ಕೆಂಪು ಬಣ್ಣದ ಸರ್ಕಾರಿ ಬಸ್‌ನ ಟಾಪ್ ಮೇಲೆ ಕುಳಿತು ಕಾಗೆಗಳು ರೈಡ್ ಮಾಡುತ್ತಿದ್ದು, ನೋಡಲು ಮಜವಾಗಿದೆ. ಟ್ವಿಟ್ಟರ್‌ನಲ್ಲಿ ಕ್ರೌನಿಶ್ಟ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಸಾವಿರಾರು ಜನ ಈ ವೀಡಿಯೋ ನೋಡಿ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. 4 ಸೆಕೆಂಡ್‌ನ ವೀಡಿಯೋದಲ್ಲಿ ಕಾಣಿಸುವಂತೆ ಬೃಹನ್ಮುಂಬೈ ಇಲೆಕ್ಟ್ರಿಕ್ ಪೂರೈಕೆ ಹಾಗೂ ಸಾರಿಗೆ ಇಲಾಖೆಗೆ ಸೇರಿದ ಬಸ್‌ನ ಟಾಪ್ ಮೇಲೆ ಕಾಗೆಗಳು ಕುಳಿತಿದ್ದು, ಬಸ್ ಮುಂದೆ ಹೋಗುತ್ತಿದ್ದರೂ ಕದಲದೇ ಟಾಪ್ ಮೇಲೆ  ಪಯಣಿಸುತ್ತಿವೆ. ಈ ವೀಡಿಯೋ ಪೋಸ್ಟ್ ಮಾಡಿದವರು ಇವರೆಲ್ಲಿಗೆ ಹೋಗುತ್ತಿದ್ದಾರೆ ಎಂದು ಕ್ಯಾಪ್ಷನ್ ನೀಡಿದ್ದಾರೆ. 

ಪಾಠ ಕಲಿಸಲು ಕಾಗೆ ಕಟ್ಟಿ ಹಾಕಿದ ಚಿಕನ್ ಶಾಪ್ ಮಾಲೀಕನಿಗೆ ಕೆಲವೇ ಹೊತ್ತಲ್ಲಿ ಎದುರಾಯ್ತು ಸಂಕಷ್ಟ!

ನೋಡುಗರ ಕಾಮೆಂಟ್ ಹೀಗಿದೆ..

ಈ ವೀಡಿಯೋ ನೋಡಿದ ಒಬ್ಬರು ಕಾಗೆಗಳು ಮುಂಬೈ ದರ್ಶನಕ್ಕೆ ಹೊರಟಿರಬಹುದಾ ಎಂದು ಕಾಮೆಂಟ್ ಮಾಡಿದ್ದಾರೆ. ಮುಂಬೈ ಎಷ್ಟು ಅಭಿವೃದ್ಧಿ ಆಗಿದೆ ಎಂದರೆ ಮುಂಬೈನಲ್ಲಿ ಕಾಗೆಗಳು ಕೂಡ ಬಸ್‌ನಲ್ಲಿ ಓಡಾಡ್ತಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಬಹುಶ: ಈ ಕಾಗೆಗಳು ಮೀನು ಮಾರ್ಕೆಟ್‌ನತ್ತ ಹೊರಟಿರಬೇಕು ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ಇನ್ನೊಬ್ಬರು ದಕ್ಷಿಣ ಮುಂಬೈನ ಫೇಮಸ್ ಮಾರುಕಟ್ಟೆಯಾದ ಕ್ರೌವ್‌ಫೋರ್ಡ್‌ಗೆ ಈ ಕಾಗೆಗಳು ಹೋಗುತ್ತಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. 

