Asianet Suvarna News Asianet Suvarna News

ಪಾಠ ಕಲಿಸಲು ಕಾಗೆ ಕಟ್ಟಿ ಹಾಕಿದ ಚಿಕನ್ ಶಾಪ್ ಮಾಲೀಕನಿಗೆ ಕೆಲವೇ ಹೊತ್ತಲ್ಲಿ ಎದುರಾಯ್ತು ಸಂಕಷ್ಟ!

ಚಿಕನ್ ಶಾಪ್‌ಗೆ ಪದೇ ಪದೇ ಲಗ್ಗೆ ಇಡುತ್ತಿದ್ದ ಕಾಗೆಗೆ ಪಾಠ ಕಲಿಸಲು ಮಾಲೀಕ ಮುಂದಾಗಿದ್ದಾನೆ. ಕಾಗೆಯನ್ನು ಹಿಡಿದು ದಾರದಲ್ಲಿ ಕಟ್ಟಿ ಹಾಕಿದ್ದಾನೆ. ಆದರೆ ಕೆಲವೇ ಹೊತ್ತಲ್ಲಿ ಮಾಲೀಕ ಕಾಗೆಯನ್ನು ಬಿಟ್ಟು ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕಾಗೆಯ ಕೂಗಿಗೆ ನೂರಾರು ಕಾಗೆ ಜಮಾಯಿಸಿತ್ತು. ಇದು ಅಚ್ಚರಿಯಾದರೂ ಸತ್ಯ, ಈ ವೈರಲ್ ವಿಡಿಯೋ ಇಲ್ಲಿದೆ.
 

Chicken shop owner frees crow after 100s of bird gathered to rescue tied bird Andhra Pradesh ckm
Author
First Published Jul 18, 2024, 3:44 PM IST | Last Updated Jul 18, 2024, 3:44 PM IST

ಗೋದಾವರಿ(ಜು.18) ಚಿಕನ್ ಸೇರಿದಂತೆ ಮಾಂಸಾಹಾರಿ ಅಂಗಡಿಗಳ ಪಕ್ಕ ಕಾಗೆ, ಹದ್ದುಗಳು ಹಾರಾಟ, ಕೂಗಾಟ ಹೊಸದೇನಲ್ಲ. ಸುಲಭದಲ್ಲಿ ಮಾಂಸ ಸಿಗುವ ಕಾರಣ ಕಾಗೆ, ಹದ್ದು ಈ ಸ್ಥಳದಲ್ಲೇ ಹಾರಾಡುತ್ತಿರುತ್ತದೆ. ಆದರೆ ಕಾಗೆಯ ಹಾರಾಟ ಮಾತ್ರವಲ್ಲ, ಕೂಗಾಟ ಚಿಕನ್ ಶಾಪ್ ಮಾಲೀಕನ ತಾಳ್ಮೆ ಪರೀಕ್ಷಿಸಿದೆ. ಪ್ರತಿ ದಿನ ಒಂದು ಕಾಗೆ ಚಿಕನ್ ಶಾಪ್ ಪಕ್ಕ, ಅಂಗಡಿ ಮೇಲ ಕುಳಿತು ಕೂಗುತ್ತಿತ್ತು. ಚಿಕನ್ ವೇಸ್ಟ್‌ಗಳನ್ನು ಹಾಕಿದರೆ ಗಬಕ್ಕನೆ ತಿಂದು ಮತ್ತೆ ಅದೆ ಕೂಗಾಟ. ಇದರಿಂದ ರೋಸಿ ಹೋದ ಚಿಕನ್ ಶಾಪ್ ಮಾಲೀಕ ಕಾಗೆಗೆ ಚಿಕನ್ ಆಸೆ ತೋರಿಸಿ ಹಿಡಿದಿದ್ದಾನೆ. ಬಳಿಕ ದಾರದಿಂದ ಕಟ್ಟಿ ಹಾಕಿದ್ದಾರೆ. ಆದರೆ ಕಟ್ಟಿ ಹಾಕಿದ ಕೆಲವೇ ಹೊತ್ತಲ್ಲಿ ಚಿಕನ್ ಶಾಪ್ ಮಾಲೀಕನಿಗೆ ಸಂಕಷ್ಟ ಎದುರಾಗಿದೆ. ಕಾಗೆಗೆ ಹೆದರಿ ಕಟ್ಟಿ ಹಾಕಿದ ಕಾಗೆಯನ್ನು ಮುಕ್ತಿಗೊಳಿಸಿದ ಘಟನೆ ಆಂಧ್ರ ಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ನಡೆದಿದೆ.  ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಕೋನಸೀಮಾ ಬಳಿಯ ಮಾರ್ಕೆಟ್‌ನಲ್ಲಿ ಈ ಘಟನೆ ನಡೆದಿದೆ. ಚಿಕನ್ ಶಾಪ್ ಮಾಲೀಕನಿಗೆ ಕಾಗೆಯ ಉಪಟಳಕ್ಕೆ ಬ್ರೇಕ್ ಹಾಕಲು ಹೊಸ ಐಡಿಯಾ ಮಾಡಿದ್ದಾನೆ. ಪ್ರತಿ ದಿನ ಕಾಗೆಗಳು ಈತನ ಚಿಕನ್ ಶಾಪ್ ಮೇಲೆ ಕುಳಿತು ಕೂಗಲು ಆರಂಭಿಸುತ್ತದೆ. ಈ ಶಬ್ದ ಚಿಕನ್ ಶಾಪ್ ಮಾಲೀಕನಿಗೆ ಕರ್ಕಶವಾಗಿತ್ತು. ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿತ್ತು ಅನ್ನೋ ಕಾರಣಕ್ಕೆ ಕಾಗೆಯನ್ನು ಕೂಗಾಟಕ್ಕೆ ಬ್ರೇಕ್ ಹಾಕಲು ಈತ ಮುಂದಾಗಿದ್ದಾನೆ.

