ಮಧ್ಯಪ್ರದೇಶ: ಹುಲಿಯೊಂದಿಗೆ ಸೆಣಸಾಡಿ 15 ತಿಂಗಳ ಮಗುವನ್ನು ರಕ್ಷಿಸಿದ ತಾಯಿ

Mother fights off tiger to save baby: ಹುಲಿಯೊಂದಿಗೆ ಸೆಣಸಾಡಿ 25 ವರ್ಷದ ತಾಯಿ ತನ್ನ ಮಗುವನ್ನು ರಕ್ಷಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭಾನುವಾರ ನಡೆದಿದೆ. 

Mother fights off tiger to save her 15 month baby in Bhopal Madhya Pradesh mnj

ಭೋಪಾಲ್‌ (ಸೆ. 06):  ಹುಲಿಯೊಂದಿಗೆ ಸೆಣಸಾಡಿ 25 ವರ್ಷದ ತಾಯಿ ತನ್ನ ಮಗುವನ್ನು ರಕ್ಷಿಸಿದ ಘಟನೆ ಭೋಪಾಲ್‌ನ  ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಹುಲಿ ದಾಳಿ ತನ್ನ ಮೇಲೆ ನಡೆಸುತ್ತಿದ್ದರೂ, ನಿರಾಯುಧವಾಗಿ ಹೋರಾಡಿ ಮಗುವನ್ನು ತಾಯಿ ರಕ್ಷಿಸಿದ್ದಾಳೆ. ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿದ್ದು ಶೀಘ್ರದಲ್ಲೆ ಡಿಸ್ಜಾರ್ಜ್‌ ಆಗಲಿದ್ದಾರೆ.  15 ತಿಂಗಳ ಮಗುವಿನ ತಲೆಯ ಮೇಲೆ ಗಾಯಗಳಾಗಿವೆ. ತಾಯಿ ಅರ್ಚನಾ ಚೌಧರಿ ಶ್ವಾಸಕೋಶಕ್ಕೆ  ಮತ್ತು ಹೊಟ್ಟೆಗೆ ಆಳವಾದ ಗಾಯಗಳಾಗಿವೆ.  ಕೆಲ ಕಾಲ ತಾಯಿ ಅರ್ಚನಾ ಸ್ಥಿತಿ ಚಿಂತಾಜನಕವಾಗಿತ್ತು ಆದರೆ ಸೋಮವಾರ ಸಂಜೆಯ ವೇಳೆಗೆ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. 

ಅರ್ಚನಾ ತನ್ನ ಕುಟುಂಬದೊಂದಿಗೆ ಉಮಾರಿಯಾ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಮಾಲಾ ಬೀಟ್ ಅಡಿಯಲ್ಲಿ ಬರುವ ರೊಹಾನಿಯಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಪೊದೆಯಿಂದ ಜಿಗಿದು ಹುಲಿ ಮಗುವಿನ ಮೇಲೆ ದಾಳಿ ನಡೆಸಿದಾಗ ಸಮಾಧಾನಪಡಿಸಲು ಮಗ ರವಿರಾಜ್‌ನನ್ನು ಗುಡಿಸಲಿನಿಂದ ಹೊರಗೆ ಕರೆದುಕೊಂಡು ಬಂದಿದ್ದಳು. 

ಈ ವೇಳೆ ಹುಲಿ ಮಗುವಿನ ತಲೆ ಹಾಗೂ ಕುತ್ತಿಗೆ ಭಾಗದ ಮೇಲೆ ದಾಳಿ ಮಾಡಿದ್ದು ತಾಯಿ ರಕ್ಷಣೆಗೆ ಮುಂದಾಗಿದ್ದಾಳೆ. ಅರ್ಚನಾ ತನ್ನ ಬರಿಗೈಯಲ್ಲಿ ಹುಲಿಯೊಂದಿಗೆ ಹೋರಾಡಲು ಮತ್ತು ಮಗುವನ್ನು ಕಚ್ಚದಂತೆ ರಕ್ಷಿಸಲು, ಸಹಾಯಕ್ಕಾಗಿ ಕಿರುಚುತ್ತಿದ್ದಳು. ಒಂದೆರೆಡು ನಿಮಿಷಗಳ ಕಾಲ ಜೀವನ್ಮರಣದ ಜಟಾಪಟಿ ಮುಂದುವರಿದಾಗ ಹುಲಿ ಮಗುವನ್ನು ಕಿತ್ತುಕೊಳ್ಳಲು ಮುಂದಾದರೂ ತಾಯಿ ರಕ್ಷಿಸಿದ್ದಾಳೆ.  

