Jeet Pabari death : ಕ್ರಿಕೆಟಿಗ ಚೇತೇಶ್ವರ್ ಪೂಜಾರ್ ಅವರ ಭಾಮೈದ ಜೀತ್ ಪಬಾರಿ ಅವರು ರಾಜ್‌ಕೋಟ್‌ನಲ್ಲಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಒಂದು ವರ್ಷದ ಹಿಂದೆ ಅವರ ಮಾಜಿ ಗೆಳತಿ ಅತ್ಯಾ*ಚಾರ ದೂರು ದಾಖಲಿಸಿದ ದಿನವೇ ಈ ದುರಂತ ಸಂಭವಿಸಿದ್ದು, ಈ ಪ್ರಕರಣದಿಂದಾಗಿ ಅವರ ವಿವಾಹ ನಿಶ್ಚಿತಾರ್ಥ ರದ್ದಾಗಿತ್ತು.

ಮಾಜಿ ಗೆಳತಿಯಿಂದ ರೇ*ಪ್ ಕೇಸ್: ವರ್ಷದ ನಂತರ ಸಾವಿಗೆ ಶರಣಾದ ಜೀತ್ ಪಬಾರಿ:

ಮಾಜಿ ಗೆಳತಿ ಅತ್ಯಾ*ಚಾರ ದೂರು ದಾಖಲಿಸಿದ ಒಂದು ವರ್ಷದ ನಂತರ ಕ್ರಿಕೆಟರ್ ಚೇತೇಶ್ವರ್ ಪೂಜಾರ್ ಅವರ ಭಾಮೈದ(ಹೆಂಡ್ತಿ ಸೋದರ) ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ನಡೆದಿದೆ. ಕ್ರಿಕೆಟರ್ ಚೇತೇಶ್ವರ್ ಪೂಜಾರ್ ಅವರ ಭಾಮೈದ ಜೀತ್ ರಸಿಕ್‌ಭಾಯ್ ಪಬಾರಿ ಅವರು ಸಾವಿಗೆ ಶರಣಾಗಿದ್ದಾರೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಈ ಘಟನೆ ನಡೆದಿದೆ. ಇದೇ ದಿನ ಕಳೆದ ವರ್ಷ ಅಂದರೆ 2024ರ ನವಂಬರ್ 26ರಂದು ಜೀತ್ ಪಬಾರಿ ಅವರ ಮಾಜಿ ಗೆಳತಿ ಅವರ ವಿರುದ್ಧ ಅತ್ಯಾ*ಚಾರ ದೂರು ದಾಖಲಿಸಿದ್ದರು. ಇದಾಗಿ ಸರಿಯಾಗಿ ಒಂದು ವರ್ಷದ ನಂತರ ಅವರು ನೇಣಿಗೆ ಶರಣಾಗಿದ್ದಾರೆ.

ಕೂಡಲೇ ಅವರನನ್ನು ಅವರ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಮಲ್ವಿಯಾನಗರ ಪೊಲೀಸರು ತಂಡ ಸುದ್ದಿ ತಿಳಿದು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿರುವ ವಿಚಾರ ತಿಳಿದಿದೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಮದುವೆಯ ನೆಪವೊಡ್ಡಿ ದೈಹಿಕ ಸಂಬಂಧ ಬೆಳೆಸಿದ ಆರೋಪ:

ಇದೇ ಮಲ್ವಿಯಾನಗರ ಪೊಲೀಸ್ ಠಾಣೆಯಲ್ಲೇ ಜೀತ್ ಪಬಾರಿ ಅವರ ಮಾಜಿ ಗೆಳತಿ ಅವರ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದರು. ಮದ್ವೆಯಾಗುವ ನೆಪವೊಡ್ಡಿ ನನ್ನ ಜೊತೆ ಒತ್ತಾಯಪೂರ್ವಕವಾದ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂದು ಜೀತ್ ಪಬಾರಿ ಮಾಜಿ ಗೆಳತಿ ಆರೋಪಿಸಿದ್ದರು. ಇದಾದ ನಂತರ ವಿವಾಹ ನಿಶ್ಚಿತಾರ್ಥವನ್ನು ರದ್ದು ಮಾಡಲಾಗಿತ್ತು.

ಜೀತ್ ಪಬಾರಿ ಚೇತೇಶ್ವರ್ ಪೂಜಾರ ಅವರ ಪತ್ನಿಯ ಸೋದರ

ಜೀತ್ ಪಬಾರಿ ಚೇತೇಶ್ವರ್ ಪೂಜಾರ ಅವರ ಪತ್ನಿಯ ಸೋದರನಾಗಿದ್ದು, ಘಟನೆಯಿಂದಾಗಿ ಅವರು ತಮ್ಮ ಸೋದರನನ್ನು ಕಳೆದುಕೊಂಡಿದ್ದಾರೆ. ಚೇತೇಶ್ವರ್ ಅವರ ಅತ್ತೆ ಮನೆಯವರು ಮೂಲತಃ ಜಾಮ್‌ಜೋಧ್‌ಪುರ ಮೂಲದವರಾಗಿದ್ದು, ಕಳೆದ 20 ವರ್ಷಗಳಿಂದ ಅವರು ರಾಜ್‌ಕೋಟ್‌ನಲ್ಲಿ ನೆಲೆಸಿದ್ದರು. ಅವರ ಕುಟುಂಬ ಹತ್ತಿ ಜಿನ್ನಿಂಗ್ ಕಾರ್ಖಾನೆಯನ್ನು ಹೊಂದಿದೆ.

ಚೇತೇಶ್ವರ್ ಪೂಜಾರ ಅವರ ಪತ್ನಿ ಪೂಜಾ ಅವರಿಗೆ ಒಬ್ಬ ತಮ್ಮ ಮತ್ತು ಒಬ್ಬ ತಂಗಿ ಇದ್ದಾರೆ. ಅವರು ಗುಜರಾತ್‌ನ ಗೊಂಡಲ್‌ನಲ್ಲಿ ಜನಿಸಿದರು. ಅವರು ಅಬುವಿನ ಸೋಫಿಯಾ ಶಾಲೆಯಲ್ಲಿ 10 ನೇ ತರಗತಿಯವರೆಗೆ ಓದಿದ್ದು, ನಂತರ, ಅಹಮದಾಬಾದ್‌ನಲ್ಲಿ ಪಿಯುಸಿ ಪೂರ್ಣಗೊಳಿಸಿದರು ಮತ್ತು ಬಾಂಬೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚೇತೇಶ್ವರ ಅವರನ್ನು ಭೇಟಿಯಾಗುವ ಮೊದಲು ಅವರು ಒಂದು ವರ್ಷ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.

ವಿಶೇಷ ಮನವಿ:

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777