ಮೊಟ್ಟೆ ಕದಿಯಲು ಗೂಡಿಗೆ ಬಂದ ಕಳ್ಳ ಹಾವನ್ನು ಪುಟ್ಟ ಹಕ್ಕಿ ಹೇಗೆ ಓಡಿಸಿತು ನೋಡಿ... ವಿಡಿಯೋ ವೈರಲ್
- ಮೊಟ್ಟೆ ಕದಿಯಲು ಬಂದ ಕಳ್ಳ ಹಾವು
- ಮೆಟ್ಟಿ ಕುಟ್ಟಿ ಓಡಿಸಿದ ತಾಯಿ ಹಕ್ಕಿ
- ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್
ಪ್ರಪಂಚದಲ್ಲಿ ತಾಯಿ ಪ್ರೀತಿಗೆ ಸರಿಸಾಟಿಯಾದುದು ಯಾವುದು ಇಲ್ಲ. ಅದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲಿಯೂ ಅಷ್ಟೇ. ಪ್ರಾಣಿ ಪಕ್ಷಿಗಳು ತಾಯಿ ಪ್ರೀತಿ ತೋರಿದ ಎಷ್ಟೋ ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬಹುದು ಇದು ಅಂತಹ ವಿಡಿಯೋಗಳಲ್ಲಿ ಒಂದು. ಭಾರಿ ಗಾತ್ರದ ಹಾವೊಂದು ಪುಟ್ಟ ಹಕ್ಕಿಯೊಂದು ಮರದ ಮೇಲೆ ಕಟ್ಟಿದ ಗೂಡಿಗೆ ತಲೆ ಹಾಕಿ ಮೊಟ್ಟೆ ಕದಿಯಲು ಹೊಂಚು ಹಾಕುತ್ತದೆ. ಆದರೆ ಇದನ್ನು ನೋಡಿದ ಹಕ್ಕಿಗಳು ಗಲಿಬಿಲಿಗೊಂಡಿವೆ. ಆದರೂ ಧೈರ್ಯಗೆಡದ ಹಕ್ಕಿಗಳು ಹಾವಿಗೆ ಕೊಕ್ಕಿನಲ್ಲೇ ಕುಕ್ಕಿ ಕುಕ್ಕಿ ಇಟ್ಟಿದು. ಕೊನೆಗೂ ಹಾವು ಅಲ್ಲಿಂದ ಬರಿಗೈಯಲ್ಲಿ ತೆರಳಿದೆ.
ಇತ್ತೀಚೆಗೆ, ತಾಯಿ ಕೋಳಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಹಾವಿನ ಮೇಲೆ ದಾಳಿ ಮಾಡಿದ ವೀಡಿಯೊ ಸಾಮಾಜಿಕದಲ್ಲಿ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಾವುಗಳು ಕೋಳಿ ಗೂಡುಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ. ಇಲ್ಲೊಂದು ಹಾವು ಪಕ್ಷಿ ಗೂಡುಗಳಿಂದ ಮೊಟ್ಟೆಗಳನ್ನು ಕದ್ದು ತಿನ್ನಲು ಮರ ಏರಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಕ್ಕಿಯೊಂದು ತನ್ನ ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಹಾವಿನ ಮೇಲೆ ದಾಳಿ ನಡೆಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ nature27_12 ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಅಪ್‌ಲೋಡ್ ಆಗಿದ್ದು, ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹಕ್ಕಿಗಳಲ್ಲೇ ಬುದ್ಧಿವಂತ ಹಕ್ಕಿ ಎಂದು ಕರೆಯಲ್ಪಡುವ ಗೀಜಗ ಹಕ್ಕಿಯ ಗೂಡಿನಂತೆ ಕಾಣಿಸುತ್ತಿದೆ. ಮರದ ಸಣ್ಣ ಕೊಂಬೆಯಲ್ಲಿ ಹಕ್ಕಿ ಗೂಡು ಕಟ್ಟಿದು ಅಲ್ಲಿಗೆ ಬರುವ ಹಾವು ಸೀದಾ ಹಕ್ಕಿಗೂಡಿನೊಳಗೆ ತಲೆ ಹಾಕುತ್ತದೆ. ಭಾರಿ ಗಾತ್ರದ ಹಾವನ್ನು ನೋಡಿದ ಹಕ್ಕಿಗಳ ಮೊಗದಲ್ಲಿ ಗಾಬರಿ ಆವರಿಸಿದೆ. ಆದಾಗ್ಯೂ ಹಕ್ಕಿ ಸುಮ್ಮನೆ ಕುಳಿತಿಲ್ಲ. ತನ್ನ ಜೀವದ ಆಸೆಯನ್ನು ಮರೆತು ತಾಯಿ ಹಕ್ಕಿ ಹಾವಿನ ವಿರುದ್ಧ ಹೋರಾಡಲು ಶುರು ಮಾಡಿದೆ. ಇದಕ್ಕೆ ಮತ್ತೊಂದು ಹಕ್ಕಿ ಜೊತೆಯಾಗಿದ್ದು, ಅವು ಮತ್ತೆ ಮತ್ತೆ ಹೋಗಿ ಹಾವಿಗೆ ಮೆಟ್ಟಲು ಹಾಗೂ ಕುಕ್ಕಲು ಶುರು ಮಾಡಿವೆ.
ಫ್ಲೆಮಿಂಗೋ ಹಕ್ಕಿಗಳ ಹೆರಿಗೆ ಕೇಂದ್ರವಾದ Rann of Kutch... ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಯ್ತ ಮೋಹಕ ದೃಶ್ಯ
ಪರಿಣಾಮ ಹಾವು ಹಕ್ಕಿ ಗೂಡಿನಿಂದ ಬರಿಗೈಲಿ ಎಸ್ಕೇಪ್ ಆಗಿದೆ. ಹಾವನ್ನು ಮರದಿಂದ ಕೆಳೆಗೆ ಬೀಳಿಸಲು ಹಕ್ಕಿಗಳಿಗೆ ಸಾಧ್ಯವಾಗಿಲ್ಲ. ಆದರೆ ಗೂಡಿನಿಂದ ದೂರ ಹೋಗಿಸುವಲ್ಲಿ ಹಕ್ಕಿಗಳು ಯಶಸ್ವಿಯಾಗಿವೆ. ಗೀಜಗ ಹಕ್ಕಿಗಳು ತುಂಬಾ ಬುದ್ಧಿವಂತ ಹಕ್ಕಿಗಳಾಗಿದ್ದು, ತಮ್ಮ ಗೂಡನ್ನು ತುಂಬಾ ಭದ್ರವಾಗಿ ನಿರ್ಮಿಸುತ್ತವೆ. ಕೆಲವು ಕಡೆಗಳಲ್ಲಿ ಒಂದೇ ಮರದಲ್ಲಿ ನೂರಾರು ಗೀಜಗ ಹಕ್ಕಿಗಳ ಗೂಡುಗಳಿರುತ್ತವೆ. ಅಲ್ಲದೇ ಇವುಗಳು ರಾತ್ರಿ ಬೆಳಕಿಗಾಗಿ ಮಿಂಚು ಹುಳುಗಳನ್ನು ತಂದು ಗೂಡಿನಲ್ಲಿ ಇಟ್ಟುಕೊಳ್ಳುತ್ತವೆ. ಪ್ಲಾಸಿಡೇ ಕುಟುಂಬಕ್ಕೆ ಸೇರಿದ ಹಕ್ಕಿ ಇದಾಗಿದ್ದು, ತನ್ನ ಗೂಡನ್ನು ಹೆಣೆಯುವ ವಿಶೇಷತೆಯಿಂದಾಗಿ ಇದಕ್ಕೆ ನೇಯ್ಗೆ ಹಕ್ಕಿ ಎಂದು ಕೂಡ ಕರೆಯುತ್ತಾರೆ.
