ಆತ್ಮನಿರ್ಭರ ಭಾರತವೇ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವ: ಮೋದಿ ಮನ್‌ ಕೀ ಬಾತ್

ಪ್ರಧಾನಿ ನರೇಂದ್ರ ಮೋದಿ 66ನೇ ಮನ್‌ ಕೀ ಬಾತ್‌| ಭಾರತಕ್ಕೆ ಗೆಳೆತನ ನಿಭಾಯಿಸುವುದೂ ಗೊತ್ತು, ವಿರೋಧಿಗಳನ್ನು ಮಣಿಸುವುದೂ ಗೊತ್ತು| ಕ್ಯಾತೆ ತೆಗೆದ ಚೀನಾಗೆ ನಿಶ್ಚಿತವಾಗಿ ತಕ್ಕ ಪಾಠ| ಆತ್ಮನಿರ್ಭರ ಭಾರತವೇ ಲಡಾಖ್ ಗಡಿಯಲ್ಲಿ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವ

Modi Mann Ki Baat Highlights No one can mess with India we know how to answer back says PM

ನವದೆಹಲಿ(ಜೂ.28): ಪ್ರಧಾನಿ ನರೇಂದ್ರ ಮೋದಿ 66ನೇ ಮನ್‌ ಕೀ ಬಾತ್‌ ಮೂಲಕ ದೇಶವನ್ನುದ್ದೆಶಿಸಿ ಮಾತನಾಡಿದ್ದಾರ. ಕೊರೋನಾ, ಭಾರತ-ಚೀನಾ ಗಡಿ ಸಂಘರ್ಷ, ಮುಂಗಾರು ಸೇರಿ ಅನೇಕ ವಿಚಾರಗಳ ಕುರಿತು ಪಿಎಂ ಮೋದಿ ಮಾತನಾಡಿದ್ದಾರೆ.  ಆತ್ಮನಿರ್ಭರ ಭಾರತವೇ ಲಡಾಖ್ ಗಡಿಯಲ್ಲಿ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವ. ಸ್ವದೇಶಿ ಸ್ವಾವಲಂಬನೆ ಅಳವಡಿಸಿಕೊಳ್ಳೋಣ ಎಂದು ಆಗ್ರಹಿಸಿದ್ದಾರೆ. ಇಲ್ಲಿದೆ ನೋಡಿ ಮನ್‌ ಕೀ ಬಾತ್‌ ಪ್ರಮುಖ ಅಂಶಗಳು.

"

* ಕೊರೋನಾದಿಂದಾಗಿ ಮಾನವರಿಗೆ ಸಂಕಟ ಬಂದಿದೆ. ಇದರ ಬಗ್ಗೆ ನಾವು ಮಾತನಾಡಬೇಕಿದೆ. 2020 ಕಂಟಕದಿಂದ ಕೂಡಿದ ವರ್ಷವಾಗಿದೆ. ಹೀಗಾಗಿ ಈ ವರ್ಷ ಅನೇಕರಿಗೆ ಇಷ್ಟವಾಗುತ್ತಿಲ್ಲ

* ಆರೇಳು ತಿಂಗಳ ಹಿಂದೆ ಈ ಸಂಕಟ ಬರುವ ಸೂಚನೆ ಇರಲಿಲ್ಲ. ಆದರೀಗ ದೇಶಕ್ಕೆ ಅನೇಕ ಸಂಕಟಗಳು ಬಂದಿವೆ. ಇದರ ನಡುವೆ ಒಂದೆಡೆ ಸೈಕ್ಲೋನ್ ಆದರೆ ಮತ್ತೊಂದೆಡೆ ಮಿಡತೆ ಕಾಟ ಕಾಡುತ್ತಿದೆ. ಸದ್ಯ ನೆರೆ ರಾಷ್ಟ್ರಗಳಿಂದ ದೇಶಕ್ಕೆ ಸಂಕಟ ಬಂದಿದೆ. ಇವೆಲ್ಲದರಿಂದ ನಾವು ಹೊರ ಬರಬೇಕಿದೆ.

