ವಿಶ್ರಾಂತಿಗೆ ಜಾರಿದ ಅಮ್ಮ ಮಕ್ಕಳು: IFS ಅಧಿಕಾರಿ ಶೇರ್ ಮಾಡಿದ ಹುಲಿಯನ ಫ್ಯಾಮಿಲಿ ವೀಡಿಯೋ
ಕಾಡಿನಲ್ಲಿ ತಾಯಿಯೊಂದಿಗೆ ಹುಲಿ ಮರಿಗಳು ಸುಖ ನಿದ್ದೆಗೆ ಜಾರಿರುವ ಸುಂದರವಾದ ಅತೀ ಅಪರೂಪದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು ವೈರಲ್ ಆಗಿದೆ.
ಕಾಡು ಪ್ರಾಣಿಗಳ ಜೀವನ ಶೈಲಿ ಮನುಷ್ಯರಿಗೆ ಸದಾ ಕುತೂಹಲ ಕೆರಳಿಸುತ್ತದೆ. ಕಾಡು ಪ್ರಾಣಿಗಳು ಮನುಷ್ಯರಂತೆ ನಿದ್ದೆ ಮಾಡುತ್ತವೆ ವಿಶ್ರಾಂತಿಗೆ ಜಾರುತ್ತವೆ. ನಮ್ಮ ಅದೃಷ್ಟ ಚೆನ್ನಾಗಿದ್ದಾರೆ ಇಂತಹ ಅಪರೂಪದ ಸುಂದರ ದೃಶ್ಯಗಳು ನಮಗೆ ಕಾಣಲು ಸಿಗುತ್ತವೆ. ಅದೇ ರೀತಿ ಕಾಡಿನಲ್ಲಿ ತಾಯಿಯೊಂದಿಗೆ ಹುಲಿ ಮರಿಗಳು ಸುಖ ನಿದ್ದೆಗೆ ಜಾರಿರುವ ಸುಂದರವಾದ ಅತೀ ಅಪರೂಪದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಈ ಸುಂದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 13 ಸೆಕೆಂಡ್fಗಳ ವೀಡಿಯೋವನ್ನು 40 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಪ್ರೀತಿಯ ಮುದ್ದಾದ ಕುಟುಂಬ ನಮ್ಮ ಜಗತ್ತಿನ ಕ್ಯಾನ್ವಾಸ್‌ಗೆ ಬಣ್ಣ ತುಂಬುತ್ತವೆ. ನಮ್ಮ ಕಾಡಿನ ನಿಜವಾದ ಅನುಭವ ಕೇಳಿಸಿಕೊಳ್ಳಲು ಈ ವೀಡಿಯೋದ ನೈಜ ಸದ್ದನ್ನು ಕೇಳಿ ಎಂದು ಸುಶಾಂತ್ ನಂದಾ ಬರೆದುಕೊಂಡಿದ್ದಾರೆ.
ಶೂ ಹಾಕಿ ನಡೆದಾಡೋ ಹುಂಜ: ಊಟದ ಪಾತ್ರೆಗೆ ಮುಚ್ಚಿಡುವ ಶ್ವಾನ: ವೈರಲ್ ವೀಡಿಯೋ
ವೀಡಿಯೋದಲ್ಲಿ ಕಾಣಿಸುವಂತೆ ತಾಯಿ ಸೇರಿ ನಾಲ್ಕು ಹುಲಿಗಳಿದ್ದು, ಅದರಲ್ಲಿ ಒಂದು ಮರಿಯಂತೂ ನಡೆದು ನಡೆದು ಬಹಳ ದಣಿದಂತೆ ಕಾಣಿಸುತ್ತಿದ್ದು, ತಾಯಿ ಪಕ್ಕದಲ್ಲಿ ಮಲಗಿ ಗಾಢ ನಿದ್ದೆಗೆ ಜಾರಿರುವುದು ಕಾಣಿಸುತ್ತಿದೆ. ಇನ್ನೆರಡು ಮರಿಗಳು ತಾಯಿಯ ಮತ್ತೊಂದು ಪಕ್ಕದಲ್ಲಿ ಮಲಗಿದ್ದು ಬಾಲವನ್ನು ಅತ್ತಿತ್ತ ಹೊರಳಾಡಿಸುತ್ತಿವೆ. ತಾಯಿ ವಿಶ್ರಾಂತಿ ಪಡೆಯುತ್ತಿದ್ದರೂ ಸಂಪೂರ್ಣ ನಿದ್ದೆಗೆ ಜಾರಿಲ್ಲ, ವೀಡಿಯೋದ ಹಿನ್ನೆಲೆಯಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು ಕಿವಿಗಡಚಿಕ್ಕುತ್ತಿದ್ದು, ತಾಯಿ ಹುಲಿ ಮೇಲೆ ನೋಡುತ್ತಾ ಅತ್ತಿತ್ತ ಕಣ್ಣಾಡಿಸುತ್ತಾ ಮಲಗಿದೆ.
