ರಜೆ ಕೊಡಿ ಪ್ಲೀಸ್ ತಾಯಿ ಕೊಂದೇ ಬಿಡುತ್ತಾರೆ, ಬಾಸ್‌ಗೆ ಮೆಸೇಜ್ ಹಾಕಿದ ಉದ್ಯೋಗಿಗೆ ಸಿಕ್ಕ ಉತ್ತರವೇನು?
ದಯವಿಟ್ಟು ನನಗೆ ರಜೆ ನೀಡಿ. ಕುಟುಂಬ ಜೊತೆ ಖಾಸಗಿ ಕಾರ್ಯಕ್ರಮಕ್ಕೆ ಹಾಜರಾಗಬೇಕಿದೆ. ನೀವು ರಜೆ ಕೊಡದಿದ್ದರೆ ತಾಯಿ ನನ್ನ ಕೊಂದೇ ಬಿಡುತ್ತಾರೆ ಎಂದು ಉದ್ಯೋಗಿ ಬಾಸ್‌ಗೆ ಮೆಸೇಜ್ ಮಾಡಿದ್ದಾರೆ. ಇದಕ್ಕೆ ಬಾಸ್ ಉತ್ತರ ಏನು? ಇಲ್ಲಿದೆ.
ಉದ್ಯೋಗಳು ರಜೆ ವಿಚಾರವಾಗಿ ಹಲವು ಘಟನೆಗಳು ನಡೆದಿದೆ. ರಜೆ ನೀಡದ ಮೇಲಧಿಕಾರಿ ಮೇಲೆ ದಾಳಿ, ರಜೆಗಾಗಿ ನಕಲಿ ಕತೆ ಕಟ್ಟಿ ಸಿಕ್ಕಿ ಬಿದ್ದ ಘಟನೆಗಳು ಸಾಕಷ್ಟಿವೆ. ರಜೆ ಕೊಡದ ಕಾರಣ ಕೆಲಸ ಬಿಟ್ಟ ಊದಾಹರಣೆಗಳೂ ಇವೆ. ಇದೀಗ ಬಾಸ್ ಹಾಗೂ ಉದ್ಯೋಗಿ ನಡುವಿನ ರಜೆ ವಿಚಾರದ ಮೆಸೇಜ್ ಭಾರಿ ಸಂಚಲನ ಸೃಷ್ಟಿಸಿದೆ. ಮಹಿಳಾ ಉದ್ಯೋಗಿ ಅರ್ಧ ದಿನ ರಜೆಗಾಗಿ ಬಾಸ್‌ಗೆ ಮೆಸೇಜ್ ಮಾಡಿದ್ದಾರೆ. ಈ ವೇಳೆ ನೀವು ರಜೆ ನೀಡದಿದ್ದರೆ ತಾಯಿ ನನ್ನನ್ನು ಕೊಂದೇ ಬಿಡುತ್ತಾರೆ ಎಂದಿದ್ದಾಳೆ. ಬಾಸ್ ಕೂಡ ಅಷ್ಟೇ ಖಡಕ್ ಆಗಿ ಉತ್ತರಿಸಿದ್ದಾರೆ. ಈ ಮೆಸೇಜ್ ಸ್ಕ್ರೀನ್‌ಶಾಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ.
ಪ್ರಾಚಿ ಅನ್ನೋ ಎಕ್ಸ್ ಖಾತೆಯಲ್ಲಿ ಮಹಿಳಾ ಉದ್ಯೋಗಿ ಬಾಸ್ ಜೊತೆ ನಡೆಸಿದ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗಿದೆ. ಇಲ್ಲಿ ಮಹಿಳಾ ಉದ್ಯೋಗಿ ಶನಿವಾರ ಅರ್ಧ ದಿನ ರಜೆ ಅವಶ್ಯಕತೆ ಇದೆ ಎಂದು ತನ್ನ ಬಾಸ್‌ಗೆ ವ್ಯಾಟ್ಸಾಪ್ ಮೆಸೇಜ್ ಮಾಡಿದ್ದಾರೆ. ರಜೆ ಅವಶ್ಯಕತೆ ಹಾಗೂ ಕೆಲಸದ ಪ್ರಾಮುಖ್ಯತೆ ಅರಿತುಕೊಂಡು ರಜೆಗೆ ಮನವಿ ಮಾಡಿದ್ದಾಳೆ.