* ಸಂಕಷ್ಟ ಇರುವುದರಿಂದ ಈ ವರ್ಷ ಕೆಟ್ಟದು ಎಂದು ಹೇಳುವುದು ಸರಿಯಲ್ಲ. ಗಂಗೆಯನ್ನು ಯಾರಾದರೂ ತಡೆಯಲು ಸಾಧ್ಯವೇ? ಅದದೇ ರೀತಿ ಭಾರತ ಈ ಎಲ್ಲಾ ಸಂಕಷ್ಟದಿಂದ ಹೊರ ಬಂದೇ ಬರುತ್ತದೆ. ಭಾರತೀಯರಲ್ಲಿ ಸೌಜನ್ಯ ಎಂಬುವುದು ಶಾಶ್ವತವಾದದ್ದು. ಹೀಗಾಗಿ ಇಂತಹ ಸಂಕಷ್ಟಗಳು ದೇಶಕ್ಕೆ ಹಾನಿಯುಂಟು ಮಾಡಲು ಸಾಧ್ಯವಿಲ್ಲ. 

ಚೀನಾ ತಂಟೆಗೆ ಭಾರತದ ಮಿಸೈಲ್‌ ಸಡ್ಡು: ಡ್ರ್ಯಾಗನ್ ವಿರುದ್ಧ ಮಹತ್ತರ ಹೆಜ್ಜೆ!

* ಈ ಎಲ್ಲಾ ಸಂಕಷ್ಟದ ನಡುವೆ ದೇಶ ಒಗ್ಗಟ್ಟಿನಿಂದ ಇದೆ. ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿ ಮುನ್ನಡೆಯುತ್ತಿದ್ದು, ಇದರಲ್ಲಿ ಯಶಸ್ವಿಯಾಗಲಿದ್ದೇವೆ. ದೇಶ ಹೊಸ ಗುರಿ ಸಾಧಿಸಿ ಮುನ್ನಡೆಯುತ್ತಿದೆ. 

* ಭಾರತದ ಸಂಸ್ಕೃತಿ, ನಿಸ್ವಾರ್ಥ ಭಾವ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕೈ ಹಿಡಿದಿದೆ. ಇಡೀ ವಿಶ್ವವೇ ಭಾರತದ ವಿಶ್ವಬಂಧು ಪರಿಕಲ್ಪನೆಯನ್ನು ಒಪ್ಪಿಕೊಂಡಿದೆ. 

* ಲಡಾಖ್ ಮೇಲೆ ಕಣ್ಣಿಟ್ಟ ದೇಶಕ್ಕೆ ತಕ್ಕ ಉತ್ತರ ಸಿಕ್ಕಿದೆ. ನಮ್ಮ ಸೈನಿಕರು ಭಾರತಾಂಭೆ ರಕ್ಷಣೆಗೆ ನಿಂತಿದ್ದಾರೆ. ಕೆಲವು ಯೋಧರು ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರಿಗೆ ನಾನು ನಮನ ಸಲ್ಲಿಸುತ್ತೇನೆ. ಹುತಾತ್ಮರ ಮನೆಯವರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಲು ಮುಂದಾಗಿದ್ದಾರೆ. ಈ ಮೂಲಕ ಗಡಿ ರಕ್ಷಣೆಗೆ ದೆಶದ ಶಕ್ತಿ ಹೆಚ್ಚಲಿ. ಭಾರತಕ್ಕೆ ಗೆಳೆತನ ನಿಭಾಯಿಸುವುದೂ ಗೊತ್ತು, ವಿರೋಧಿಗಳನ್ನು ಮಣಿಸುವುದೂ ಗೊತ್ತು. ಕ್ಯಾತೆ ತೆಗೆದ ಚೀನಾಗೆ ನಿಶ್ಚಿತವಾಗಿ ತಕ್ಕ ಪಾಠ. ಈ ವಿಚಾರವಾಗಿ ಸಂಶಯ ಬೇಡ. 

ಗಡಿ ಯಥಾಸ್ಥಿತಿ ಬದಲಿಸಿದರೆ ಹುಷಾರ್‌: ಚೀನಾಕ್ಕೆ ಭಾರತದ ಕಟು ಎಚ್ಚರಿಕೆ!

* ಈ ಲಡಾಖ್ ವಿವಾದದ ಬಳಿಕ ದೇಶದ ಭಾವನೆ ಬದಲಾಗಿದೆ. ಆತ್ಮ ನಿರ್ಭರ ಭಾರತವೇ ಮೂಲ ಮಂತ್ರವೆಂದು ತಿಳಿದಿದ್ದಾರೆ. ಸ್ವದೇಶಿ ಭಾವನೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ದೇಶ ರಕ್ಷಣೆ, ತಂತ್ರಜ್ಞಾನ ಹಾಗೂ ಕೃಷಿಯಲ್ಲಿ ಪ್ರಗತಿ ಸಾಧಿಸುತ್ತಿದೆ.  ಇದು ಕೂಡಾ ಒಂದು ಬಗೆಯ ದೇಶ ಸೇವೆಯೇ ಆಗಿದೆ. ಜನರ ಈ ಸೇವೆಯೇ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತೆ. ಜನರ ಸಹಕಾರ ಇಲ್ಲದೇ ಏನೂ ಸಾಧ್ಯವಿಲ್ಲ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸಬೇಕು 

* ದೇಶದ ಜನ ಶಾಂತಿಯತೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಭಾರತ ತನ್ನ ಶಕ್ತಿಯನ್ನು ಒಳ್ಳೆಯ ರೀತಿ ಬಳಸಿಕೊಳ್ಳುತ್ತಿದೆ. ಭಾರತದ ಪರಂಪರೆಯೇ ಭರವಸೆ ಹಾಗೂ ಆತ್ಮೀಯತೆ. 

* ಕೊರೋನಾ ಸೋಲಿಸಿ ಆರ್ಥಿಕತೆ ಬಲಗೊಳಿಸುವುದೇ ನಮ್ಮ ಮೊದಲ ಗುರಿಯಾಗಲಿದೆ. ಜನರು ಮಾಸ್ಕಗ, ಸಮಾಜಿಕ ಅಂತರ ನಿಯಮ ಪಾಲಿಸದಿದ್ದರೆ ಅಪಾಯ ಖಚಿತ. ನೀವು ನಿಯಮ ಪಾಲಿಸದುದ್ದರೆ ನಿಮಗೇ ಅಪಾಯ. ಹೀಗಾಗಿ ಕೊರೋನಾ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ. 

* ಬಾಹ್ಯಾಕಾಶದಲ್ಲಿ ಭಾರತ ಉತ್ತಮ ಸಾಧನೆ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಐತಿಹಾಸಿಕ ಕ್ರಮ ಕೈಗೊಂಡಿದೆ. ಕೃಷಿಯಲ್ಲೂ ರೈತರಿಗಾಗಿ ಅನೇಕ ಸುಧಾರಿತ ಕ್ರಮ ಕೈಗೊಂಡಿದ್ದೇವೆ. ಸದ್ಯ ಪ್ರತಿಯೊಬ್ಬ ಭಾರತೀಯ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾನೆ. ನಾವೆಲ್ಲಾ ಒಂದೇ ಎಂದು ದೇಶಕ್ಕಾಗಿ ದುಡಿಯುತ್ತಿದ್ದಾರೆ. 

ಗ್ರಾಮದಲ್ಲಿ ಗ್ರಾಮಸ್ಥರು ಕ್ವಾರಂಟೈನ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಜನರೇ ಊರ ಹೊರಗೆ ಗುಡಿಸಲು ನಿರ್ಮಿಸಿ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಗ್ರಾಮೀಣ ಜನರ ಕಾಳಜಿಯೇ ನಮ್ಮ ಶಕ್ತಿ. ಈ ಎಲ್ಲಾ ಅಂಶಗಳು ದೇಶಕ್ಕೆ ಮಾದರಿಯಾಗಿವೆ. ಶ್ರಮಿಕರು ಕೂಡಾ ಕೊರೋನಾ ಬಗ್ಗೆ ಅತ್ಯಂತ ಜಾಗರೂಕತೆಯಿಂದ ಇದ್ದಾರೆ. 

ಚೀನಿಯರಿಂದ ಮತ್ತೆ ರಾಡ್‌ ರೌಡಿಸಂ: ಒಪ್ಪಂದದ ಉಲ್ಲಂಘನೆ ಸ್ಪಷ್ಟ!

* ಅನೇಕ ನದಿ ಮೂಲಗಳು ಇಂದು ಪುನರ್ಜನ್ಮ ತಾಳಿವೆ. ಜನರು ಕೂಡಾ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಕಾರಾತ್ಮಕತೆ ಹೆಚ್ಚು ಪ್ರಭಾವ ಬೀರುತ್ತದೆ. ಲಾಕ್‌ಡೌನ್ ವೇಳೆ ಹೇಗೆ ಬದುಕಬೇಕೆಂದು ಜನ ತೋರಿಸಿದ್ದಾರೆ. 