ವರ್ಷಾಂತ್ಯಕ್ಕೆ ಮಿಲಿಯನ್‌ಗೂ ಅಧಿಕ ಭಾರತೀಯ ಕಾಗೆಗಳಿಗೆ ವಿಷಪ್ರಾಶನಕ್ಕೆ ಮುಂದಾದ ಕೀನ್ಯಾ ಸರ್ಕಾರ

ಚಿಕನ್ ವೇಸ್ ಪೀಸ್ ಮುಂದಿಟ್ಟು ಕಾಗೆಯನ್ನು ಚಿಕನ್ ಶಾಪ್ ಹತ್ತಿರಬರುವಂತೆ ಮಾಡಿದ್ದಾನೆ. ಬಳಿಕ ಕಾಗೆಯನ್ನು ಉಪಾಯದಿಂದ ಹಿಡಿದಿದ್ದಾನೆ. ಹಿಡಿದ ಕಾಗೆಯನ್ನು ದಾರದ ಮೂಲಕ ಕಾಲು ಕಟ್ಟಿ ಹಾಕಿದ್ದಾನೆ. ಕಾಗೆ ತಾನು ಸಂಕಷ್ಟದಲ್ಲಿ ಸಿಲುಕಿರುವುದು ಗೊತ್ತಾಗಿದೆ. ಹಲವು ಪ್ರಯತ್ನ ನಡೆಸಿದರೂ ಕಾಗೆಗೆ ಸ್ವಚ್ಚಂದವಾಗಿ ಹಾರಲು ಸಾಧ್ಯವಾಗಿಲ್ಲ. ಅಷ್ಟರಲ್ಲೇ ಕಾಗೆ ವಿಶೇಷ ರೀತಿಯಲ್ಲಿ ಕೂಗಲು ಆರಂಭಿಸಿದೆ. 

