Asianet Suvarna News Asianet Suvarna News

ಕೊಳದಲ್ಲಿದ್ದ ಮರಿ ಆನೆ ಮೇಲೆ ದಾಳಿಗೆ ಬಂದ ದೈತ್ಯ ಮೊಸಳೆ, ಹೋರಾಡಿ ರಕ್ಷಿಸಿದ ತಾಯಿ ಆನೆ!

ಕಾಡಿನ ಕೊಳದಲ್ಲಿ ಮರಿಆನೆ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ದೈತ್ಯ ಮೊಸಳೆ ದಾಳಿ ಮಾಡಿದೆ. ಕ್ಷಣಾರ್ಧದಲ್ಲಿ ತಾಯಿ ಆನೆ ಹೋರಾಡಿ ಮೊಸಳೆಗೆ ತಕ್ಕ ಪಾಠ ಕಲಿಸಿದೆ. 

Mother elephant saves calf from crocodile attack in pond define motherhood ckm
Author
First Published Aug 13, 2024, 12:12 PM IST | Last Updated Aug 13, 2024, 12:19 PM IST

ವಿಶ್ವಾದ್ಯಂತ ಆನೆ ದಿನ ಆಚರಿಸಲಾಗಿದೆ. ಇದೇ ವೇಳೆ ಕಾಡಾನೆಗಳ ಸಂಖ್ಯೆ ಇಳಿಮುಖವಾಗುತ್ತಿರುವ ಕುರಿತು ಆತಂಕದ ವರದಿಗಳು ಹೊರಬಂದಿದೆ. ಮಾನವನ ಜೊತೆಗೆ ಸಂಘರ್ಷದ ಜೊತೆಗೆ ಕಾಡು ಪ್ರಾಣಿಗಳು ಇತರ ಪ್ರಾಣಿಗಳ ಮೇಲಿನ ದಾಳಿಯಿಂದಲೂ ರಕ್ಷಣೆ ಪಡೆಯಬೇಕಾದ ಅನಿವಾರ್ಯತೆ ಇದೆ. ಇದೀಗ ಮರಿ ಆನೆಯೊಂದನ್ನು ಮೊಸಳೆ ಬಾಯಿಯಿಂದ ರಕ್ಷಿಸಲು ತಾಯಿ ಆನೆ ಹೋರಾಡಿದ ದೃಶ್ಯ ಕಾಡು ಪ್ರಾಣಿಗಳ ಸಂಘರ್ಷದ ಬದುಕಿನ ಕತೆ ತೆರೆದಿಡುತ್ತಿದೆ.

ಕಾಡಿನಲ್ಲಿನ ಈ ದೃಶ್ಯವನ್ನು ಜುಬಿನಾ ಅಶ್ರಾ ಅನ್ನೋ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸಣ್ಣ ಕೊಳದಲ್ಲಿ ಮರಿ ಆನೆಯೊಂದು ಆಟವಾಡುತ್ತಿತ್ತು. ಮರಿ ಆನೆಗೆ ನೀರು ಕಂಡರೆ ಸಾಕು ಆಟವಾಡಲು ಇಳಿದು ಬಿಡುತ್ತದೆ. ಇತ್ತ ತಾಯಿ ಆನೆ ಆತಂಕದಲ್ಲೇ ಮರಿ ಆನೆ ಪಕ್ಕವೇ ನಿಂತುಕೊಂಡು ದಿಟ್ಟಿಸಿ ನೋಡುತ್ತಿತ್ತು. ಕೆಲ ಹೊತ್ತಲ್ಲೇ ಕೊಳದಲ್ಲಿದ್ದ ದೈತ್ಯ ಮೊಸಳೆ ಮರಿ ಆನೆಯತ್ತ ಧಾವಿಸಿದೆ. ಇನ್ನೇನು ಮರಿ ಆನೆ ಮೇಲೆ ದಾಳಿ ಮಾಡಬೇಕು ಅನ್ನುವಷ್ಟರಲ್ಲೇ ತಾಯಿ ಆನೆ ಏಕಾಏಕಿ ಮರಿ ಆನೆಯತ್ತ ಧಾವಿಸಿ ಹೋರಾಡಿದೆ.

