ಅನಾರೋಗ್ಯದಿಂದ ತಾಯಿ ಆನೆ ಕುಸಿದು ಬಿದ್ದು ಮೃತಪಟ್ಟಿದೆ. ಆದರೆ ಒಂದು ದಿನ ಇಡೀ ತಾಯಿಯನ್ನು ಎಬ್ಬಿಸಲು ಮರಿ ಆನೆ ಪ್ರಯತ್ನಿಸಿದೆ. ಒಂದಿಂಚು ಕದಲದೆ ಮೃತ ತಾಯಿ ಆನೆ ಮುಂದೆ ನಿಂತು ರೋಧಿಸುತ್ತಿರುವ ಮನಕಲುವ ಘಟನೆ ನಡೆದಿದೆ. 

ಒಡಿಶಾ(ಆ.11) ಕಾಡಾನೆಗಳು ಕುಟಂಬವಾಗಿ ಜೀವಿಸುತ್ತದೆ. ಅದರಲ್ಲೂ ತಾಯಿ ಹಾಗೂ ಮರಿ ಆನೆ ನಡುವಿನ ಬಾಂಧವ್ಯ, ಪ್ರೀತಿ ತುಸು ಹೆಚ್ಚು. ಹೆಜ್ಜೆ ಹೆಜ್ಜೆಗೂ ಮರಿ ಆನೆಯನ್ನು ತಾಯಿ ರಕ್ಷಿಸುತ್ತದೆ. ಮರಿ ಆನೆ ಮಲಗುತ್ತಿದ್ದರೆ ತಾಯಿ ಆನೆ ಎಚ್ಚರದಿಂದ ಇರುತ್ತದೆ. ಯಾವುದೇ ದಾಳಿಯನ್ನು ಎದುರಿಸಲು ಸನ್ನದ್ಧವಾಗಿರುತ್ತದೆ. ಹೀಗಿರುವಾಗ ತಾಯಿ ಆನೆ ಮೃತಪಟ್ಟರೆ ಮರಿ ಆನೆಯ ಪರಿಸ್ಥಿತಿ ಊಹಿಸಿಕೊಳ್ಳುವುದು ಅಸಾಧ್ಯ. ಒಡಿಶಾದ ಸಂರಕ್ಷಿತ ಅರಣ್ಯದಲ್ಲಿ ಅನಾರೋಗ್ಯದಿಂದ ತಾಯಿ ಅನೆ ಕುಸಿದು ಬಿದ್ದು ಮೃತಪಟ್ಟಿದೆ. ಆಘಾತಗೊಂಡ ಮರಿ ಆನೆ ತಾಯಿ ಆನೆಯನ್ನು ದಿನವಿಡಿ ಎಬ್ಬಿಸುವ ಪ್ರಯತ್ನ ಮಾಡಿದೆ. ಮೃತಪಟ್ಟಿದೆ ಅನ್ನೋದು ಖಚಿತವಾಗುತ್ತಿದ್ದಂತೆ ತಾಯಿ ಆನೆ ಬಳಿಯಿಂದ ಒಂದಿಂಚು ಕದಲದೆ ನಿಂತು ರೋಧಿಸಿದೆ. 

ಒಡಿಶಾದ ಕಾಡಿನಲ್ಲಿನ ಈ ಘಟನೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದ್ದಾರೆ. ಈ ತಾಯಿ ಆನೆ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಪ್ರಮುಖವಾಗಿ ವಯಸ್ಸಾಗಿರುವ ಆ ತಾಯಿ ಆನೆಗೆ ಅನಾರೋಗ್ಯದ ನಡುವೆಯೂ ಮರಿ ಆನೆ ಜೊತೆ ಸಾಗಿತ್ತು. ಮರಿ ಆನೆ ಕೊಂಚ ದೊಡ್ಡದಾಗಿದ್ದರೂ ತಾಯಿ ಜೊತೆಗೆ ತಿರುಗಾಡುತ್ತಿತ್ತು. ಇತ್ತ ಏಕಾಏಕಿ ಕುಸಿದು ಬಿದ್ದ ತಾಯಿ ಆನೆ ಮತ್ತೆ ಏಳಲೇ ಇಲ್ಲ.

ಮಾವುತನ ಪ್ರೀತಿಗೆ ಮಗುವಾದ ದೈತ್ಯ ಆನೆ, ಬಾಂಧವ್ಯದ ವಿಡಿಯೋ ಹಂಚಿಕೊಂಡ ಅಧಿಕಾರಿ!

