Asianet Suvarna News Asianet Suvarna News

ಮಂಗದ ಮರಿಗೆ ಮಗುವನ್ನು ಹೋಲಿಸಿದ ಎಲನ್ ಮಸ್ಕ್‌

 

  • ಕೋತಿ ಮರಿಗೆ ಮಗುವನ್ನು ಹೋಲಿಸಿದ ಎಲನ್‌ಮಸ್ಕ್‌
  • ತನ್ನ ಮಗುವೂ ಹೀಗೆ ಆಡುತ್ತಾನೆ ಎಂದ ಉದ್ಯಮಿ
Elon Musk compares son to an ape akb
Author
Bangalore, First Published Jan 22, 2022, 12:41 PM IST

ನ್ಯೂಯಾರ್ಕ್‌(ಜ.22): ಬೃಹತ್‌ ಉದ್ದಿಮೆದಾರ ಹಾಗೂ ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾದ ಸಂಸ್ಥಾಪಕ ಎಲನ್‌ ಮಸ್ಕ್ (Elon Musk) ಅವರು ತಮ್ಮ ಪುತ್ರನನ್ನು ಮಂಗದ ಮರಿಗೆ ಹೋಲಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಕೋತಿ ಮರಿಯೊಂದು ಆಟವಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿದ ಅವರು ತಮ್ ಪುತ್ರ ಎಕ್ಸ್‌ ಕೂಡ ಹೀಗೆಯೇ ಆಟವಾಡುತ್ತಾನೆ ಎಂದಿದ್ದಾರೆ. 

ಕೋತಿಮರಿಯೊಂದು ಆಟವಾಡುತ್ತಿರುವ  ವಿಡಿಯೋವನ್ನು ಭಾರತೀಯ ಆಡಳಿತ ಸೇವೆ (IAS) ಅಧಿಕಾರಿ ಸುಪ್ರಿಯಾ ಸಾಹು (Supriya Sahu) ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ನ್ನು ಶೇರ್ ಮಾಡಿದ ಎಲನ್‌ ಮಸ್ಕ್ ತಮ್ಮ ಪುತ್ರ ಎಕ್ಸ್‌ ಕೂಡ ಹೀಗೆ ಮಾಡುತ್ತಾನೆ ಎಂದಿದ್ದಾರೆ.  2020 ರ ವಿಡಿಯೋ ಇದಾಗಿದೆ.

 

ಇನ್ನು ಈ ವಿಡಿಯೋದಲ್ಲಿ ಮರಿ ಕೋತಿಯೊಂದು ಹುಲ್ಲಿನ ಮೇಲೆ ಅತ್ತಿಂದಿತ್ತ ಪಲ್ಟಿ ಹೊಡೆಯುತ್ತಾ ಆಟವಾಡುವ ದೃಶ್ಯವಿದೆ. ಇನ್ನು ಸುಪ್ರಿಯಾ ಸಾಹು ಈ ವಿಡಿಯೋವನ್ನು ಶೇರ್ ಮಾಡಿ ಹೇಗೆ ಕೋತಿಗಳು ಹಾಗೂ ಮಾನವರು ಒಂದೇ ರೀತಿ ಆಟವಾಡುತ್ತಿದ್ದಾರೆ ನೋಡಿ... ನಮ್ಮಂತೆಯೇ ಅವುಗಳು ಆಡುತ್ತಿವೆ ಎಂದು ಬರೆದುಕೊಂಡಿದ್ದರು. 

Satellites Launchedಆಕಾಶದಲ್ಲಿ ಕೃತಕ ಉಪಗ್ರಹಗಳ ಮೆರವಣಿಗೆ, 12 ಸಾವಿರ ಉಪಗ್ರಹ ಯೋಜನೆಗೆ ಎಲನ್ ಮಸ್ಕ್ ಚಾಲನೆ!

ಕಳೆದ ವರ್ಷ ಮೇ 5 ರಂದು ಎಲೋನ್ ಮಸ್ಕ್ ಹಾಗೂ ಪತ್ನಿ ಗ್ರಿಮ್ಸ್  ಅವರಿಗೆ ಮೊದಲ ಮಗು ಜನಿಸಿತ್ತು. ಅವರು ತಮ್ಮ ಗಂಡು ಮಗುವಿನ ಫೋಟೋವನ್ನು ಆಗ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು.  ಅಲ್ಲದೇ ಎಲನ್ ಮಸ್ಕ್‌ ಹಾಗೂ ಗ್ರೀಮ್ಸ್‌ ಮಧ್ಯೆ ಒಡಕು ಇದ್ದು, ಇದರ ನಡುವೆಯೂ ಅವರು ಸೌಹಾರ್ದಯುತ ಸಂಬಂಧವನ್ನು ಹಂಚಿಕೊಳ್ಳುತ್ತಾರೆ ಮತ್ತು  ಅವರ ಒಂದು ವರ್ಷದ ಮಗವಿಗೆ ಸಹ ಪೋಷಕರಾಗಿ ಇರಲು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದರು.

