ನಿರೀಕ್ಷೆಗೂ ಮೀರಿದ ಮಾರ್ಕ್ಸ್ ನೋಡಿ ಮೂರ್ಛೆ ಹೋದ 10ನೇ ಕ್ಲಾಸ್ ಬಾಲಕ
ವಿದ್ಯಾರ್ಥಿಯೊಬ್ಬ ತನಗೆ ಭಾರೀ ಉತ್ತಮ ಫಲಿತಾಂಶ ಬಂದಿದ್ದು ನೋಡಿ ಮೂರ್ಛೆ ಹೋದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ದುರಂತವೆಂದರೆ ಸದ್ಯ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೇರಠ್: ಪರೀಕ್ಷಾ ಫಲಿತಾಂಶದ ವೇಳೆ ತಮ್ಮ ಹೆಸರು ಎಲ್ಲಿದೆ ಎಂದು ಆರಂಭದಿಂದ ನೋಡುವವರು ಒಂದಿಷ್ಟು ಜನರಾದರೆ, ಇನ್ನೊಂದಿಷ್ಟು ಜನರು ಪಟ್ಟಿಯಲ್ಲಿ ಕೆಳಗಿನಿಂದ ನೋಡುವವರೂ ಇದ್ದಾರೆ. ಇನ್ನು ಕೆಲವರು ಎಲ್ಲಾದರೂ ಉಂಟಾ ಎಂದು ತಡಕಾಡುವವರು. ಆದರೆ ವಿದ್ಯಾರ್ಥಿಯೊಬ್ಬ ತನಗೆ ಭಾರೀ ಉತ್ತಮ ಫಲಿತಾಂಶ ಬಂದಿದ್ದು ನೋಡಿ ಮೂರ್ಛೆ ಹೋದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ದುರಂತವೆಂದರೆ ಸದ್ಯ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ಉತ್ತರ ಪ್ರದೇಶದ 10ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಇಲ್ಲಿಯ ಮಹಾಋಷಿ ದಯಾನಂದ ಇಂಟರ್ ಕಾಲೇಜಿನ ವಿದ್ಯಾರ್ಥಿ ಅಂಶುಲ್ ಕುಮಾರ್‌ಗೆ ಶೇ.93.5ರಷ್ಟು ಫಲಿತಾಂಶ ಬಂದಿದೆ. ಫಲಿತಾಂಶ ನೋಡಿದ ಕೂಡಲೇ ಆತನಿಗೇ ಭಾರೀ ಅಚ್ಚರಿ ಉಂಟಾಗಿ ಖುಷಿಯಲ್ಲಿ ಮೂರ್ಛೆ ಹೋಗಿದ್ದಾನೆ. ಕೂಡಲೇ ಆತನನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
98.5 ಪರ್ಸೆಂಟ್ ಅಂಕ ಗಳಿಸಿದ ವಿದ್ಯಾರ್ಥಿನಿ ಸೌಂದರ್ಯ ಗೇಲಿ ಮಾಡಿದ ನೆಟ್ಟಿಗರು! ಇದೆಂಥ ಕೊಳಕು ಮನಸ್ಸಿನ ಜನರಿವರು?
ಈ ವರ್ಷ ಸಿಇಟಿ ಪರೀಕ್ಷೆಗೆ ನೀಡಿದ್ದು 2023ರ ಪತ್ರಿಕೆಯಾ?: ಇಂದು ಎಬಿವಿಪಿ ಪ್ರತಿಭಟನೆ