ಜಿದ್ದಾ ಜಿದ್ದಿನ ಘೋರ ಕಾಳಗದಲ್ಲಿ ಗೆದ್ದಿದ್ದು 'ಸಾವು': ಶ್ವಾನ, ಸರ್ಪದ ವಿಡಿಯೋ ವೈರಲ್..!
* ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ನಡೆದ ಘಟನೆ
* 'ಫೀಲ್ಡ್'ಗೆ ಇಳಿದು ಪ್ರತಿಷ್ಠೆಯ ಫೈಟ್ ಮಾಡಿದ್ದ 'ಘಟಾ'ನುಗಟಿಗಳು
* ಅಬ್ಬರಿಸಿ ಬೊಬ್ಬರಿದ ಸರ್ಪ.. ಪಟ್ಟು ಸಡಿಲಿಸದ ಶ್ವಾನ
ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ(ಜೂ.19): ಹಾವು ಮುಗುಸಿಯ ಸೆಣಸಾಟವನ್ನ ಸಾಮಾನ್ಯವಾಗಿ ಟಿವಿಯಲ್ಲೋ.. ನಿಜ ಜೀವನದಲ್ಲೋ ನೋಡಿರ್ತಿವಿ.. ಆದ್ರೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಇತ್ತೀಚೆಗೆ ಶ್ವಾನ ಹಾಗೂ ಘಟಸರ್ಪದ ಮಧ್ಯೆ ಘೋರ ಕಾಳಗ ನಡೆದಿದೆ ಹಾವು ಮುಂಗುಸಿಯಂತೆ ಕಾದಾಡಿರೋ ಈ ಶ್ವಾನ ಹಾಗೂ ಹಾವಿನ ಅಬ್ಬರದ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಫುಲ್ ವೈರಲ್ ಆಗ್ತಿದೆ.
ಮಾಲೀಕನ ಸರಹದ್ದಿನಲ್ಲಿ ಎಂಟ್ರಿಯಾಗಿದ್ದ ಸರ್ಪದ ಸದ್ದಡಗಿಸಲು ಹೋಗಿದ್ದ ಶ್ವಾನ ಉಸಿರು ಚೆಲ್ಲಿದೆ. 49 ಸೆಕೆಂಡ್ ನ ವೀಡಿಯೋದಲ್ಲಿ ಹಾವು ನಾಯಿಯ ರಣ ಅಬ್ಬದ ಕಾಳಗದ ದೃಶ್ಯ ಸೆರೆಯಾಗಿದೆ. ಸರ್ಪದ ಪ್ರತಿ ಪಟ್ಟುಗಳಿಗೆ ವೀರ ಸೇನಾನಿಯಂತೆ ಹೋರಾಡಿದ ಶ್ವಾನ ಸಾವಿನ ದವಡೆ ಸೇರಿದೆ. ಬುಸುಗುಟ್ಟ ಸರ್ಪವೂ ಸದ್ದು ನಿಲ್ಲಿಸಿದೆ.
ಗದಗನ ಸಂಗೀತ ರಥೋತ್ಸವದಲ್ಲಿ ಮಿಂದೆದ್ದ ಭಕ್ತ ಸಾಗರ: 2 ವರ್ಷಗಳ ನಂತರ ನಡೆದ ಅದ್ಧೂರಿ ಜಾತ್ರೆ..!
'ಫೀಲ್ಡ್' ಎಂಟ್ರಿಯಾಗಿದ್ದ 'ವಿಲನ್' ಸದ್ದುಡಗಿಸಲು ಬಂದಿದ್ದ ಶ್ವಾನ..!
