Asianet Suvarna News Asianet Suvarna News

ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಗಂಭೀರ, ನಾಯಕರು ಆಸ್ಪತ್ರೆಗೆ ದೌಡು!

ಅನಾರೋಗ್ಯ ಕಾರಣ ಆಸ್ಪತ್ರೆ ದಾಖಲಾಗಿರುವ ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 

Mulayam singh yadav health condition critical still on life saving drugs in ICU says medanta hospital gurgaon ckm
Author
First Published Oct 6, 2022, 5:45 PM IST

ನವದೆಹಲಿ(ಅ.06): ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾದ ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 82 ವರ್ಷದ ಹಿರಿಯ ನಾಯಕ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹರ್ಯಾಣದ ಮೇದಾಂತ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಲೈಫ್ ಸೇವಿಂಗ್ಸ್ ಬೆಂಬಲದ ಮೂಲಕ  ಮುಲಾಯಂ ಸಿಂಗ್ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆ ಹೇಳಿದೆ. ಮುಲಾಯಂ ಆರೋಗ್ಯ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಹಲವು ನಾಯಕರು ಮೇದಾಂತ ಆಸ್ಪತ್ರೆಗೆ ದೌಡಾಯಿಸಿದ್ದಾರೆ. 

ಸೆಪ್ಟೆಂಬರ್ 22 ರಂದು ಮುಲಾಯಂ ಸಿಂಗ್ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆ ತೀವ್ರಗೊಂಡ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಈ ಹಿಂದೆ 2021ರ ಜುಲೈನಲ್ಲೂ ಆವರು ಆರೋಗ್ಯ ಸಮಸ್ಯೆ ಕಾಣಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚಿನ ದಿನದಲ್ಲಿ ಅವರು ಹೆಚ್ಚಾಗಿ ಬಹಿರಂಗವಾಗಿ ಕಾಣಿಸಲ್ಲ. ಎಲ್ಲವನ್ನೂ ತಮ್ಮ ಮಗ ಅಖಿಲೇಶ್‌ ಯಾದವ್‌ಗೆ ಅವರು ಬಿಟ್ಟುಕೊಟ್ಟಿದ್ದಾರೆ. ಮುಲಾಯಂ ದೇಹಸ್ಥಿತಿ ವಿಷಯ ಗೊತ್ತಾಗುತ್ತಿದ್ದಂತೆಯೇ ನೋಯ್ಡಾಗೆ ಅಖಿಲೇಶ್‌ ಯಾದವ್‌, ಮುಲಾಯಂ ಸೋದರ ಶಿವಪಾಲ್‌ ಯಾದವ್‌ ದೌಡಾಯಿಸಿದ್ದಾರೆ. 

Mulayam singh yadav health condition critical still on life saving drugs in ICU says medanta hospital gurgaon ckm

ಸಾಧನಾ ಗುಪ್ತಾ, ಮುಲಾಯಂ ಪ್ರೀತಿಗೆ ನಾಂದಿಯಾಯ್ತು ಆ ಘಟನೆ, ವರ್ಷಾನುಗಟ್ಟಲೇ ಸಂಬಂಧ ಮುಚ್ಚಿಟ್ಟಿದ್ದ ಮಾಜಿ ಸಿಎಂ!

ಮುಲಾಯಂಗೆ ಎಲ್ಲ ವೈದ್ಯಕೀಯ ನೆರವು: ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಅಖಿಲೇಶ್‌ ಯಾದವ್‌ ಅವರಿಗೆ ಫೋನ್‌ ಮಾಡಿ ಮುಲಾಯಂ ಆರೋಗ್ಯದ ಬಗ್ಗೆ ವಿಚಾರಿಸಿದರು. ಸಾಧ್ಯವಾದ ಎಲ್ಲವ ವೈದ್ಯಕೀಯ ನೆರವು ನೀಡುವ ಭರವಸೆ ನಿಡಿದರು ಎಂದು ಮೂಲಗಳು ಹೇಳಿವೆ.

ರಾಷ್ಟ್ರಪತಿ ಚುನಾವಣೆ ವೇಳೆ ಕಾಣಿಸಿಕೊಂಡಿದ್ದ ಮುಲಾಯಂ ಸಿಂಗ್
ಮುಲಾಯಂ ಸಿಂಗ್ ಯಾದವ್ ಆರೋಗ್ಯ ಕ್ಷೀಣಿಸಿರುವ ಕಾರಣ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕೊನೆಯದಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಣಿಸಿಕೊಂಡಿದ್ದರು. ಮುಲಾಯಂ ಸಿಂಗ್ ಯಾದವ್ ಗಾಲಿ ಕುರ್ಚಿಯಲ್ಲಿ ಆಗಮಿಸಿ ಮತ ಚಲಾಯಿಸಿದ್ದರು.   ಮುಲಾಯಂ ಸಿಂಗ್‌ ಅವರನ್ನು ಅವರ ಸಹೋದರ ರಾಮ್‌ ಗೋಪಾಲ್‌ ಯಾದವ್‌ ಅವರು ಗಾಲಿ ಕುರ್ಚಿಯಲ್ಲಿ ಕರೆತಂದು ಮತದಾನ ಮಾಡಿಸಿದ್ದರು. ಇದಾದ ಬಳಿಕ ಮುಲಾಯಂ ಸಿಂಗ್ ಆರೋಗ್ಯ ಕ್ಷೀಣಿಸಿದೆ. 
 

Follow Us:
Download App:
  • android
  • ios