PM Garib Kalyan Anna Yojana: ಮಾರ್ಚ್ 2022ವರೆಗೆ 80 ಕೋಟಿ ಮಂದಿಗೆ ಉಚಿತ ಪಡಿತರ!

* ಮಹತ್ವದ ನಿರ್ಧಾರ ಕೈಗೊಂಡ ಮೋದಿ ಸರ್ಕಾರ

* ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಸಾಮಾನ್ಯ ಜನರಿಗಾಗಿ ಉಚಿತ ಪಡಿತರ ಯೋಜನೆ

* ಉಚಿತ ಪಡಿತರ ಯೋಜನೆಯನ್ನು ಮಾರ್ಚ್ 2022 ರವರೆಗೆ ವಿಸ್ತರಿಸಲು ಮೋದಿ ಸರ್ಕಾರ ನಿರ್ಧಾರ

Centre extends PM Garib Kalyan Ann Yojana till March pod

ನವದೆಹಲಿ(ನ.24): ಕೋವಿಡ್ 19 ಸಂಕಷ್ಟದ (Covid 19 Crisis) ಸಮಯದಲ್ಲಿ ಸಾಮಾನ್ಯ ಜನರಿಗೆ ಉಚಿತ ಪಡಿತರ (Free Ration) ಯೋಜನೆಯನ್ನು ಮಾರ್ಚ್ 2022 ರವರೆಗೆ ವಿಸ್ತರಿಸಲು ಮೋದಿ ಸರ್ಕಾರ (Modi Govt) ನಿರ್ಧರಿಸಿದೆ. ಈ ಯೋಜನೆಯ ಒಟ್ಟು ವೆಚ್ಚ 2,60,000 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ನಿರ್ಧಾರಗಳ ಕುರಿತು ಮಾಹಿತಿ ನೀಡಿದ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ (Anurag Thakur), ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಗರೀಬ್ ಅನ್ನ ಕಲ್ಯಾಣ್ ಯೋಜನೆ (PM Garib Kalyan Anna Yojana) ಅಡಿಯಲ್ಲಿ ಜನರಿಗೆ ಉಚಿತ ಪಡಿತರ ನೀಡುವ ಕಾರ್ಯವನ್ನು ನಾಲ್ಕು ತಿಂಗಳವರೆಗೆ ಮುಂದುವರೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

80 ಕೋಟಿ ಜನರಿಗೆ ಪಡಿತರ 

ಇಡೀ ವಿಶ್ವದಲ್ಲೇ 80 ಕೋಟಿ ಜನರಿಗೆ ತಿಂಗಳುಗಟ್ಟಲೇ ಉಚಿತ ಪಡಿತರವನ್ನು ಒದಗಿಸಿದ ದೇಶ ಬೇರೊಂದು ಇರಲಿಕ್ಕಿಲ್ಲ ಎಂದು ಸಚಿವರು ಹೇಳಿದ್ದಾರೆ. ಈ ಯೋಜನೆಯನ್ನು 15 ತಿಂಗಳವರೆಗೆ ನಡೆಸಲಾಗುತ್ತಿದ್ದು, ಇದನ್ನು 31 ಮಾರ್ಚ್ 2022 ರವರೆಗೆ ಅಂದರೆ ಇನ್ನೂ 4 ತಿಂಗಳವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿ, ಜನರಿಗೆ ಅಗ್ಗದ ಪಡಿತರ ಸರ್ಕಾರಿ ಅಂಗಡಿಗಳಿಂದ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ.

ಈ ಯೋಜನೆಯಡಿ, ಪ್ರತಿ ಕುಟುಂಬಕ್ಕೆ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು (Five State Assembly Elections) ಗಮನದಲ್ಲಿಟ್ಟುಕೊಂಡು, ಸರ್ಕಾರದ ಈ ಹೆಜ್ಜೆ ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಈ ಯೋಜನೆಯನ್ನು ಮುಂದುವರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸರ್ಕಾರವು ಮೊದಲೇ ಹೇಳಿದ್ದರೂ, ನಂತರ ಈ ವಿಷಯದ ಬಗ್ಗೆ ವಿರೋಧ ಪಕ್ಷಗಳಿಂದ ಸಾಕಷ್ಟು ಗದ್ದಲ ನಡೆದಿತ್ತು. ಇದೀಗ ಬುಧವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.

PM Garib Kalyan Anna Yojana: ಅದೆಷ್ಟೇ ಅಗ್ನಿ ಪರೀಕ್ಷೆ ಎದುರಾದರೂ ಬಡವರೊಂದಿಗೆ ದೇಶವಿದೆ!

ಆಹಾರ ಸಬ್ಸಿಡಿಗೆ 53.34 ಕೋಟಿ ವೆಚ್ಚವಾಗಲಿದೆ

ಯೋಜನೆಯ ಐದನೇ ಹಂತದಲ್ಲಿ ಆಹಾರ ಸಬ್ಸಿಡಿಗಾಗಿ (Subsidy) 53,342.52 ಕೋಟಿ ರೂ. ವೆಚ್ಚ ತಗುಲಲಿದೆ. ಈ ಹಂತದಲ್ಲಿ ಒಟ್ಟು 163 ಮಿಲಿಯನ್ ಟನ್ ಆಹಾರ ಧಾನ್ಯಗಳು ಬೇಕಾಗುತ್ತವೆ. ಮಾರ್ಚ್ 2022 ರವರೆಗೆ ಈ ಯೋಜನೆಗೆ ಒಟ್ಟು 2.60 ಲಕ್ಷ ಕೋಟಿ ರೂ. ಯೋಜನೆಯಡಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಬರುವ ಜನರಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಮುಂಬರುವ ಉತ್ತರ ಪ್ರದೇಶ ಚುನಾವಣೆ (Uttar Pradesh Elections) 2022 ರಲ್ಲಿ ಬಿಜೆಪಿ ಈ ನಿರ್ಧಾರದ ಲಾಭವನ್ನು ಪಡೆಯಬಹುದು.

ಈ ಯೋಜನೆಯ ಫಲಾನುಭವಿಗಳು ಉಚಿತ ಆಹಾರ ಧಾನ್ಯಗಳನ್ನು ಪಡೆಯಲು ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ ಅಥವಾ ಅದನ್ನು ನೀಡುವವರು ಹಿಂಜರಿಯುತ್ತಿದ್ದರೆ, ಇದಕ್ಕಾಗಿ ಸರ್ಕಾರವು ಟೋಲ್ ಫ್ರೀ ಸಂಖ್ಯೆಗಳನ್ನು ನೀಡಿದೆ (1800-180-2087, 1800-212-5512 ಮತ್ತು 1967). ದೂರು ಸಲ್ಲಿಸಲು ಸಹ ಪ್ರಾರಂಭಿಸಲಾಗಿದೆ.

Latest Videos
Follow Us:
Download App:
  • android
  • ios