Asianet Suvarna News Asianet Suvarna News

ಫೋನ್‌ ಕ್ಯಾಮರಾದಲ್ಲಿ ತಮ್ಮ ಮುಖ ನೋಡಿದ ಮಂಗಗಳ ರಿಯಾಕ್ಷನ್‌ ಹೇಗಿದೆ ನೋಡಿ

  • ಫೋನ್‌ನಲ್ಲಿ ತಮ್ಮದೇ ಮುಖ ನೋಡಿದ ಮಂಗಗಳು
  • ಒಳಗಿರುವವರ ಬಗ್ಗೆ ಮಂಗಗಳ ಕುತೂಹಲ
  • ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್
Monkeys Shown Video of Themselves on Phone watch their reaction akb
Author
Bangalore, First Published Jan 22, 2022, 5:09 PM IST

ಮಂಗಗಳು ತಮ್ಮದೇ ಮುಖವನ್ನು ಫೋನ್‌ ಕ್ಯಾಮರಾದಲ್ಲಿ ತೀವ್ರ ಕುತೂಹಲದಿಂದ ನೋಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿರುವಂತೆ ವ್ಯಕ್ತಿಯೊಬ್ಬರು ಮಂಗಗಳಿಗೆ ಫೋನ್‌ ಕ್ಯಾಮರಾವನ್ನು ಆನ್‌ ಮಾಡಿ ಕೊಟ್ಟಿದ್ದಾರೆ. ಇದನ್ನು ಫೋನ್ ಕೈಗೆ ಸಿಕ್ಕ ಕೂಡಲೇ ಕುತೂಹಲದಿಂದ ನೋಡುವ ಮಂಗಗಳ ಗುಂಪು ಫೋನ್‌ನಲ್ಲಿ ತಮ್ಮಂತೆ ಕಾಣುವ ಪ್ರಾಣಿಯನ್ನು ನೋಡಿ ಫೋನ್‌ನ ಸ್ಕ್ರೀನ್ ಅನ್ನು ಕೈಯಿಂದ ಕೆರೆಯಲು ಶುರು ಮಾಡುತ್ತವೆ. ಬಳಿಕ ಒಂದು ಮಂಗ ಫೋನ್‌ ಹಿಡಿದು ಫೋನ್‌ನ ಸ್ಕ್ರೀನ್‌ಗೆ ಮುತ್ತು ನೀಡುತ್ತದೆ. ಫೋನ್‌ ಒಳಗಿರುವವರನ್ನು ಹೊರಗೆ ತರುವುದು ಹೇಗೆ ಎಂಬ ಯೋಚನೆಗೀಡಾದ ಮಂಗಗಳು, ಒಳಗಿರುವ ಮಂಗಗಳಿಗಾಗಿ ಫೋನ್ ಸ್ಕ್ರೀನ್‌ ಅನ್ನು ಕೆರೆಯುತ್ತಿರುವುದು ನೋಡುವುದಕ್ಕೆ ಮಜಾವಾಗಿದೆ.

ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ helicopter_yatra ಎಂಬ ಹೆಸರಿನ ಖಾತೆಯಿಂದ ಪೋಸ್ಟ್ ಆಗಿದೆ. ಇದನ್ನು 12,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ನಗುವ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. 

 

ಕೆಲ ದಿನಗಳ ಹಿಂದೆ  ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಂಗವೊಂದಕ್ಕೆ ಆಟೋ ಚಾಲಕರೊಬ್ಬರು ಸಿಪಿಆರ್‌(Cardiopulmonary resuscitation) ಮಾಡಿ ಜೀವ ಉಳಿಸಿದ ಘಟನೆ ತಮಿಳುನಾಡಿ(Tamil Nadu)ನ ಪೆರಂಬಲೂರಿ(Perambalur)ನಲ್ಲಿ ನಡೆದಿತ್ತು.  ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು, ನೆಟ್ಟಿಜನ್‌ಗಳು ಆಟೋ ಚಾಲಕನ ಮಾನವೀಯ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. 38 ವರ್ಷದ ಆಟೋ ಚಾಲಕ ಪ್ರಭು ಅವರು ಅಸ್ವಸ್ಥಗೊಂಡು ಬಿದ್ದಿದ್ದ ಮಂಗನ ಜೀವ ಉಳಿಸುವ ಸಲುವಾಗಿ ಅದರ ಹೃದಯಕ್ಕೆ ಚೆಸ್ಟ್‌ ಕಂಪ್ರೇಶನ್‌ ಮಾಡಿದ್ದಾರೆ. 