 

;

 

ಕಾಗೆಯ ಪ್ರಯತ್ನ, ಕೂಗಾಟವನ್ನು ಚಿಕನಿ ಮಾಲೀಕ ಹಾಗೂ ಆತನ ಸಿಬ್ಬಂದಿಗಳು ನೋಡುತ್ತಲೆ ತಮ್ಮ ಕೆಲಸ ಮುಂದುವರಿಸಿದ್ದಾರೆ. ಈ ಬಾರಿ ಕಾಗೆಯ ಕೂಗಾಟ ಅಂತ್ಯಗೊಳಿಸಬೇಕು ಎಂದು ಮಾಲೀಕ ನಿರ್ಧರಿಸಿದೆ. ಕೂಗಿ ಕೂಗಿ ಮತ್ತೆ ಈ ಪರಿಸರದಲ್ಲಿ ಕೂಗಬಾರದು ಅನ್ನೋದು ಮಾಲೀಕನ ನಿರ್ಧಾರವಾಗಿತ್ತು. ಆದರೆ ಕಟ್ಟಿ ಹಾಕಿದ ಕಾಗೆ ವಿಶೇಷ ರೀತಿಯಲ್ಲಿ ಕೂಗುತ್ತಿದ್ದಂತೆ ನೂರಾರು ಕಾಗೆಗಳು ನೆರವಿಗೆ ಧಾವಿಸಿದೆ. ಚಿಕನ್ ಶಾಪ್ ಮೇಲೆ, ಆಗಸದಲ್ಲಿ, ಸುತ್ತ ಮುತ್ತ ಕಾಗೆಗಳ ರಾಶಿ ಪತ್ತೆಯಾಗಿದೆ. ಒಂದೇ ಸಮನೆ ಎಲ್ಲಾ ಕಾಗೆಗಳು ಕೂಗಲು ಆರಂಭಿಸಿದೆ.

ಮಾರುಕಟ್ಟೆಯ ಇತರ ಶಾಪ್ ಮಾಲೀಕರು ಗಾಬರಿಗೊಂಡಿದ್ದಾರೆ. ಕಾಗೆಗಳು ಈ ಪಾಟಿ ಯಾಕೆ ಕೂಗುತ್ತಿವೆ ಅನ್ನೋದು ಅರ್ಥವಾಗಿಲ್ಲ. ಇತ್ತ ಚಿಕನ್ ಶಾಪ್ ಪಕ್ಕ ಒಂದು ಕಾಗೆಯ ಕೂಗಾಟದ ಬದಲು ನೂರಾರು ಕಾಗೆ ಒಂದೇ ಸಮನೆ ಶಬ್ದ ಮಾಡಲು ಆರಂಭಿಸಿದೆ. ಈ ಶಬ್ದಕ್ಕೆ ಮಾಲೀಕನ ಸಂಕಷ್ಟ ಹೆಚ್ಚಾಗಿದೆ. ಕಾಗೆಗಳ ದಂಡು ಹೆಚ್ಚಾಗುತ್ತಲೇ ಹೋಗಿದೆ. ಇತ್ತ ಇತರ ಶಾಪ್ ಮಾಲೀಕರಿಗೂ ಕಾಗೆಯ ಶಬ್ದಗಳು ಕಿರಿಕಿರಿ ತರಲು ಆರಂಭಿಸಿದೆ. ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಅರಿತ ಚಿಕನ್ ಶಾಪ್ ಮಾಲೀಕ ಕಾಗೆಯನ್ನು ದಾರದಿಂದ ಬಂಧಮುಕ್ತಗೊಳಿಸಿದ್ದಾನೆ. 

ನಿಮ್ಮ ಮನೆಯ ಈ ದಿಕ್ಕಿನಲ್ಲಿ ಕಾಗೆ ಕುಳಿತು ಕಿರುಚಿದರೆ, ಹುಷಾರಾಗಿರಿ!
 

Latest Videos
Follow Us:
Download App:
  • android
  • ios