ಬಹಿರ್ದೆಸೆಗೆ ಹೋದಾಗ ಕರಡಿ ಡೆಡ್ಲಿ ಅಟ್ಯಾಕ್, ಸೆಣಸಾಡಿ ಪ್ರಾಣ ರಕ್ಷಸಿಕೊಂಡ ರುದ್ರಪ್ಪ!

ಹೋರಾಟವನ್ನು ಕೈಬಿಟ್ಟ ಹುಲಿ:  ಹುಲಿಯ ಉಗುರುಗಳಿಂದಾದ ಗಾಯಗಳು ಮತ್ತು ಕಡಿತಗಳನ್ನು ನಿರ್ಲಕ್ಷಿಸಿ, ಗ್ರಾಮಸ್ಥರು  ಸಹಾಯಕ್ಕೆ ಬರುವವರೆಗೂ ಜೀವನ್ಮರಣದ ಮಧ್ಯೆ ಹೋರಾಡಿ, ತಾಯಿ ತನ್ನ ಜೀವವನ್ನೇ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ್ದಾಳೆ. 

ಕೊನೆಗೂ ಹುಲಿ ಹೋರಾಟವನ್ನು ಕೈಬಿಟ್ಟು ಮತ್ತೆ ಕಾಡಿಗೆ ಹಾರಿದೆ. ಗ್ರಾಮಸ್ಥರು ತಾಯಿ ಮತ್ತು ಮಗುವನ್ನು ಮಾನ್‌ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ 30 ಕಿಮೀ ದೂರದ ಉಮಾರಿಯಾದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. 

ಅರಣ್ಯ ಇಲಾಖೆ ಅಧಿಕಾರಿಗಳ ಸಭೆ: ಈ ಹೋರಾಟದಲ್ಲಿ ಆಕೆಯ ಹೊಟ್ಟೆ, ಬೆನ್ನು ಮತ್ತು ಕೈಗಳಿಗೆ ಗಾಯಗಳಾಗಿವೆ ಎಂದು ಅರ್ಚನಾ ಪತಿ ಭೋಲಾ ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಉಮಾರಿಯಾ ಕಲೆಕ್ಟರ್ ಸಂಜೀವ್ ಶ್ರೀವಾಸ್ತವ ಅವರು ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಅವರ ಮಗನನ್ನು ಭೇಟಿ ಮಾಡಿ, ಅವರಿಗೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ. 

ಮಾಲೀಕನ ಪ್ರಾಣ ಉಳಿಸಲು 6 ಅಡಿ ಸರ್ಪದೊಂದಿಗೆ ಸೆಣಸಾಡಿ ಜೀವತೆತ್ತ ಶ್ವಾನ

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು 130 ಕಿಮೀ ದೂರದ ಜಬಲ್‌ಪುರದ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಗ್ರಾಮಸ್ಥರ ಸುರಕ್ಷತೆಗಾಗಿ ಜಿಲ್ಲಾಧಿಕಾರಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ತಾಯಿ ಹಾಗೂ ಮಗುವಿನ ಮೇಲೆ ದಾಳಿ ಮಾಡಿದ ಹುಲಿಗಾಗಿ ಪ್ರಶೋಧ ಕಾರ್ಯಾಚರಣೆ ನಡೆಯುತ್ತಿದೆ.  ರಾತ್ರಿ ವೇಳೆ ಮನೆಯೊಳಗೆ ಇರುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios