ಮೊರ್ಬಿ ತೂಗು ಸೇತುವೆ ದುರಂತ ಪ್ರಕರಣ, ನವೀಕರಣಕ್ಕೆ 2 ಕೋಟಿ ರೂನಲ್ಲಿ ಬಳಸಿದ್ದು 12 ಲಕ್ಷ ಮಾತ್ರ!
ಮೊರ್ಬಿ ತೂಗು ಸೇತುವೆ ದುರಂತ ಪ್ರಕಣದಲ್ಲಿ 134 ಮಂದಿ ಮೃತಪಟ್ಟಿದ್ದಾರೆ. ಈ ಸೇತುವೆ ನವೀಕರಣಕ್ಕೆ 2 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಆದರೆ ಒರೆವಾ ಕಂಪನಿ ಬಳಿಸಿದ್ದು ಕೇವಲ 12 ಲಕ್ಷ ರೂಪಾಯಿ ಮಾತ್ರ.
ಅಹಮ್ಮದಾಬಾದ್(ನ.05): ಗುಜಾರಾತ್‌ನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ದುರಂತ ಭಾರತದ ಅತೀ ದೊಡ್ಡ ಸೇತುವೆ ದುರಂತಗಳಲ್ಲಿ ಒಂದು. 134 ಮಂದಿ ಬಲಿಯಾಗಿದ್ದಾರೆ. 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೀಕರ ದುರಂತಕ್ಕೆ ಹಲುವ ಕಾರಣಗಳು ಮೇಲ್ನೋಟಕ್ಕೆ ಕಣ್ಣಿಗೆ ರಾಚುತ್ತಿದೆ. ಇದರ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಇದೀಗ ಒಂದೊಂದೆ ಮಾಹಿತಿ ಬಹಿರಂಗಪಡಿಸುತ್ತಿದ್ದಾರೆ. ಗಡಿಯಾ ಉತ್ಪಾದಕ ಕಂಪನಿ ಒರೆವಾ ಈ ಸೇತುವೆ ನವೀಕರಣ ಗುತ್ತಿಗೆ ಪಡೆದಿತ್ತು. ಸರ್ಕಾರ ಸೇತುವೆ ನವೀಕರಿಸಲು 2 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ ಒರೆವಾ ಕಂಪನಿ ಕೇವಲ 12 ಲಕ್ಷ ರೂಪಾಯಿ ಹಣದಲ್ಲಿ ಪೈಂಟ್ ಬಳಿದು ಸೇತುವೆ ರೆಡಿ ಮಾಡಿತ್ತು. ಇನ್ನುಳಿದ 1.88 ಕೋಟಿ ರೂಪಾಯಿಯನ್ನು ಜೇಬಿಗಿಳಿಸಿ ಕಾಲ್ಕಿತ್ತಿತ್ತಿದೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.
ಸೇತುವೆ ಸಂಪೂರ್ಣ ನವೀಕರಣ ಮಾಡಲು ಹಣ ಬಿಡುಗಡೆ ಮಾಡಲಾಗಿತ್ತು. ಗುತ್ತಿಗೆಯನ್ನು ಒರೆವಾ ಕಂಪನಿಗೆ ನೀಡಿದ್ದ ಸರ್ಕಾರ ಬಳಿಕ ಪರಿಶೀಲನೆ ನಡೆಸುವ ಗೋಜಿಗೆ ಹೋಗಿಲ್ಲ. 6 ತಿಂಗಳ ಬಳಿಕ ಒರೆವಾ ಕಂಪನಿ ನಿಗದಿತ ಸಮಯಕ್ಕೂ ಮೊದಲೇ ಸೇತುವೆ ನವೀಕರಣ ಮಾಡಲಾಗಿದೆ ಎಂದು ಘೋಷಿಸಿ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿತ್ತು. ಇದರ ನಿರ್ವಹಣೆಯನ್ನು ಒರೆವಾ ಕಂಪನಿ ವಹಿಸಿಕೊಂಡಿದೆ.