ಮೃತಪಟ್ಟ ತಾಯಿ ಆನೆ ಎಬ್ಬಿಸಲು ದಿನವಿಡಿ ಪ್ರಯತ್ನಿಸಿದ ಮರಿ ಆನೆ;ಮನಕಲುಕುವ ಘಟನೆ!

ಮೊಸಳೆ ಬಾಯಿ ತೆರೆದುಕೊಂಡು ಮರಿ ಆನೆಯ ಕಚ್ಚಿ ಎಳೆದೊಯ್ಯುವ ಪ್ರಯತ್ನದಲ್ಲಿರುವಾಗಲೇ ತಾಯಿ ಆನೆ ಪ್ರತಿ ದಾಳಿ ನಡೆಸಿದೆ. ಘೀಳಿಡುತ್ತಾ ಮರಿ ಆನೆಯನ್ನು ತನ್ನ ಕಾಲುಗಳ ಒಳಗೆ ಸೇರಿಸಿ ಮೊಸಳೆಯನ್ನು ಓಡಿಸಿದೆ. ಮೊಸಳೆ ಸತತವಾಗಿ ಮರಿ ಆನೆಯನ್ನು ತಿಂದು ತೇಗಲು ಪ್ರಯತ್ನಿಸಿದೆ. ಆದರೆ ತಾಯಿ ಆನೆಯ ಹೋರಾಟದಿಂದ ಮೊಸಳೆ ತನ್ನ ಜೀವ ಉಳಿಸಿಕೊಳ್ಳಲು ಕೊಳದಿಂದ ದೂರಕ್ಕೆ ಓಡಿದೆ. 

 

 

ಮರಿ ಆನೆಯನ್ನು ರಕ್ಷಿಸಿದ ತಾಯಿ ಆನೆ ಮತ್ತೆ ಮತ್ತೆ ಮೊಸಳೆ ದೂರ ಸರಿದಿದೆ ಅನ್ನೋದನ್ನು ಖಾತ್ರಿಪಡಿಸಿಕೊಂಡಿದೆ. ಬಳಿಕ ಮರಿ ಆನೆಯನ್ನು ಕರೆದುಕೊಂಡು ಕೊಳದಿಂದ ಮೇಲಕ್ಕೆ ಬಂದಿದೆ. ಮೊಸಳೆ ಮತ್ತೊಂದು ಕಡೆ ತೆರಳಿದರೆ, ಆನೆ ಹಾಗೂ ಮರಿ ಆನೆ ವಿರುದ್ಧ ದಿಕ್ಕಿನಲ್ಲಿ  ಸಾಗಿದೆ. ವಿಶ್ವ ಆನೆ ದಿನದಂದು ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಹಂಚಿಕೊಂಡು ಆನೆ ಉಳಿಸಿ ಪರಿಸರ ಉಳಿಸಿ ಎಂದು ಅಭಿಯಾನ ಆರಂಭಿಸಿದ್ದಾರೆ.

ಮಾವುತನ ಪ್ರೀತಿಗೆ ಮಗುವಾದ ದೈತ್ಯ ಆನೆ, ಬಾಂಧವ್ಯದ ವಿಡಿಯೋ ಹಂಚಿಕೊಂಡ ಅಧಿಕಾರಿ!

ಮಾನವ ಸಂಘರ್ಷದಲ್ಲಿ ಆನೆಗಳು ದಾರುಣ ಅಂತ್ಯಕಾಣುತ್ತಿದೆ. ಅಭಿವೃದ್ಧಿ ಕಾರಣಗಳಿಂದ ಕಾಡು ಪ್ರಾಣಿಗಳು ಸಂಘರ್ಷ ಅನುಭವಿಸುವಂತಾಗಿದೆ.  ಇದು ಸಸ್ಯ ಹಾಗೂ ಪ್ರಾಣಿ ಸಂಕುಲಕ್ಕೆ ಧಕ್ಕೆ ಬಂದಿದೆ. ಇದನ್ನು ಉಳಿಸಲು ಅಭಿಯಾನ, ಜಾಗೃತಿ ಹಾಗೂ ಕಟ್ಟು ನಿಟ್ಟಿನ ಕ್ರಮಗಳ ಅವಶ್ಯಕತೆಯನ್ನು ತಜ್ಞರು ಸಾರಿ ಸಾರಿ ಹೇಳುತ್ತಿದ್ದಾರೆ.

Latest Videos
Follow Us:
Download App:
  • android
  • ios