ಮಂಗದ ಮರಿಗೆ ಮಗುವನ್ನು ಹೋಲಿಸಿದ ಎಲನ್ ಮಸ್ಕ್‌

ಕಠಿಣ ಮತ್ತು ಪ್ರಾಯಶಃ ಮಾರಣಾಂತಿಕ ಪರಿಸ್ಥಿತಿಯು ಉದ್ಭವಿಸಿದಾಗ, ತುಂಬಾ ಜನಕ್ಕೆ ಏನು ಮಾಡಬಹುದು ಎಂಬ ಯೋಚನೆಯೂ ಬಾರದೆ ಅಲ್ಲೇ ನಿಂತು ಬಿಡುತ್ತಾರೆ. ಆದರೆ ಇವರು ತಮ್ಮ ಸಮಯ ಪ್ರಜ್ಞೆ ಮೆರೆದು ಕೋತಿಯ ಜೀವ ಉಳಿಸಿದ್ದಾರೆ. ಆ ಪ್ರದೇಶದಲ್ಲಿ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಕೋತಿಗೆ ಸಿಪಿಆರ್ ಮಾಡಿ ಮರುಜೀವ ನೀಡಲು ಆಟೋ ಚಾಲಕ ಪ್ರಭು(prabhu) ನಿರ್ಧರಿಸಿದ್ದಾರೆ. ಇವರು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕೋತಿ ಪ್ರಜ್ಞೆ ತಪ್ಪಿ ಬಿದ್ದಿತ್ತು. ಈ ಕೋತಿಗೆ ಸಹಾಯ ಮಾಡಲು ತಕ್ಷಣ ತಮ್ಮ ಬೈಕನ್ನು ಮಧ್ಯದಲ್ಲಿ ನಿಲ್ಲಿಸಿದ ಅವರು ಕೋತಿಗೆ ಸಿಪಿಆರ್‌ ಮಾಡಿದ್ದಾರೆ. 

ಕೋತಿಯೊಂದಿಗೆ ಮಾತನಾಡುತ್ತಲೆ ಅವರು ಅದರ ಎದೆಯನ್ನು ಸವರಿ ಸಮಾಧಾನಪಡಿಸುವ ಚಿತ್ರಣ ವಿಡಿಯೋದಲ್ಲಿದೆ. ನಂತರದಲ್ಲಿ ಕೋತಿ ಸ್ವಲ್ಪಮಟ್ಟಿಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದೆ. ನಂತರ ಪ್ರಭು ಅದನ್ನು ಪಶುವೈದ್ಯರ ಬಳಿಗೆ ಸಾಗಿಸಿದ್ದಾರೆ. ಪ್ರಭು ಅವರ ಈ ಕಾರ್ಯವನ್ನು ಸಾಮಾಜಿಕ ಜಾಲತಾಣ(social media)ಗಳಲ್ಲಿ ಭಿನ್ನ ವಿಭಿನ್ನವಾಗಿ ಕೊಂಡಾಡಲಾಗುತ್ತಿದೆ. 

ಅಜ್ಜಿಯೊಂದಿಗೆ ಮಲಗಿದ್ದ 2 ತಿಂಗಳ ಮಗುವನ್ನು ಎತ್ತಿ ನೀರಿಗೆಸೆದ ಮಂಗಗಳು...

ಇತ್ತೀಚೆಗೆ ಕೋತಿಯೇ ಕೊತಿಯೊಂದರ ಜೀವ ಉಳಿಸಿದ ಘಟನೆಯ ವಿಡಿಯೋ ಕೂಡ ವೈರಲ್‌(viral video)ಆಗಿತ್ತು. ಒಮ್ಮೊಮ್ಮೆ ಪ್ರಾಣಿಗಳು ತೋರುವ ಬುದ್ಧಿವಂತಿಕೆ, ಸಮಯಪ್ರಜ್ಞೆ, ಹೃದಯವಂತಿಕೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಜತೆಗೆ, ಕಣ್ಣಾಲಿಗಳು ತುಂಬಿ ಬರುವಂತೆಯೂ ಮಾಡುತ್ತದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಬೇರೆಯವರನ್ನು ಉಳಿಸಿದ ಸಾಕಷ್ಟು ಧೀರರಿದ್ದಾರೆ. ಮತ್ತೊಬ್ಬರ ಜೀವ ಉಳಿಸಿ ತಾವು ಪ್ರಾಣ ಬಿಟ್ಟ ತ್ಯಾಗಿಗಳೂ ಇದ್ದಾರೆ. ಹಾಗಂತ, ಬರೀ ಮನುಷ್ಯರಲ್ಲಿ ಮಾತ್ರವಲ್ಲ. ಪ್ರಾಣಿಗಳಲ್ಲೂ ನಾವು ಇದೇ ತೆರನಾದ ಹೃದಯವಂತಿಕೆಯನ್ನು ನೋಡಬಹುದು. 
 

Follow Us:
Download App:
  • android
  • ios