ಉಡುಪಿಯಲ್ಲೂ ಇದೆ ಅಪಾಯಕಾರಿ ತೂಗು ಸೇತುವೆ, ಇಂದು ಎಚ್ಚೆತ್ತುಕೊಳ್ಳದಿದ್ದರೆ ನಾಳೆ ಅಪಾಯ ಖಂಡಿತ
ಸೇತುವೆ ನವೀಕರಣದಲ್ಲಿ ಒರೆವಾ ಕಂಪನಿ ಯಾವುದೇ ಹೊಸ ವಸ್ತುಗಳನ್ನು ಹಾಕಿಲ್ಲ. ಕೇವಲ ಪೈಂಟ್ ಮಾತ್ರ ಬಳಿದಿದೆ. ಇನ್ನು ಕೆಲ ಸ್ಕ್ರೂ ಕಿತ್ತು ಹೋಗಿತ್ತು ಇವುಗಳನ್ನು ಬದಲಿಸಿದೆ. ಇನ್ನು ನೆಲದ ಹಾಸುನ್ನು ಬದಲಿಸಿದೆ. ಆದರೆ ತುಕ್ಕು ಹಿಡಿದು, ಮುರಿದು ಬೀಳುವಂತಿದ್ದ ಕಬ್ಬಿಣದ ರಾಡ್‌ಗಳನ್ನು ಬದಲಿಸುವ ಪ್ರಯತ್ನ ಮಾಡಿಲ್ಲ. ಇದರ ವೆಚ್ಚ ಹೆಚ್ಚಾಗಲಿದೆ ಅನ್ನೋದು ಒರೆವಾ ಕಂಪನಿ ಲೆಕ್ಕಾಚಾರವಾಗಿತ್ತು. 5 ರಿಂದ 6 ಲಕ್ಷ ರೂಪಾಯಿ ಒಳಗೆ ಸೇತುವೆ ನವೀಕರಣಕ್ಕೆ ಒರೆವಾ ಕಂಪನಿ ಮುಂದಾಗಿತ್ತು. ಕೊನೆಗೆ 6 ತಿಂಗಳ ಕಾಲ ಸುಕಾಸುಮ್ಮನೆ ಕೆಲಸ ಮಾಡಿದಂತೆ ತೋರಿಸಿತ್ತು. ಹೀಗಾಗಿ ಒರೆವಾ ಕಂಪನಿ ವೆಚ್ಚ 12 ಲಕ್ಷ ರೂಪಾಯಿಗೆ ಏರಿಕೆಯಾಗಿತ್ತು.
135 ಜನರನ್ನು ಬಲಿ ಪಡೆದ ಗುಜರಾತಿನ ಮೋರ್ಬಿ ಸೇತುವೆಯ ನವೀಕರಣ ಮಾಡಿರುವುದಾಗಿ ಅಜಂತಾ ಒರೇವಾ ಕಂಪನಿ ಹೇಳಿದ್ದರೂ, ತುಕ್ಕು ಹಿಡಿದ ಉಕ್ಕಿನ ಕೇಬಲ್ ಅನ್ನು ಬದಲಿಸಿಯೇ ಇರಲಿಲ್ಲ. ಸೇತುವೆಯೇ ನೆಲಹಾಸನ್ನು ಮಾತ್ರ ಹೊಸದಾಗಿ ಹಾಕಲಾಗಿತ್ತು. ಇದರ ಭಾರ ತಾಳಲಾರದೆ ಸೇತುವೆಯ ಕೇಬಲ್ ತುಂಡಾಗಿದೆ ಎಂದು ವಿಧಿವಿಜ್ಞಾನ ಪರಿಶೀಲನಾ ವರದಿ ಹೇಳಿದೆ. ಈ ನಡುವೆ, ಸೇತುವೆ ದುರಂತ ‘ದೇವರಿಚ್ಛೆ’ ಎಂದು ಬಂಧಿತ ಅಜಂತಾ ಒರೇವಾ ಕಂಪನಿ ಮ್ಯಾನೇಜರ್ ದೀಪಕ್ ಪಾರೇಖ್ ಕೋರ್ಚ್ ಮುಂದೆ ಆಘಾತಕಾರಿ ಹೇಳಿಕೆ ನೀಡುವ ಮೂಲಕ ಘಟನೆಯನ್ನು ಸಮರ್ಥಿಸಿಕೊಂಡಿದ್ದಾನೆ.
ಮೊರ್ಬಿ ತೂಗು ಸೇತುವೆ ದುರಂತ ಸ್ಥಳ ಪರಿಶೀಲಿಸಿದ ಮೋದಿ, ಅಧಿಕಾರಿಗಳ ವಿರುದ್ಧ ಗರಂ!
ಸೇತುವೆ ನಿರ್ವಹಣೆಯ ಹೊಣೆ ಹೊತ್ತಿದ್ದ ಅಜಂತಾ ಒರೇವಾ ಕಂಪನಿಯ ನಾಲ್ವರು ಹಾಗೂ ಇತರ ಐವರನ್ನು ಮುಖ್ಯ ಜುಡಿಷಿಯಲ್ ಮ್ಯಾಜಿಸ್ಪ್ರೇಟ್ ಎಂ.ಜೆ. ಖಾನ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಒರೇವಾದ ಇಬ್ಬರು ಮ್ಯಾನೇಜರ್ ಹಾಗೂ ಇಬ್ಬರು ಸೇತುವೆ ರಿಪೇರಿ ಗುತ್ತಿಗೆದಾರರನ್ನು ಕೋರ್ಟು ಶನಿವಾದವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿತು. ಸೇತುವೆಯ ಸೆಕ್ಯೂರಿಟಿ ಗಾರ್ಡ್‌ಗಳು ಹಾಗೂ ಬುಕಿಂಗ್ ಕ್ಲರ್ಕ್ಗಳು ಸೇರಿ ಐವರನ್ನು ಪೊಲೀಸರು ತಮ್ಮ ವಶಕ್ಕೆ ಕೇಳದ ಕಾರಣ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿತು.