ದೈತ್ಯ ಆನೆ ಮಾವುತ ಹೇಳಿದಂತೆ ಕೇಳುತ್ತದೆ. ಇಲ್ಲಿ ಭಯ, ಆತಂಕದಿಂದ ಅಲ್ಲ, ಪ್ರೀತಿ, ವಾತ್ಸಲ್ಯ.  ಮಕ್ಕಳನ್ನು ಕೈಹಿಡಿದು ಕರೆತರುವಂತೆ ಈ ಮಾವುತ ಪ್ರತಿ ದಿನ ಆನೆಯನ್ನು ಕರೆತರುತ್ತಾನೆ. ಇವರಿಬ್ಬರ ನಡುವಿನ ಬಾಂಧವ್ಯದ ವಿಡಿಯೋವನ್ನು ಐಎಎಸ್ ಅಧಿಕಾರಿ ಹಂಚಿಕೊಂಡಿದ್ದಾರೆ. 

ಚೆನ್ನೈ(ಆ.03) ಆನೆ ಹಾಗೂ ಮಾನವ ಸಂಘರ್ಷ ದೇಶದ ಹಲವು ಭಾಗದಲ್ಲಿ ನಡೆಯುತ್ತಲೇ ಇದೆ. ಇದರ ನಡುವೆ ಕೆಲ ಘಟನೆಗಳ ಹೊಸ ಹರುಪು ನೀಡುತ್ತದೆ. ವಯನಾಡಿನಲ್ಲಿ ಮನೆಕಳೆದುಕೊಂಡು ತಾಯಿ ಹಾಗೂ ಮಕ್ಕಳಿಗೆ ಆಶ್ರಯ ನೀಡಿದ ಕಾಡಾನೆ ಸೇರಿದಂತೆ ಹಲವು ಘಟನೆಗಳು ಆನೆ ಹಾಗೂ ಮನುಷ್ಯನ ನಡುವಿನ ಪ್ರೀತಿ ಹಾಗೂ ವಾತ್ಸಲ್ಯದ ಕತೆ ಹೇಳುತ್ತದೆ. ಇದೀಗ ಮಾವುತನ ಪ್ರೀತಿಗೆ ದೈತ್ಯ ಆನೆ ಪುಟ್ಟ ಮಗುವಾದ ಹೃದಯಸ್ವರ್ಶಿ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡಿದ್ದಾರೆ.

ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಅರಣ್ಯದಲ್ಲಿರುವ ಆನೆ ಶಿಬಿರದ ಈ ವಿಡಿಯೋವನ್ನು ಫೋಟೋಗ್ರಾಫರ್ ಧನು ಪರಣ್ ಸೆರೆ ಹಿಡಿದ್ದಾರೆ. ದಟ್ಟ ಕಾಡು, ಹಚ್ಚ ಹಸುರಿನ ಪರಿಸರದಲ್ಲಿ ತುಂತುರ ಮಳೆ. ಇದರ ನಡುವೆ ಮಾವುತ ಹಾಗೂ ಆನೆ ನಡೆದುಕೊಂಡು ಬರುತ್ತಿರುವ ದಶ್ಯ ಬಾಂಧವ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಮಳೆ ಕಾರಣ ಮಾವುತ ಛತ್ರಿ ಹಿಡಿದು ನಡೆದು ಸಾಗುತ್ತಿದ್ದರೆ, ಆನೆ ಮಾವುತನ ಜೊತೆ ಅಷ್ಟೇ ಅಪ್ತವಾಗಿ ಹೆಜ್ಜೆ ಹಾಕಿದೆ.

ಹಿಪ್ಪೋ ದಾಳಿಯಿಂದ ಮರಿ ರಕ್ಷಿಸಲು ತಕ್ಷಣ ನೆರೆವಿಗೆ ಧಾವಿಸಿ ತಾಯಿ ಆನೆ, ವೈರಲ್ ವಿಡಿಯೋ!

