ಮಾಲೀಕನ ಪ್ರಾಣ ಉಳಿಸಲು 6 ಅಡಿ ಸರ್ಪದೊಂದಿಗೆ ಸೆಣಸಾಡಿ ಜೀವತೆತ್ತ ಶ್ವಾನ
ತನ್ನ ಮಾಲೀಕನ ಪ್ರಾಣ ಉಳಿಸುವ ಸಲುವಾಗಿ ನಾಯಿಯೊಂದು ಹಾವಿನೊಂದಿಗೆ ಹೋರಾಡಿ ತನ್ನ ಪ್ರಾಣವನ್ನೇ ಬಿಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ.
ಮಾಲೀಕನ ಜೀವ ಉಳಿಸುವ ಸಲುವಾಗಿ ಹಾವಿನ ಜೊತೆ ಹೋರಾಡಿ ಶ್ವಾನ ಒಂದು ತನ್ನ ಪ್ರಾಣವನ್ನೇ ತೆತ್ತಿದೆ.
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದ ಹೊರವಲಯದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ನಾಲ್ಕು ತಾಸು ಸತತ ಹಾವಿನ ಜೊತೆಗೆ ಹೋರಾಡಿ ಶ್ವಾನ ಪ್ರಾಣ ಬಿಟ್ಟಿದೆ.
ಇಲ್ಲಿನ ಪಟ್ಟಣ ಪಂಚಾಯತ್ ಸದಸ್ಯ ಕಲ್ಲನಗೌಡ ಪಾಟೀಲ್ ಎಂಬುವರಿಗೆ ಸೇರಿದ ರಾಜಾ ಹೆಸರಿನ ಡಾಬರ್ಮನ್ ಶ್ವಾನವು ಹಾವಿನೊಂದಿಗೆ ಸೆಣಸಾಡಿ ತನ್ನ ಜೀವವನ್ನೇ ಬಿಟ್ಟಿದೆ.
ನಾಯಿಯ ನಿಯತ್ತಿಗೆ ಸಲಾಂ ಎನ್ತಿರುವ ದೇವರಹಿಪ್ಪರಗಿ ಜನ . ಕಳೆದ 9 ವರ್ಷಗಳ ಹಿಂದೆ ಶ್ವಾನ ಮರಿ ಇದ್ದಾಗ ತಂದು ಸಾಕಿದ್ದ ಮಾಲಿಕ ಕಲ್ಲನಗೌಡ
ದ್ರಾಕ್ಷಿ ಹೊಲದಲ್ಲಿ ಕೆಲಸ ಮಾಡುವಾಗ ಟ್ರಾಕ್ಟರ್ ನಲ್ಲಿ ಬಂದು ಸೇರಿದ್ದ 6ಅಡಿ ಸರ್ಪ. ಗಮನವಿಲ್ಲದೆ ಟ್ರಾಕ್ಟರ್ ಚಾಲನೆಗೆ ಮುಂದಾಗಿದ್ದ ಕಲ್ಲನಗೌಡ ಪಾಟೀಲ್ ಈ ವೇಳೆ ಮಾಲಿಕನ ಪ್ರಾಣ ಉಳಿಸಲು ಬಂದ ಪ್ರೀತಿಯ ಶ್ವಾನ ರಾಜಾ..!!
ಆಗ ಹಾವಿನ ಬೇಟೆಗೆ ನಿಂತ ಕಲ್ಲನಗೌಡ ಪ್ರೀತಿಯ ಶ್ವಾನ. ನಾಲ್ಕು ತಾಸು ನಾಗರಹಾವಿನ ಜೊತೆಗೆ ಹೋರಾಡಿ, ಹಾವನ್ನ ಸಾಯಿಸಿದ ರಾಜಾ.. ಈ ಹಿಂದೆ ನಾಲ್ಕು ನಾಗರಹಾವುಗಳನ್ನ ಕಚ್ಚಿ ಸಾಯಿಸಿದ್ದ ಶ್ವಾನ
ಪ್ರೀತಿಯ ಶ್ವಾನ ಸಾವನ್ನಪ್ಪಿದ್ದಕ್ಕೆ ಕಣ್ಣೀರಿಟ್ಟ ಮಾಲಿಕ ಕಲ್ಲನಗೌಡ . ಶ್ವಾನಕ್ಕೆ ಸಮಾದಿ ಕಟ್ಟಿಸಲು ನಿರ್ಧರಿಸಿದ ಮಾಲಿಕ. ಮಾಲಿಕನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೆ ತ್ಯಾಗ ಮಾಡಿದ ಶ್ವಾನ ರಾಜಾ ಈಗ ದೇವರಹಿಪ್ಪರಗಿಯಲ್ಲಿ ಮನೆಮಾತು..