ಎಂಜಿನಿಯರಿಂಗ್ ವಿದ್ಯಾರ್ಥಿ ಕೂಡ ಬೆರಗಾಗುವಷ್ಟು ಸುಂದರ ಹಾಗೂ ಸೃಜನಶೀಲವಾಗಿರುತ್ತವೆ ಈ ಹಕ್ಕಿಗಳ ಗೂಡು. ಈ ಗೀಜಗ ಹಕ್ಕಿಯ ಜಗವೇ ಒಂದು ಸೋಜಿಗ. ಗಂಡು ಹಕ್ಕಿ ಗೂಡು ಕಟ್ಟುವುದನ್ನು ನೋಡಿಯೇ ಹೆಣ್ಣು ಗೀಜಗ ಹಕ್ಕಿ ಗಂಡನ್ನು ಮೆಚ್ಚಲು ಶುರು ಮಾಡುತ್ತದೆ. ಹೆಣ್ಣು ಹಕ್ಕಿಯನ್ನು ಒಲಿಸಿಕೊಳ್ಳಲು ಗಂಡು ಹಕ್ಕಿ ಮೊದಲಿಗೆ ಅರ್ಧ ಗೂಡನ್ನು ಕಟ್ಟುತ್ತದೆ. ಅದು ಹೆಣ್ಣು ಹಕ್ಕಿಗೆ ಇಷ್ಟವಾದರೆ ಅದನ್ನು ಪೂರ್ಣಗೊಳಿಸುತ್ತದೆ. ಇಷ್ಟವಾಗದೇ ಇದ್ದಲ್ಲಿ ಅದನ್ನು ಅಲ್ಲಿಗೆ ಬಿಟ್ಟು ಬೇರೆ ಗೂಡು ಕಟ್ಟಲು ಶುರು ಮಾಡುತ್ತದೆ. ನೂರಾರು ಬಾರಿ ತಿರಸ್ಕರಿಸಿದರು ಅಷ್ಟೇ ತಾಳ್ಮೆಯಿಂದ ಗೂಡು ಕಟ್ಟುವ ಹಕ್ಕಿಯ ಪ್ರೇಮ ಈಗಿನ ಪ್ರೇಮಿಗಳಿಗೆ ಮಾದರಿ.
Samisha Shetty: ಗಾಯಗೊಂಡ ಹಕ್ಕಿಗಾಗಿ ಗಾಯತ್ರಿ ಮಂತ್ರ ಜಪಿಸಿದ ಶಿಲ್ಪಾ ಶೆಟ್ಟಿ ಮಗಳು
ಹಾಗಂತ ಇವುಗಳ ಗೂಡು ಕಟ್ಟುವ ಕಾರ್ಯ ಅಷ್ಟು ಸುಲಭವೇನಲ್ಲ. ದಿನಕ್ಕೆ ನೂರಾರು ಬಾರಿ ಹಾರಿ ಹೋಗಿ ತೆಂಗಿನ ಗಿಡದ ಗರಿ, ಜೋಳದ ಹುಲ್ಲು, ಕಬ್ಬು ಭತ್ತಗಳ ನಾರು ಮುಂತಾದವುಗಳನ್ನು ಎಳೆ ಎಳೆಯಾಗಿ ತಂದು ಕೊಕ್ಕುಗಳಿಂದ ಗೂಡು ಕಟ್ಟಲು ಶುರು ಮಾಡುತ್ತವೆ. ನೇಕಾರ ಹಕ್ಕಿ ಎಂದು ಕೂಡ ಇದನ್ನು ಕರೆಯುತ್ತಾರೆ. ಮಕ್ಕಳ ಕುಲಾವಿ ಮಾದರಿಯಲ್ಲಿ ಗೂಡು ಕಟ್ಟುವ ಇವುಗಳು ಕುಶಲತೆಯ ಕಾರಣಕ್ಕೆ ಇವುಗಳನ್ನು ಪದವಿ ಪಡೆಯದೆ ಎಂಜಿನಿಯರ್ ಎಂದು ಕೂಡ ಕರೆಯುತ್ತಾರೆ.