ದೈತ್ಯ ಆನೆಯ ದಂತ ಹಿಡಿದುಕೊಂಡು ಮಾವುತ ಆನೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಬಳಿಕ ಆನೆಯನ್ನು ಸವರುತ್ತಾ ಪ್ರೀತಿ ತೋರಿದ ಈ ದೃಶ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪೋಷಕರು ಮಕ್ಕಳನ್ನು ಕೈಹಿಡಿದು ನಡೆಸಿಕೊಂಡು ಹೋಗುವಂತೆ, ಈ ಮಾವುತ ಆನೆಯನ್ನು ಕೈಹಿಡಿದು ಮುನ್ನಡೆಸುವಂತಿರುವ ದೃಶ್ಯ ಎಲ್ಲರ ಮನಗೆದ್ದಿದೆ.

Scroll to load tweet…

ಈ ವಿಡಿಯೋ ಹಂಚಿಕೊಂಡಿದ್ದಕ್ಕೆ ಅಧಿಕಾರಿ ಸುಪ್ರಿಯಾ ಸಾಹುಗೆ ಧನ್ಯವಾದ. ಪ್ರವಾಹ, ಭೂಕುಸಿತದಿಂದ ಜರ್ಝರಿತವಾಗಿದ್ದ ಮನಸ್ಸಿಗೆ ಈ ವಿಡಿಯೋ ಕೊಂಚ ಮುದ ನೀಡಿದೆ ಎಂದು ಹಲವರು ಕಮೆಂಟ್ಸ್ ಮಾಡಿದ್ದರೆ. ಅಣ್ಣಾಮಲೈ ಸಂರಕ್ಷಿತ ಅರಣ್ಯದಲ್ಲಿ ಆನೆ, ಹುಲಿ ಸೇರಿದಂತೆ ಹಲವು ವನ್ಯಪ್ರಾಣಿಗಳಿವೆ. ಇಲ್ಲಿನ ಆನೆ ಶಿಬಿರದ ಸಿಬ್ಬಂದಿಗಳು, ಕಾಡಿನ ಆನೆಗಳ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅನಾರೋಗ್ಯವಿದ್ದರೆ ತಕ್ಷಣವೇ ಚಿಕಿತ್ಸೆ ಕೊಡಿಸಿದ ಉದಾಹರಣೆಗವಿವೆ. ತಾಯಿಯಿಂದ ಬೇರ್ಪಟ್ಟ ಮರಿಯಾನೆಯನ್ನು ಸುರಕ್ಷಿತವಾಗಿ ಮತ್ತೆ ತಾಯಿ ಆನೆ ಜೊತೆ ಸೇರಿದ ಘಟನೆಗಳು ಇಲ್ಲಿ ನಡೆದಿದೆ.

ಇತ್ತೀಚಗಷ್ಟೆ ಅನಾರೋಗ್ಯದಿಂದ ತಾಯಿ ಆನೆ ಮೃತಪಟ್ಟಿತ್ತು. ಈ ಆನೆಯ ಮರಿಯನ್ನು ತಂದು ಆರೈಕೆ ಮಾಡಿದ ವಿಡಿಯೋ ಭಾರಿ ವೈರಲ್ ಆಗಿತ್ತು. ಮರಿ ಆನೆಗೆ ಶಿಬಿರದಲ್ಲಿ ಹಾಲು ನೀಡಿ ಆರೈಕೆ, ಆನೆ ಜೊತೆ ಸಿಬ್ಬಂದಿಗಳು ಆಟವಾಡುತ್ತಿರುವ ದೃಶ್ಯ ವೈರಲ್ ಆಗಿತ್ತು.

ಹೃದಯ ವಿದ್ರಾವಕ ವಿಡಿಯೋ, ರೈಲು ಡಿಕ್ಕಿಯಾಗಿ ಕಾಲು ಕಳೆದುಕೊಂಡು ತೆವಳುತ್ತಾ ಸಾಗಿ ಪ್ರಾಣ ಬಿಟ್ಟ ಆನೆ!