ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ದಿಢೀರ್ ನಿವೃತ್ತಿಗೆ ನಿಜವಾದ ಕಾರಣ ಏನು?
ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದ ಚೇತೇಶ್ವರ್ ಪೂಜಾರ, ದಿಢೀರ್ ಎನ್ನವಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದೀಗ ಪೂಜಾರ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದೇಕೆ ಎನ್ನುವುದನ್ನು ನೋಡೋಣ ಬನ್ನಿ.

ಚೇತೇಶ್ವರ್ ಪೂಜಾರ ನಿವೃತ್ತಿ
ಭಾರತ ಕ್ರಿಕೆಟ್ ತಂಡಕ್ಕೆ ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಮುಖ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ರಾಜ್‌ಕೋಟ್‌ನಿಂದ ಟೀಂ ಇಂಡಿಯಾ ವರೆಗೆ
ಪೂಜಾರ ತಮ್ಮ ಬಾಲ್ಯದ ಕನಸನ್ನು ನೆನಪಿಸಿಕೊಳ್ಳುತ್ತಾ.. “ನಾನು ರಾಜ್‌ಕೋಟ್ ಎಂಬ ಸಣ್ಣ ಪಟ್ಟಣದಿಂದ ಬಂದ ಹುಡುಗ. ಭಾರತ ಕ್ರಿಕೆಟ್ ತಂಡದಲ್ಲಿ ಆಡಬೇಕೆಂಬ ಕನಸಿನೊಂದಿಗೆ ನನ್ನ ಹೆತ್ತವರೊಂದಿಗೆ ನನ್ನ ನಡಿಗೆ ಆರಂಭಿಸಿದೆ.”
ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಪೂಜಾರ
ತಮ್ಮ ಕ್ರಿಕೆಟ್ ಜೀವನದಲ್ಲಿ ಸಹಕರಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಗೆ ಹಾಗೂ ಅಪಾರ ಅಭಿಮಾನಿಗಳಿಗೆ ಪೂಜಾರ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ
ರಾಹುಲ್ ದ್ರಾವಿಡ್ ನಂತರ ಭಾರತದ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಗೋಡೆ ಎಂದು ಪೂಜಾರ ಗುರುತಿಸಿಕೊಂಡಿದ್ದರು. ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಅತ್ಯಂತ ನಂಬಿಗಸ್ಥ ಬ್ಯಾಟರ್ ಆಗಿ ಪೂಜಾರ ಗುರುತಿಸಿಕೊಂಡಿದ್ದರು.
ಪೂಜಾರ ವೃತ್ತಿಜೀವನದ ಅಂಕಿಅಂಶಗಳು
ಪೂಜಾರ ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿ 19 ಶತಕ ಹಾಗೂ 35 ಅರ್ಧಶತಕ ಸೇರಿದಂತೆ ಒಟ್ಟಾರೆ 7,195 ರನ್ ಬಾರಿಸಿದ್ದರು. ಇದರ ಜತೆಗೆ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಭಾರತಕ್ಕೆ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ನಿವೃತ್ತಿಗೆ ಕಾರಣ
37 ವರ್ಷದ ಚೇತೇಶ್ವರ್ ಪೂಜಾರಾ 2023ರ ಜೂನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಂತರ ಭಾರತದ ಪರ ಆಡಿಲ್ಲ. ಅಂದಿನಿಂದ ಆಯ್ಕೆಗಾರರು ಅವರನ್ನು ನಿರ್ಲಕ್ಷಿಸಿದ್ದೇ ಅವರ ನಿವೃತ್ತಿ ನಿರ್ಧಾರಕ್ಕೆ ಪ್ರಮುಖ ಕಾರಣ.