ಹಾವು ಮುಂಗುಸಿಯ ನಡುವಿನ ಸಮರ : ವಿಡಿಯೋ ವೈರಲ್
- ಹಾವು ಮುಂಗುಸಿಯ ಭೀಕರ ಹೋರಾಟ
- ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
- ಹಾವನ್ನು ಓಡಿಸಿದ ಮುಂಗುಸಿ
ಜಗಳಾಡುವವರನ್ನು ಒಬ್ಬರಿಗೊಬ್ಬರು ದ್ವೇಷ ಸಾಧಿಸುವವರನ್ನು ಹಾವು ಮುಂಗುಸಿಗಳಂತೆ ಕಿತ್ತಾಡುತ್ತಿದ್ದಾರೆ. ಅವರ ಸಂಬಂಧ ಹಾವು ಮುಂಗುಸಿಯಂತೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದರೆ ಹಾವು ಮುಂಗುಸಿಗಳು ಹೇಗೆ ಕಿತ್ತಾಡುತ್ತವೆ ಎಂಬುದನ್ನು ಬಹುತೇಕ ಎಲ್ಲರೂ ನೋಡಿರುವ ಸಾಧ್ಯತೆ ಕಡಿಮೆ. ಇವುಗಳ ಕಿತ್ತಾಟ ರೆಕಾರ್ಡ್ ಆಗಿರುವಂತದ್ದು ತುಂಬಾ ಅಪರೂಪ. ಅದಾಗ್ಯೂ ಹಾವು ಮುಂಗುಸಿಗಳ ಕಿತ್ತಾಟದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೇಳಿ ಕೇಳಿ ಮುಂಗುಸಿ ಹಾವುಗಳ ಪರಮ ಶತ್ರು. ಸಣ್ಣ ಸಣ್ಣ ಕಾಲುಗಳನ್ನು ಹೊಂದಿರುವ ಸಣ್ಣ ಗಾತ್ರದ ಪ್ರಾಣಿ ಮುಂಗಿಸಿ ತನಗಿಂತ ಬಲಾಢ್ಯ ಸರೀಸೃಪವಾದ ಹಾವಿನೊಂದಿಗೆ ಹೋರಾಡಿ ಗೆಲ್ಲುತ್ತದೆ. ಇತ್ತ ನಾಗರಹಾವುಗಳು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದ್ದು, ಇವುಗಳ ವಿಷ 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮನುಷ್ಯರನ್ನು ಕೊಲ್ಲುವುದು. ಆದರೂ ಇದು ಮುಂಗುಸಿಗೆ ಹೆದರುತ್ತದೆ. ಏಕೆಂದರೆ ಹಾವು ಕಡಿದರು ಮುಂಗುಸಿ ಬದುಕಬಲ್ಲದು ಮತ್ತು ನಾಗರಹಾವುಗಳೊಂದಿಗಿನ ಕಾದಾಟದ ಶೇ. 75 ರಿಂದ 80 ಪ್ರಕರಣಗಳಲ್ಲಿ, ಮುಂಗುಸಿ ಯಾವಾಗಲೂ ಗೆಲ್ಲುತ್ತದೆ. ಭಾರತೀಯ ಬೂದು ಮುಂಗುಸಿ (ನೆವ್ಲಾ) ನಿರ್ದಿಷ್ಟವಾಗಿ ಕಾದಾಡಲು ಮತ್ತು ನಾಗರಹಾವುಗಳಂತಹ ವಿಷಕಾರಿ ಹಾವುಗಳನ್ನು ತಿನ್ನುವ ತನ್ನ ಗುಣಕ್ಕೆ ಹೆಸರುವಾಸಿಯಾಗಿದೆ.
ಭಾರತೀಯ ಬೂದು ಮುಂಗುಸಿಯೊಂದು (Indian gray mongoose) ನಾಗರಹಾವಿನೊಂದಿಗೆ ತೀವ್ರವಾಗಿ ಹೋರಾಡುತ್ತಿರುವ ವೀಡಿಯೊವೊಂದು ವೈರಲ್ ಆಗುತ್ತಿದೆ. ನಾಗರಹಾವು ಮುಂಗುಸಿಯ ಸೀಮೆಯನ್ನು ಪ್ರವೇಶಿಸಿದಂತೆ ಕಾಣುತ್ತದೆ ಮತ್ತು ಮುಂಗುಸಿಯೊಂದಿಗೆ ಮುಖಾಮುಖಿಯಾದ ನಂತರ, ನಾಗರಹಾವು ತನ್ನ ಪ್ರಾಣವನ್ನು ಉಳಿಸಲು ಅಲ್ಲಿಂದ ಓಡಿ ಹೋಗುತ್ತಿರುವುದು ಹಾಗೂ ಮುಂಗುಸಿಯು ತನ್ನ ಸೀಮೆಯಿಂದ ಅದನ್ನು ಅಟ್ಟಿಸಿಕೊಂಡು ಹೋಗುವುದನ್ನು ನೋಡಬಹುದು. 'ಮುಂಗುಸಿ ತನ್ನ ನೆಚ್ಚಿನ ಊಟದೊಂದಿಗೆ' ಎಂಬ ಶೀರ್ಷಿಕೆಯೊಂದಿಗೆ ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ.
ಹಾವು- ಮುಂಗುಸಿ ಕಾದಾಟದಲ್ಲಿ ಗೆದ್ದಿದ್ದು ಯಾರು?
ಹಾವು-ಮುಂಗಿಸಿ ಭೀಕರ ಹೋರಾಟ
ಮರದ ಮೇಲಿದ್ದ ಹಾವನ್ನು ಜಂಪ್ ಮಾಡಿ ಹಿಡಿದ ಮುಂಗುಸಿ ವಿಡಿಯೋ 2019 ರಲ್ಲಿ ವೈರಲ್ ಆಗಿತ್ತು. ಎರಡು ಬಾರಿ ಜಂಪ್ ಮಾಡಿ ಸೋತಿದ್ದ ಮುಂಗಿಸಿ ಛಲ ಬಿಡದ ತ್ರಿವಿಕ್ರಮನಂತೆ ಕೊನೆಗೂ ಹೋರಾಟ ಮಾಡಿ ಗೆದ್ದಿದೆ. ಕೂಡ್ಲಿಗಿ ಹೊರವಲಯದಲ್ಲಿ ನಡೆದ ಪ್ರಾಣಿಗಳ ಹೋರಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಸ್ತೆ ಮಧ್ಯೆ ಹಾವು - ಮುಂಗುಸಿ ಕಾಳಗ ನೋಡಿ ವಾಹನ ಸವಾರರು ಥ್ರಿಲ್..!