* ಇಡೀ ವಿಶ್ವ ತಮ್ಮ ಜನರ ಇಮ್ಯೂನಿಟಿ ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದಾರೆ. ಕೊರೋನಾ ಸಂಕಷ್ಟ ಬಾರದಿದ್ದರೆ ಬದುಕು ಏನೆಂದು ತಿಳಿಯುತ್ತಿರಲಿಲ್ಲ. ಈ ಕೊರೋನಾ ನಡುವೆ ಆತ್ಮೀಯತೆ ಬೆಳೆಸಲು ಕಾರಣವಾಗಿದೆ. 

* ದೇಶಾದ್ಯಂತ ಅನೇಕ ಸಾಂಪ್ರದಾಯಿಕ ಕ್ರೀಡೆಗಳಿಗೆ ಜೀವ ಬಂದಿದೆ, ನೂತನ ಮನ್ನಣೆ ಸಿಗುತ್ತಿದೆ. ಕರ್ನಾಟಕದ ಅಳಿಗುಳಿಮಣೆಗೆ ಮತ್ತೆ ಜೀವ ಬಂದಿದೆ. ಈ ಕ್ರೀಡೆಗಳಿಂದ ಭೌತಿಕ ಕ್ಷಮತೆ ಹೆಚ್ಚುವಂತಾಗಿದೆ. 

* ಮಕ್ಕಳಿಗೆ ಟಾಸ್ಕ್ ಕೊಟ್ಟ ಪ್ರಧಾನಿ: ಆನ್‌ಲೈನ್ ಶಿಕ್ಷಣಕ್ಕೂ ಹೆಚ್ಚಿನ ಒತ್ತು ಸಿಗುತ್ತಿದೆ. ದೇಶದ ಮಕ್ಕಳೇ ನಿಮ್ಮ ಬಳಿ ನನ್ನದೊಂದು ಆಗ್ರಹ. ಮಕ್ಕಳು ತಮ್ಮ ಅಜ್ಜಿ, ತಾತಂದಿರ ಸಂದರ್ಶನ ಮಾಡಿ. ಅವರ ಬಾಲ್ಯದ ಬಗ್ಗೆ ತಿಳಿಯಿರಿ. ಅವರಿಗೆ ಅವರ ಬಾಲ್ಯದ ನೆನಪು ಮೆಲುಕು ಹಾಕುವಂತೆ ಮಾಡಿ. ಇದರಿಂದ ಮಕ್ಕಳಿಗೆ ಹೊಸ ಬಗೆಯ ವಿದ್ಯಾಭ್ಯಾಸ ಸಿಕ್ಕಂತಾಗುತ್ತದೆ. 

ಮೇಡ್‌ ಇನ್‌ ಇಂಡಿಯಾ ಉತ್ಪನ್ನಗಳಿಗೆ ಕೇಸರಿ ಕೋಡ್‌?

* ದೇಶಕ್ಕೆ ಮಾನ್ಸೂನ್ ಆಗಮನವಾಗಿದೆ.. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅವರು ತಮ್ಮ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಜನರು ಮಳೆ ನೀರು ಕೊಯ್ಲು ಮಾಡಲು ಮುಂದಾಗಿದ್ದಾರೆ. ನೀರು ಸಂರಕ್ಷಣೆಗಡ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. 

* ಕರ್ನಾಟಕದ ಕಾಮೇಗೌಡರ ಬಗ್ಗೆ ಮೋದಿ ಮಾತು. ಕಾಮೇಗೌಡ ದೇಶದ ಇತರ ರೈತರಿಗೆ ಮಾದರಿ. ಜಾನುವಾರುಗಳಿಗೆ ಚಿಕ್ಕ ಚಿಕ್ಕ ಹೊಂಡಗಳನ್ನು ತೋಡಿ, ನೀರುಣಿಸಿದ್ದಾರೆ.  

* 28ರಂದು ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಜಯಂತಿ. ಅವರ ಜೀವನ ನಮಗೆಲ್ಲರಿಗೂ ಮಾರ್ಗದರ್ಶನವಾಗಿದೆ. ಅವರು ಯುವಕರಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ರಾಜಕೀಯವಾಗಿ ಅನೇಕ ಐತಿಹಾಸಿಕ ಕ್ರಮ ಕೈಗೊಂಡಿದ್ದಾರೆ. 

Latest Videos
Follow Us:
Download App:
  • android
  • ios