ಹರಿಯಾಣ(ಜೂ.03): ಸಂಬಂಧಗಳ ಕುರಿತು ಭಾರತದಲ್ಲಿ ಪ್ರತಿ ದಿನ ಅದೆಷ್ಟು ವಿಚಾರಣೆ, ತೀರ್ಪು ನಡೆಯುತ್ತಿದೆ ಅನ್ನೋದನ್ನು ಊಹಿಸಲು ಸಾಧ್ಯವಿಲ್ಲ. ಹೀಗಿ ಹರಿಯಾಣ ಪಂಜಾಬ್ ಹೈಕೋರ್ಟ್ ನೀಡಿದ ಆದೇಶವೊಂದು ಇದೀಗ ಭಾರಿ ಚರ್ಚೆಯಾಗುತ್ತಿದೆ. ಅದು ಅಕ್ರಮ ಸಂಬಂಧ ಹಾಗೂ ತಾಯಿ ಕುರಿತ ಮಹತ್ವದ ಆದೇಶ ನೀಡಿದೆ.

ಲೀವ್ ಇನ್ ರಿಲೇಶನ್‌ಶಿಪ್ ನೈತಿಕವಾಗಿ, ಸಾಮಾಜಿಕವಾಗಿ ಒಪ್ಪಲು ಸಾಧ್ಯವಿಲ್ಲ; ಹೈಕೋರ್ಟ್!

ಅಕ್ರಮ ಸಂಬಂಧ ಹೊಂದಿದೆ ಮಹಿಳೆಯನ್ನು ಕೆಟ್ಟ ತಾಯಿ ಎಂದು ಪರಿಗಣಿಸುವುದಿಲ್ಲ. ಈ ಕಾರಣಕ್ಕೆ ಮಕ್ಕಳ ಆರೈಕೆಯಿಂದ ಆಕೆಯನ್ನು ವಂಚಿತಳನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಇದೇ ಆದೇಶ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

ಒರ್ವ ಮಹಿಳೆ ಆಕ್ರಮ ಸಂಬಂಧ ಹೊಂದಿದ್ದರೆ ಆಕೆಯನ್ನು ಕೆಟ್ಟ ತಾಯಿ ಎಂದು ಪರಿಗಣಿಸಲು ಸಾಧ್ಯಿವಿಲ್ಲ. ಈ ಕಾರಣಕ್ಕಾಗಿ ಆಕೆಯಿಂದ ಮಕ್ಕಳನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಜಸ್ಟೀಸ್ ಅನುಪಿಂದರ್ ಸಿಂಗ್ ಗ್ರೆವಾಲ್ ಆದೇಶ ನೀಡಿದ್ದಾರೆ.

ಪತೇಗ್ರಹ ಸಾಹೀಬ್ ವಲಯದಿಂದ ಮಹಿಳೆಯೊಬ್ಬರು ಸಲ್ಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ಅನುಪಿಂದರ್ ಸಿಂಗ್ ಈ ಆದೇಶ ನೀಡಿದ್ದಾರೆ. ಈ ಮಹಿಳೆ ಅಮೆರಿಕದ ಪ್ರಜೆಯಾಗಿದ್ದಾರೆ.

ಕೊರೋನಾಗೆ ಆಂಧ್ರದ ಹಳ್ಳಿಮದ್ದು, ಸರ್ಕಾರಕ್ಕೆ ಕೋರ್ಟ್‌ ಮಹತ್ವದ ಆದೇಶ!

ಅಕ್ರಮ ಸಂಬಂಧ ಕಾರಣ ಹೇಳಿ ಈ ಮಹಿಳೆಯಿಂದ ತನ್ನ ನಾಲ್ಕೂವರೆ ವರ್ಷದ ಮಗಳನ್ನು ತಂದೆ ಕರೆದೊಯ್ದಿದ್ದರು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆಗೆ ಗೆಲುವು ಸಿಕ್ಕಿದೆ. ಇದೀಗ ಕೋರ್ಟ್ ಅಕ್ರಮ ಸಂಬಂಧ ಕಾರಣ ಹೇಳಿ ಆಕೆಯನ್ನು ಕೆಟ್ಟ ತಾಯಿ ಎಂದು ಪರಿಗಣಿಸುವುದು ತಪ್ಪು. ಹೀಗಾಗಿ ಮಗಳನ್ನು ಆಕೆಗೆ ಒಪ್ಪಿಸಿ ಎಂದು ಕೋರ್ಟ್ ಸೂಚಿಸಿದೆ.