ಮತ್ತೊಬ್ಬ ಐಎಫ್‌ಎಸ್ ಅಧಿಕಾರಿ (IFS Officer) ರಮೇಶ್ ಪಾಂಡೆ (Ramesh pandey) ಈ ವೀಡಿಯೋವನ್ನು ರಿಟ್ವಿಟ್ ಮಾಡಿದ್ದು, 'ಇದು ನಿದ್ದೆ ಮಾಡುವ ಸಮಯ, ಮಕ್ಕಳನ್ನು ನೋಡಿಕೊಳ್ಳುವುದು ತಾಯಿ ಹುಲಿಗೆ ಕಷ್ಟದ ಕೆಲಸ ಆಕೆ ಏಕಾಂಗಿಯಾಗಿ ಮಕ್ಕಳಿಗೆ ಕಾಳಜಿ ತೋರುತ್ತಾ ಅವುಗಳನ್ನು ರಕ್ಷಿಸುತ್ತಾ, ಅವುಗಳಿಗೆ ಬೇಟೆಯಾಡುವ ಹಾಗೂ ಶತ್ರುಗಳ ನಡುವೆ ಬದುಕುಳಿಯುವ ತಂತ್ರಗಳನ್ನು ಕಲಿಸುತ್ತಾಳೆ ಎಂದು ಅವರು ಬರೆದುಕೊಂಡಿದ್ದಾರೆ. ಹುಲಿ ಮರಿಗಳು ತಮಗೆ 2 ವರ್ಷ ತುಂಬುವವರೆಗೆ ತಾಯಿಯ ಜೊತೆಯಲ್ಲೇ ಇರುತ್ತವೆ.
ರಸ್ತೆಯಲ್ಲಿ ಫುಲ್ ಬಾಟಲ್ 'ಎಣ್ಣೆ' ಸಿಕ್ಕರೆ ಜನರ ರಿಯಾಕ್ಷನ್ ಹೇಗಿರುತ್ತೆ... ನೋಡಿ ಈ ವೈರಲ್ ವೀಡಿಯೋ
ಇದೇ ರೀತಿ ಹುಲಿಗಳು (Tigers family) ಕುಟುಂಬದೊಂದಿಗೆ ಸ್ವಚ್ಛಂದವಾಗಿ ವಿಹಾರಿಸುವ ವೀಡಿಯೋವೊಂದು 2020 ರಲ್ಲಿ ವೈರಲ್ ಆಗಿತ್ತು. ಅರಣ್ಯ ಅಧಿಕಾರಿ ರವೀಂದ್ರ ಮಣಿ ತ್ರಿಪಾಠಿ ಅವರು ಪೋಸ್ಟ್ ಮಾಡಿದ ಈ ವೀಡಿಯೋದಲ್ಲಿ ಎರಡು ಹುಲಿಗಳು ರಸ್ತೆಯ ಮಧ್ಯದಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರೆ ಮತ್ತೆರಡು ಓಡಾಡುತ್ತಿದ್ದವು. ಮಧ್ಯಪ್ರದೇಶಸ ಸತಪುಡಾ ಅರಣ್ಯದ ರಸ್ತೆಬದಿಯಲ್ಲಿ ಈ ದೃಶ್ಯ ಸೆರೆ ಆಗಿತ್ತು.