ಬಹುಶಃ ಈ ದೃಶ್ಯಾವಳಿಯನ್ನು ಸಸೂನ್ ಡಾಕ್ಸ್ (ಧಕ್ಕೆ, ಮೀನು ಮಾರುಕಟ್ಟೆ) ಬಳಿ ಎಲ್ಲೋ ರೆಕಾರ್ಡ್ ಮಾಡಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಸಸೂನ್ ಧಕ್ಕೆ 1875 ರಲ್ಲಿ ಸ್ಥಾಪಿತವಾದ ಈ ಮೀನುಗಾರಿಕೆ ಬಂದರಾಗಿದ್ದು,  ಫ್ರೆಶ್ ಆಗಿರುವ ಸಮುದ್ರ ಆಹಾರ ಸಿಗುವ ಕಾರಣಕ್ಕಾಗಿ ಈ ಧಕ್ಕೆ ಸದಾ ಜನಜಂಗುಳಿಯಿಂದ ತುಂಬಿರುತ್ತದೆ.

ವರ್ಷಾಂತ್ಯಕ್ಕೆ ಮಿಲಿಯನ್‌ಗೂ ಅಧಿಕ ಭಾರತೀಯ ಕಾಗೆಗಳಿಗೆ ವಿಷಪ್ರಾಶನಕ್ಕೆ ಮುಂದಾದ ಕೀನ್ಯಾ ಸರ್ಕಾರ

ಹಾಗೆಯೇ ಇನ್ನೊಬ್ಬ ನೋಡುಗರು ಈ  ಕಾಗೆಗಳು ಬಹುಶಃ ಸಸೂನ್ ಧಕ್ಕೆಯತ್ತ ಹೋಗುತ್ತಿರಬೇಕು. ಮುಂಜಾನೆ ಬ್ರೇಕ್‌ಫಾಸ್ಟ್‌ಗೆ ಹೊಟ್ಟೆತುಂಬಾ ಮೀನು  ತಿಂದು ಬರಲು ಹೋಗುತ್ತಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರರು ಮರ್ಡರ್ ಆನ್ ದಿ ಬಸ್ ಎಂದು ಕಾಮೆಂಟ್ ಮಾಡಿದ್ದಾರೆ. ಏಕೆಂದರೆ ಕಾಗೆಗಳ ಗುಂಪನ್ನು ಮರ್ಡರ್ ಎಂದು ಕರೆಯುತ್ತಾರಂತೆ ಇದಕ್ಕೆ ಹಲವು ರೀತಿಯ ಜಾನಪದ ಇತಿಹಾಸವಿದೆ. 

ಕಾಗೆಗಳನ್ನು ಸಾಮಾನ್ಯವಾಗಿ ಕೆಟ್ಟ ಶಕುನ ಅಥವಾ ಸಾವಿನ ಶಕುನವೆಂದು ಯಮನ ಸಂದೇಶವಾಹಕನೆಂದು ಕೂಡ ಭಾವಿಸಲಾಗುತ್ತದೆ. ಹಿಂದೂ ಧರ್ಮ ಪುರಾಣಗಳಲ್ಲಿ ಉಲ್ಲೇಖಿತವಾಗಿರುವಂತೆ ಕಾಗೆಗಳು ಶನಿಯ ವಾಹನವಾಗಿವೆ. ಆದರೆ ವಾಸ್ತವದಲ್ಲಿ ಕಾಗೆಗಳು ಪಕ್ಷಿಗಳಲ್ಲೇ ಅತೀ ಬುದ್ಧಿವಂತ ಪಕ್ಷಿಗಳು. 2 ವರ್ಷದ ಮಗುವಿನ ಬುದ್ಧಿವಂತಿಕೆ ಈ ಪುಟ್ಟ ಹಕ್ಕಿಗಿದೆ ಎಂಬುದು ಸಂಶೋಧನೆಗಳಲ್ಲಿ ಸಾಬೀತಾಗಿದೆ. 

ಕಾಗೆಗಳು ಬಸ್ ಟಾಪ್‌ನಲ್ಲಿ ಪ್ರಯಾಣಿಸುತ್ತಿರುವ ವೀಡಿಯೋ ಇಲ್ಲಿದೆ ನೋಡಿ

 

Latest Videos
Follow Us:
Download App:
  • android
  • ios