ವಯೋಸಹಜ ಅನಾರೋಗ್ಯದಿಂದ ತಾಯಿ ಆನೆ ಮೃತಪಟ್ಟಿದೆ. ಆದರೆ ಮರಿ ಆನೆ ಮಾತ್ರ ಒಂದು ದಿನ ಇಡೀ ತಾಯಿ ಆನೆಯನ್ನು ಎಬ್ಬಿಸಲು ಪ್ರಯತ್ನಿಸಿದೆ. ನೋವಿನಿಂದ ರೋಧಿಸಿದ ಮರಿ ಆನೆ, ಮೃತ ತಾಯಿ ಆನೆ ಮುಂದೆ ಒಂದಿಂಚು ಕದಲದೆ ನಿಂತುಕೊಂಡಿದೆ. ಆಹಾರ ತಿನ್ನುತ್ತಾ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆದರೆ ತಾಯಿ ಆನೆ ಮೃತಪಟ್ಟ ಬೆನ್ನಲ್ಲೇ ಮರಿ ಆನೆ ಒಂದು ದಿನ ಆಹಾರ ಸೇವಿಸಿಲ್ಲ. 

Scroll to load tweet…

ಅರಣ್ಯಾಧಿಕಾರಿ ಸುಶಾಂತ್ ನಂದಾ ಈ ಮನಕಲುಕುವ ಘಟನೆ ಹಂಚಿಕೊಂಡಿದ್ದಾರೆ. ವಯಸ್ಸಿನ ಕಾರಣದಿಂದ ತಾಯಿ ಆನೆ ಮೃತಪಟ್ಟಿದೆ. ಆದರೆ ಮರಿ ಆನೆ ಮಾತ್ರ ನೋವಿನಿಂದ ಮೃತ ತಾಯಿ ಆನೆ ಪಕ್ಕದಲ್ಲೇ ನಿಂತುಕೊಂಡು ರೋಧಿಸಿದೆ. ಇದು ಉತ್ತರ ಒಡಿಶಾದ ಕಾಡಿನಲ್ಲಿ ನಡೆದ ಘಟನೆ ಎಂದು ಸುಶಾಂತ್ ನಂದ ಹೇಳಿದ್ದಾರೆ.

ಹಿಪ್ಪೋ ದಾಳಿಯಿಂದ ಮರಿ ರಕ್ಷಿಸಲು ತಕ್ಷಣ ನೆರೆವಿಗೆ ಧಾವಿಸಿ ತಾಯಿ ಆನೆ, ವೈರಲ್ ವಿಡಿಯೋ!

ಆನೆಯೊಂದು ಕುಸಿದು ಬಿದ್ದಿರುವ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಲು ಮುಂದಾಗಿತ್ತು. ಈ ವೇಳೆ ಮರಿ ಆನೆ ನಿಂತಲೇ ನಿಂತುಕೊಂಡು ರೋಧಿಸುತ್ತಿತ್ತು. ತಾಯಿ ಆನೆ ಬದುಕಿದ್ದರೆ ಅಥವಾ ಚಿಕಿತ್ಸೆಯ ಅಗತ್ಯವಿರುವ ಸಾಧ್ಯತೆ ಇದೆ ಎಂದು ನಾವು ಎಲ್ಲಾ ತಯಾರಿ ಮಾಡಿಕೊಂಡು ಸಾಗಿದ್ದೇವು. ಆದರೆ ತಾಯಿ ಆನೆ ಕುಸಿದ ಬಿದ್ದ ಬೆನ್ನಲ್ಲೇ ಮೃತಪಟ್ಟಿದೆ. ಇತ್ತ ಮರಿ ಆನೆ, ಪಕ್ಕದಲ್ಲೇ ನಿಂತುಕೊಂಡಿತ್ತು. ಹಲವು ಹೊತ್ತು ಕಾದ ನಾವು ಮರಳಿ ಬಂದೆವು. ಬಳಿಕ ಸಂಜೆ ವೇಳೆ ಮತ್ತೆ ಅದೇ ಸ್ಥಳಕ್ಕೆ ತೆರಳಿದಾಗಲೂ ಮರಿ ಆನೆ ಅಲ್ಲಿ ನಿಂತಿತ್ತು ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.