Asianet Suvarna News Asianet Suvarna News

ಕೇರಳದಲ್ಲಿ ಒಂದೇ ದಿನ 115 ಕೋವಿಡ್ ಪ್ರಕರಣ ಪತ್ತೆ, ಸಿಂಗಾಪುರದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ!

ಭಾರತದಲ್ಲಿ ಮತ್ತೆ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪೈಕಿ ಕೇರಳದಲ್ಲಿ ಗರಿಷ್ಠ ಪ್ರಕರಣಗಳು ಪತ್ತೆಯಾಗುತ್ತಿದೆ. ಇಂದು ಒಂದೇ ದಿನ 115 ಕೋವಿಡ್ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ. ಇದು ಕರ್ನಾಟಕದ ಆತಂಕ ಹೆಚ್ಚಿಸಿದೆ.

Kerala Report 115 covid 19 cases in last 24 hours touched 1749 active cases ckm
Author
First Published Dec 19, 2023, 8:07 PM IST

ನವದೆಹಲಿ(ಡಿ.19) ಕೋವಿಡ್ ಎಚ್ಚರಿಕೆ ಗಂಟೆ ಬಾರಿಸುತ್ತಿದೆ. ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪೈಕಿ ಕೇರಳದಲ್ಲಿ ಗರಿಷ್ಠ ಪ್ರಕರಣ ದಾಖಲಾಗುತ್ತಿದೆ. ಇಂದು ಒಂದೇ ದಿನ 115 ಕೋವಿಡ್ ಪ್ರಕರಣ ಕೇರಳದಲ್ಲಿ ದಾಖಲಾಗಿದೆ. ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1749ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಇಂದು ಒಟ್ಟು 142 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಈ ಪೈಕಿ 115 ಕೇರಳದಲ್ಲೇ ಪತ್ತೆಯಾಗಿದೆ. ಇದು ಆತಂಕ ಹೆಚ್ಚಿಸಿದೆ. ಕೇರಳದಲ್ಲಿ ದಿಢೀರ್ ಕೋವಿಡ್ ಏರಿಕೆಯಿಂದ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಭಾರತದಲ್ಲಿ ಕೋವಿಡ್ ಏರಿಕೆಯಾಗುತ್ತಿದ್ದರೆ, ಸಿಂಗಾಪುರದಲ್ಲಿ ಕೋವಿಡ್ ಗಣನೀಯವಾಗಿ ಏರಿಕೆಯಾಗಿದೆ. ಒಂದು ವಾರದಲ್ಲಿ 56,000 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಸಿಂಗಾಪುರದಲ್ಲಿ ಮತ್ತೆ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ.

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಕೋವಿಡ್ ಏರಿಕೆಯಾಗಿದೆ ನಿಜ. ಆದರೆ ಸಮಾಧಾನಕರ ವಿಷಯ ಅಂದರೆ ಯಾವುದೇ ಸಾವು ಸಂಭವಿಸಿಲ್ಲ. ಇನ್ನು ಕಳೆದ 24 ಗಂಟೆಯಲ್ಲಿ 112 ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನಿಂದ ಕರ್ನಾಟಕದಲ್ಲಿ ಆತಂಕ ಹೆಚ್ಚಾಗಿದೆ. 

ದೇಶದಲ್ಲಿ ಮತ್ತೆ ಕೊವಿಡ್ ಪ್ರಕರಣ ಹೆಚ್ಚಳ; ಆರೋಗ್ಯ; ಆರೋಗ್ಯ ಇಲಾಖೆ ಹೈ ಅಲರ್ಟ್!

ಕರ್ನಾಟಕಕ್ಕೆ ಮರಳುತ್ತಿರುವ ಅಯ್ಯಪ್ಪ ಭಕ್ತರ ಮೇಲೆ ನಿಗಾವಹಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕೋವಿಡ್ ತಪಾಸಣೆ, ಲಕ್ಷಣ ಕಂಡುಬಂದವರನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡಲು ಸರ್ಕಾರ ಸೂಚನೆ ನೀಡಿದೆ. ಎಲ್ಲಾ ಜಿಲ್ಲಾಸ್ಪತ್ರೆಗಳು ಸನ್ನದ್ಧವಾಗಿರುವಂತೆ ಎಚ್ಚರಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. 

ಕೇರಳದಲ್ಲಿ ಜೆನ್.1 ಹೊಸ ತಳಿ ಪತ್ತೆಯಾಗಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಜೆಎನ್‌.1 ರೂಪಾಂತರಿ ವೈರಸ್‌ ಮೊದಲು ಐರೋಪ್ಯ ದೇಶವಾದ ಲುಕ್ಶಂಬರ್ಗ್‌ನಲ್ಲಿ ಪತ್ತೆಯಾಗಿತ್ತು. ಬಳಿಕ ವಿಶ್ವದ ಹಲವು ದೇಶಗಳಿಗೆ ವ್ಯಾಪಿಸಿದೆ. ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಸಿಂಗಾಪುರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರಲ್ಲಿ ಅ.25ರಂದು ಇದೇ ಸೋಂಕು ಕಂಡುಬಂದಿತ್ತು. ಆದರೆ ತಿರುಚಿರಾಪಳ್ಳಿ ಅಥವಾ ತಮಿಳುನಾಡಿನ ಇತರೆ ಯಾವ ಭಾಗದಲ್ಲೂ ಈ ಸೋಂಕು ಪತ್ತೆಯಾಗಿರಲಿಲ್ಲ. ದೇಶಾದ್ಯಂತ ಕೂಡ ಈ ಸೋಂಕು ದೃಢಪಟ್ಟಿರಲಿಲ್ಲ.

ದಿಢೀರ್ ಕೋವಿಡ್ ಏರಿಕೆ; ಕೇರಳದಲ್ಲಿ ದೇಶದ ಶೇ.90 ರಷ್ಟು ಪ್ರಕರಣ ದಾಖಲು, 2 ಸಾವು!

ಇತ್ತೀಚೆಗೆ ಚೀನಾ ಮತ್ತು ಅಮೆರಿಕದಲ್ಲಿ ಇದೇ ವೈರಸ್‌ ಕಾಣಿಸಿಕೊಂಡಿತ್ತು. ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಂಡಿದ್ದ ಸೋಂಕಿನಿಂದಾಗಿ ಆಸ್ಪತ್ರೆಗಳೆಲ್ಲಾ ತುಂಬಿತುಳುಕುವ ಪರಿಸ್ಥಿತಿ ನಿರ್ಮಾಣವಾಗಿ 2020ರ ಕರಾಳ ದಿನಗಳು ನೆನಪಾಗುವಂತಾಗಿತ್ತು.


 

Latest Videos
Follow Us:
Download App:
  • android
  • ios