ಮೊರ್ಬಿ ತೂಗು ಸೇತುವೆ ದುರಂತ ಸ್ಥಳ ಪರಿಶೀಲಿಸಿದ ಮೋದಿ, ಅಧಿಕಾರಿಗಳ ವಿರುದ್ಧ ಗರಂ!
ಮೊರ್ಬಿ ತೂಗು ಸೇತುವೆ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಸಮರ್ಪಕ ಕಾಮಗಾರಿ, ಸಂಪೂರ್ಣ ಮಾಹಿತಿ ಕೊರತೆಗೆ ಮೋದಿ ಗರಂ ಆಗಿದ್ದಾರೆ.
ಮೊರ್ಬಿ(ನ.01): ತೂಗು ಸೇತುವೆ ದುರಂತದ ಸಾವು ನೋವು ಹೆಚ್ಚುತ್ತಲೇ ಇದೆ. ಸದ್ಯ 135 ಮಂದಿ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. 170ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ನಾಪತ್ತೆಯಾದವರಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿದೆ. ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಜರಾತ್ ಮುಖ್ಯಮಂತ್ರ ಭೂಪೇಂದ್ರ ಪಟೇಲ್ ಸೇರಿ ಅಧಿಕಾರಿಗಳ ಜೊತೆ ಮೊರ್ಬಿಗೆ ತೆರಳಿದ ಮೋದಿ ದುರಂತ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳಪೆ ಕಾಮಾಗಾರಿ, ಪ್ರವಾಸಿಗರಿಗೆ ಸೂಕ್ತ ಮಾಹಿತಿ, ನಿಯಂತ್ರಣ ಮಾಡಲು ವ್ಯವಸ್ಥೆ ಮಾಡದ ಅಧಿಕಾರಿಗಳ ವಿರುದ್ಧ ಮೋದಿ ಗರಂ ಆಗಿದ್ದಾರೆ. ಸೂಕ್ತ ಮಾಹಿತಿ ಇಲ್ಲ ಅಧಿಕಾರಿಗಳ ವಿರುದ್ಧವೂ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೂಗು ಸೇತುವೆ ಬದಿಯಲ್ಲಿ ನಿಂತು ಮೋದಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಘಟನೆ ಹಾಗೂ ವ್ಯವಸ್ಥೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋದಿ ಅಧಿಕಾರಿಗಳಿಗೆ ತಾಕೀತು ಮಾಡುತ್ತಿರುವ ಹಾಗೂ ಗರಂ ಆಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಪೂರ್ಣ ಮಾಹಿತಿ ಪಡೆದ ಮೋದಿ, ದುರಂತದ ಕಾರಣಗಳನ್ನು ಅವಲೋಕಿಸಿದ್ದಾರೆ. ಮೋದಿಗೆ ಘಟನೆ ಕುರಿತು ಮಾಹಿತಿ ನೀಡಲು ಅಧಿಕಾರಿಗಳು ಪರದಾಡಿದ್ದಾರೆ. ಇದು ಮೋದಿ ಅಸಮಾಧಾನಕ್ಕೆ ಕಾರಣವಾಗಿದೆ.
Morbi tragedy: ಮೊರ್ಬಿ ಸರ್ಕಾರಿ ಆಸ್ಪತ್ರೆಗೆ ಮೋದಿ ಭೇಟಿ, ರಾತ್ರೋರಾತ್ರಿ ಆಸ್ಪತ್ರೆ ಫುಲ್ ಜಗಮಗ!
143 ವರ್ಷಗಳಷ್ಟುಹಳೆಯ ಸೇತುವೆ ಕುಸಿತಕ್ಕೆ, ಒಂದೇ ಬಾರಿಗೆ ಸೇತುವೆ ಮೇಲೆ ಭಾರೀ ಪ್ರಮಾಣದ ಜನರು ನುಗ್ಗಿದ್ದು ಮತ್ತು ಜನರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಸೇತುವೆ ನಿರ್ವಹಣೆ ಹೊಣೆ ಹೊತ್ತ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೇತುವೆಯ ನಿರ್ವಹಣೆ ಹೊಣೆ ಹೊತ್ತಿದ್ದ ಒರೇವಾ ಗ್ರೂಪ್‌ನ ನಾಲ್ವರು ಸಿಬ್ಬಂದಿ ಸೇರಿ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ 7 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ನಡುವೆ, ದಿಲ್ಲಿಯಲ್ಲಿ ಮಡಿದ ಸಂತ್ರಸ್ತರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ‘ಸೇತುವೆ ಮೇಲೆ ಏಕೆ ಅಷ್ಟೊಂದು ಜನರನ್ನು ಬಿಡಲಾಯಿತು? ಈ ಬಗ್ಗೆ ಸುಪ್ರೀಂ ಕೋರ್ಚ್ ಅಥವಾ ಹೈಕೋರ್ಚ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿದರು.
ಈ ನಡುವೆ ದುರ್ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಗುಜರಾತ್‌ನಾದ್ಯಂತ ಒಂದು ದಿನ ಶೋಕಾಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಲಾಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸೇತುವೆ ದುರಂತಗಳ ಪೈಕಿ ಮೊರ್ಬಿ ಘಟನೆ ಅತೀ ದೊಡ್ಡ ದುರಂತವಾಗಿದೆ. ಇಷ್ಚು ಪ್ರಮಾಣದಲ್ಲಿ ಜೀವ ಹಾನಿಯಾಗಿರುವುದು ಇದೇ ಮೊದಲು.
Gujarat Bridge Collapse: ಗೋಡೆ ಗಡಿಯಾರ ಕ್ರಾಂತಿ ಮಾಡಿದ ಅಜಂತಾ ಕಂಪನಿ ಎಡವಟ್ಟು
ಸಂಸದರ ಕುಟುಂಬದ 12 ಜನರು ನೀರು ಪಾಲು
ಸೇತುವೆ ದುರಂತದಲ್ಲಿ ರಾಜ್‌ಕೋಟ್ ಸಂಸದ ಮೋಹನ್ ಕುಂದರಿಯಾ ತಮ್ಮ 12 ಜನ ಸಂಬಂಧಿಕರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಭಾನುವಾರ ಮೋರ್ಬಿ ಸೇತುವೆಗೆ ಪ್ರವಾಸಕ್ಕೆಂದು ಕುಂದರಿಯಾ ಪರಿವಾರದವರು ತೆರಳಿದಾಗ ಘಟನೆ ನಡೆದಿದೆ. ಸಂಸದರ ಮೃತ ಪರಿವಾರದಲ್ಲಿ 5 ಜನ ಮಕ್ಕಳು, 4 ಮಹಿಳೆಯರು ಹಾಗೂ 3 ಪುರುಷರಿದ್ದರು.