ಸಿಕ್ ಲೀವ್‌ಗೆ 7 ದಿನ ಮೊದಲೇ ತಿಳಿಸಬೇಕು, ಬಾಸ್ ಮೆಸೇಜ್‌ಗೆ ನೆಟ್ಟಿಗರ ಕ್ಲಾಸ್!
ಹೆಲೋ ಮೇಡಂ, ಈ ಮೂಲಕ ನಾನು ವಿನಂತಿಸುಕೊಳ್ಳುವುದೇನೆಂದರೆ, ಈ ಶನಿವಾರ ನನಗೆ ಅರ್ಧ ದಿನ ರಜೆಯ ಅವಶ್ಯಕತೆ ಇದೆ. ಆದರೆ ಈ ಪ್ರಾಜೆಕ್ಟ್ ಸಮಯದಲ್ಲಿ ರಜೆ ನೀಡುವುದು ಕಷ್ಟ ಅನ್ನೋದು ನನಗೆ ತಿಳಿದಿದೆ. ಆದರೆ ಅನಿವಾರ್ಯ ಕಾರಣಗಳಿಂದ ನನಗೆ ದಯವಿಟ್ಟು ರಜೆ ಅನುಮತಿಸಿ. ಖಸಾಗಿ ಕಾರ್ಯಕ್ರಮದಲ್ಲಿ ನಾನು ಕುಟುಂಬದ ಜೊತೆ ಪಾಲ್ಗೊಳ್ಳಬೇಕಿದೆ. ದಯವಿಟ್ಟು ರಜೆ ನೀಡಿ ಎಂದು ಉದ್ಯೋಗಿ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಾಳೆ.
ಉದ್ಯೋಗಿಯ ಈ ಮೆಸೇಜ್‌ಗೆ ಬಾಸ್ ಪ್ರತಿಕ್ರಿಯೆ ನೀಡಿದ್ದಾರೆ. ದಯವಿಟ್ಟು ರಜೆ ತೆಗೆದುಕೊಳ್ಳುವುದು ಬೇಡ ಎಂದು ಮೆಸೇಜ್ ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಮೆಸೇಜ್ ಕಳುಹಿಸಿ ಇದು ನನ್ನ ಮನವಿ ಎಂದು ಮೂರು ಇಮೋಜಿ ಹಾಕಿ ಮೆಸೇಜ್ ಮಾಡಿದ್ದಾರೆ. ಬಾಸ್ ಕೂಡ ಭಾವನಾತ್ಮಕವಾಗಿ ಮೆಸೇಜ್ ಕಳುಹಿಸಿದ್ದಾರೆ. ಆದರೆ ರಜೆಗೆ ಕಮಿಟ್ ಆಗಿರುವ ಮಹಿಳಾ ಉದ್ಯೋಗಿ, ನಿಜಕ್ಕೂ ನನಗೆ ರಜೆಯ ಅವಶ್ಯಕತೆ ಇದೆ, ರಜೆ ಕೊಡದಿದ್ದರೆ ನನ್ನ ತಾಯಿ ಕೊಂದೇ ಬಿಡುತ್ತಾರೆ ಎಂದು ಮೆಸೇಜ್ ಮಾಡಿದ್ದಾರೆ.
ಮಹಿಳಾ ನೌಕರರಿಗೆ ಕೇಂದ್ರದ ಕೊಡುಗೆ, ಬಾಡಿಗೆ ತಾಯ್ತನದ ಸಂದರ್ಭದಲ್ಲಿ 6 ತಿಂಗಳ ರಜೆ!
ರಜೆ ವಿಚಾರದಲ್ಲಿ ತಾಯಿ ಮಧ್ಯಪ್ರವೇಶ ಪಡೆದ ಬೆನ್ನಲ್ಲೇ ಬಾಸ್ ಪ್ರತಿಕ್ರಿಯೆ ನೀಡಿಲ್ಲ. ಈ ಸ್ಕ್ರೀನ್‌ಶಾಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಅರ್ಧ ದಿನ ರಜೆಗೆ ಇಷ್ಟು ಮನವಿ ಮಾಡಬೇಕಾ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ರೀತಿಯ ಕಂಪನಿಯಲ್ಲಿ ಕೆಲಸ ಮಾಡದಿರುವುದೇ ಲೇಸು ಎಂದು ಮತ್ತೆ ಕೆಲವರು ಸೂಚಿಸಿದ್ದಾರೆ.