ಅಂದ್ಹಾಗೆ, ಈ ಘಟನೆ ನಡೆದಿದ್ದ ನರಗುಂದ ತಾಲೂಕಿನ ಹದಲಿ ಗ್ರಾಮದ ಶೇಖರಪ್ಪ ಚಲವಾದಿ ಅನ್ನೋರ ಜಮೀನಲ್ಲಿ.. ಶೇಖರಪ್ಪ ನಿನ್ನೆ ಎಂದಿನಂತೆ ಜಮೀನು ಕೆಲಸ ಮಾಡ್ತಿದ್ರು.. ಜಮೀನಿಗೆ ಸುರಕ್ಷತೆಗೆ ಅಂತಾ ಎರಡು ಶ್ವಾನಗಳನ್ನ ಶೇಖರ್ ಸಾಕ್ಕೊಂಡಿದಾರೆ.. ಒಂದು ಮುಧೋಳ ಜಾತಿ ನಾಯಿ.. ಮತ್ತೊಂದು ಸಾಮಾನ್ಯ ತಳಿಯ ನಾಯಿ.. ಬೀದಿನಾಯಿ ಕಳೆದ ಎರಡು ವರ್ಷದಿಂದ ಶೇಖರ್ ಅವರ ಜಮೀನಲ್ಲೇ ಇತ್ತು.. ಮಧ್ಯಾಹ್ನದ ಊಟಕ್ಕೆ ಮನೆಯಿಂದ ರೊಟ್ಟಿ ಬರ್ತಿತ್ತು.. ಶೇಖರ್ ಅವರ ಮಗ ಅನಿಲ್ ಕುಮಾರ್ ಶ್ವಾನಗಳಿಗೆ ನಿತ್ಯ ರೊಟ್ಟಿ ತರ್ತಿದ್ರು.. ನಿನ್ನೆಯೂ ಶ್ವಾನಕ್ಕೆ ಬುತ್ತಿ ಕಟ್ಕೊಂಡು ಜಮೀನಿಗೆ ಬರ್ತಿದ್ರಂತೆ... ಜಮೀನಿ ಸಮೀಪಿಸುತ್ತಿದ್ದಂತೆ ಎಂದಿನಂತೆ ಶ್ವಾನ ಕಿರಣ್ ಅವರ ಬಳಿ ಓಡಿ ಪರ್ತಿತ್ತು, ರೊಟ್ಟಿ ತಿನ್ನೋದಕ್ಕೆ ಅಂತಾ ಅನಿಲ್ ಭಾವಿಸಿದ್ರು.. ಆದ್ರೆ, ಶ್ವಾನ ಮಾತ್ರ ಎದುರಾಳಿಯನ್ನ ಎದುರಿಸೋದಕ್ಕೆ ರೆಡಿಯಾಗಿತ್ತು..
ಹೊಂಚು ಹಾಕಿ ಹೊಲದ ಬದುವಿನಲ್ಲಿ ಕೂತಿದ್ದ ಸರ್ಪ ನಿಧಾನವಾಗಿ ಜಮೀನು ಎಂಟ್ರಿಯಾಗ್ತಿತ್ತು.. ಈ ದೃಶ್ಯ ಶ್ವಾನದ ಕಣ್ಣಿಗೆ ಬಿದ್ದಿದ್ದೇ ತಡ.. ಓಡೋಡಿ ಬಂದು ಹಾವಿನ ಬಾಲ ಕಚ್ಚಿದೆ.. ಬಿಡಿಸುವ ಪ್ರಯತ್ನಕ್ಕೆ ಅನಿಲ್ ಮುಂದಾದ್ರು ಸರ್ಪದ ಸದ್ದಿಗೆ ಅವ್ರು ಭಯಗೊಂಡಿದ್ರಂತೆ. ಅಲ್ದೆ, ಶ್ವಾನದ ಅಬ್ಬರ ಕಂಡು ಅಚ್ಚರಿಗೊಂಡಿದ್ರು.. ಮೊಬೈಲ್ ಕ್ಯಾಮರಾದಲ್ಲಿ ಘಟನೆಯ ಚಿತ್ರೀಕರಣ ಮಾಡೋದಕ್ಕೆ ಮುಂದಾಗಿದ್ರು.. ಆರಂಭದಲ್ಲಿ ಸರ್ಪದ ಬಾಲ ಹಿಡಿದು ಎಳೆದಾಡಿದ ಶ್ವಾನ ಮೇಲು ಗೈ ಸಾಧಿಸಿದೆ ಅಂತಾ ಅನ್ಕೊಂಡಿದ್ರು.. ಆದ್ರೆ, ಹೋರಾಟದಲ್ಲಿ ಎರಡು ಪ್ರಾಣಗಳು ಹಾರಿ ಹೋಗಿದ್ವು..
ಗದಗ: ಬಾರ್ ಬೆಂಡಿಂಗ್ ಕೆಲಸ ಮಾಡೋ ಹುಡುಗ ಪಿಯುಸಿಯಲ್ಲಿ ರಾಜ್ಯಕ್ಕೆ 2ನೇ ರ್‍ಯಾಂಕ್..!
ರೊಟ್ಟಿ ಹಾಕಿದ್ದಕ್ಕೆ ಶ್ವಾನಕ್ಕಿತ್ತು ಸ್ವಾಮಿ ನಿಷ್ಠೆ
ಕಾಳದಲ್ಲಿ ಸಾವನಪ್ಪಿದ ಶ್ವಾನ ಶೇಖರಪ್ಪ ಅವರಿಗೆ ಬೀದಿಯಲ್ಲಿ ಸಿಕ್ಕ ನಾಯಿ.. ಜಮೀನು ಜೊತೆಗೆ ಕೋಳಿ ಫಾರ್ಮ್ ಮಾಡ್ಕೊಂಡಿರೋ ಶೇಖರಪ್ಪ ಇರ್ಲಿ ಅಂತಾ ಒಂದು ಹೆಚ್ಚುವರಿ ನಾಯಿ ಸಾಕ್ಕೊಂಡಿದ್ರು.. ನಿತ್ಯ ರೊಟ್ಟಿ ಹಾಕಿದ್ದಕ್ಕೆ ಶ್ವಾನ ತುಂಬಾನೇ ನಿಯತ್ತಾಗಿ ಜಮೀನು ಸರಹದ್ದು ಕಾಪಾಡ್ತಿತ್ತಂತೆ.. ಶ್ವಾನದ ಒಡನಾಟದ ಬಗ್ಗೆ ಏಷ್ಯ ನೆಟ್ ಸುವರ್ಣ ನ್ಯೂಸ್ ಬಳಿ ಹೇಳಿಕೊಂಡ ಕಿರಣ್ ಕುಮಾರ್, ಈ ಶ್ವಾನ ಮೊದಲಿನಿಂದಲೂ ತುಂಬಾ ಎಗ್ರೆಸ್ಸಿವ್ ಆಗಿತ್ತು.. ಜಮೀನಿಗೆ ಬರುವ ಯಾವುದೇ ಪ್ರಾಣಿಗಳನ್ನ ಹೊರ ಹಾಕದೇ ಬಿಡುತ್ತಿರಲಿಲ್ಲ.. ಶ್ವಾನಕ್ಕೆ ಹಾವು ಕಚ್ಚಿದಾಗ ವೈದ್ಯರಿಗೆ ತೋರಿಸಿದ್ದೆ. ಆದ್ರೆ ಅದಾಗ್ಲೆ ಸಮಯ ಮೀರಿತ್ತು ಎಂದು ಶ್ವಾನದ ಕೊನೆ ಹೋರಾಟದ ಘಳಿಗೆ ಬಗ್ಗೆ ಹೇಳಿಕೊಂಡಿದ್ದಾರೆ.
ಅದ್ಕೆ ಹೇಳೋದು ಶ್ವಾನಕ್ಕೆ ಇರೋ ನಿಯತ್ತು ಯಾರಿಗೂ ಇರಲ್ಲ ಅಂತಾ.. ರೊಟ್ಟಿಯ ಋಣಕ್ಕೆ ಶ್ವಾನ ಜೀವ ಚೆಲ್ಲಿದೆ.. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ನೋಡ್ತಿರೋ ಜನ ಮೆಚ್ಚುಗೆ ವ್ಯಕ್ತ ಪಡಸ್ತಿದ್ದಾರೆ.. ಸಾಕಿದ್ರೆ ಇಂಥ ಧೈರ್ಯವಂತ ನಾಯಿ ಸಾಕ್ಬೇಕು ಅಂತಾ ಮಾತ್ನಾಡ್ಕೊತಿದಾರೆ.