Tesla CEO Elon Musk ಈ ವರ್ಷ ಎಷ್ಟು ತೆರಿಗೆ ಕಟ್ಟಬಹುದು? ಗೆಸ್ ಮಾಡಿ, ಈ ಸುದ್ದಿ ಓದಿ!
ಕೆಲ ದಿನಗಳ ಹಿಂದೆ  ಟೆಸ್ಲಾದ ಸಂಸ್ಥಾಪಕ ಎಲಾನ್‌ ಮಸ್ಕ್(Elon Musk) ಅವರ ತದ್ರೂಪಿಯಂತೆ ಕಾಣುವ ವ್ಯಕ್ತಿ ಮಾಡಿದ ವಿಡಿಯೋವೊಂದು ಎಲ್ಲೆಡೆ ವೈರಲ್‌ ಆದ ಬಳಿಕ ಇದಕ್ಕೆ  ಎಲಾನ್‌ ಮಸ್ಕ್‌ ಪ್ರತಿಕ್ರಿಯಿಸಿದ್ದು, ಇದು ನೆಟ್ಟಿಗರಲ್ಲಿ ಸಂಚಲನವನ್ನೂ ಮೂಡಿಸಿತ್ತು.  ಎಲಾನ್‌ ಮಸ್ಕ್‌ ಅವರು ತಮಗೆ ಸಂಬಂಧಿಸಿದ ಪೋಸ್ಟ್‌ಗಳಿಗೆ ಪ್ರತ್ಯುತ್ತರಿಸಲು ಆಗಾಗ್ಗೆ ಟ್ವಿಟರ್‌ಗೆ ಹೋಗುತ್ತಾರೆ. ಹೀಗೆ ಅವರು ತಮ್ಮ ತದ್ರೂಪಿ (doppelganger) ಯಂತಿರುವ ವ್ಯಕ್ತಿ ಮಾಡಿದ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.  ಕೆಲವು ದಿನಗಳ ಹಿಂದೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಇದನ್ನು ಅನೇಕರು ಡೀಪ್‌ಫೇಕ್‌ ಎಂದೆಲ್ಲಾ ಕರೆದಿದ್ದರು. ಆದಾಗ್ಯೂ ಇದಕ್ಕೆ ಎಲೋನ್‌ ಮಸ್ಕ್‌ ಅವರು ನೀಡಿದ ಪ್ರತಿಕ್ರಿಯೆಯಿಂದಾಗಿ  ಈ ವಿಡಿಯೋಗೆ ಇನ್ನಷ್ಟು ಪ್ರಚಾರ ಸಿಕ್ಕಿತ್ತು.

ಎಲಾನ್‌ ಮಸ್ಕ್ ಅವರು ಇತ್ತೀಚೆಗೆ ಪ್ರತಿಷ್ಠಿತ ಟೈಮ್ಸ್‌ ನಿಯತಕಾಲಿಕದ 2021 ವರ್ಷದ ವ್ಯಕ್ತಿ ಪಟ್ಟಿಗೆ ಆಯ್ಕೆಯಾಗಿದ್ದರು. ಎಲಾನ್‌ ಮಸ್ಕ್‌ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ. ಆದಾಗ್ಯೂ ಸ್ವಂತ ಮನೆ ಹೊಂದಿಲ್ಲ ಮತ್ತು ಇತ್ತೀಚೆಗೆ ತನ್ನ ಸಂಪತ್ತನ್ನು ಮಾರುತ್ತಿದ್ದಾರೆ. ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿದ್ದಾರೆ ಹಾಗೂ ಸೂರ್ಯನನ್ನು ಬಳಸಿಕೊಂಡಿದ್ದಾರೆ. ಅವರು ಅನಿಲವನ್ನು ಬಳಸದ ಮತ್ತು ಕೇವಲ ಚಾಲಕನ ಅಗತ್ಯವಿಲ್ಲದ ಕಾರನ್ನು ಓಡಿಸುತ್ತಾರೆ. ಅವರ ಬೆರಳಿನಿಂದ, ಸ್ಟಾಕ್ ಮಾರುಕಟ್ಟೆಯು ಗಗನಕ್ಕೇರುತ್ತದೆ ಅಥವಾ ಪಾತಾಳಕ್ಕೆ ಇಳಿಯುತ್ತದೆ ಎಂದು ಟೈಮ್ಸ್‌ ಮ್ಯಾಗಜಿನ್‌ ಉಲ್ಲೇಖ ಮಾಡಿತ್ತು. 

Follow Us:
Download App:
  • android
  • ios