Hubballi| ಉತ್ತರ ಕರ್ನಾಟಕದ ಮೊದಲ ವೈಮಾನಿಕ ಕಾರ್ಗೋ ಸೇವೆ ಆರಂಭ
ಹುಬ್ಬಳ್ಳಿ(ನ.04): ಕೃಷಿ ಉಡಾನ್ 2.0(Krishi UDAN 2.0) ಯೋಜನೆಯಡಿ ಸೇರ್ಪಡೆಯಾಗಿದ್ದ ಹುಬ್ಬಳ್ಳಿ ವಿಮಾನ(Hubballi Airport) ನಿಲ್ದಾಣದಲ್ಲಿ ಗ್ರಾಹಕರ ಸರಕು ಸಾಗಣೆ ಸೇವೆಯ ಯೋಜನೆ (Cargo) ಬುಧವಾರ ವಿದ್ಯುಕ್ತವಾಗಿ ಆರಂಭಿಸಲಾಗಿದೆ.
ಉತ್ತರ ಕರ್ನಾಟಕದ(North Karnataka) ವೈಮಾನಿಕ ಕಾರ್ಗೋ ಸೇವೆ(Air Cargo Service) ಇದೇ ಮೊದಲನೆಯದಾಗಿದೆ. ಈ ಭಾಗದ ಕೃಷಿ ಉತ್ಪನ್ನಗಳ(Agricultural Products) ಸಾಗಾಟ, ವ್ಯಾಪಾರಕ್ಕೆ(Business) ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.
ಹಳೆಯ ಟರ್ಮಿನಲ್ ಕಟ್ಟಡವನ್ನೇ ಸರಕು ಸಾಗಣೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ವ್ಯಾಪಾರ ಅಭಿವೃದ್ಧಿ ಮತ್ತು ಸಾಗಣೆ ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಗತಿಗೆ ಇದು ಪೂರಕವಾಗಲಿದೆ ಎಂಬ ಆಶಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಟ್ವೀಟರ್‌ನಲ್ಲಿ(Twitter) ವ್ಯಕ್ತಪಡಿಸಿದ್ದಾರೆ.
ಒಂದು ಸಾವಿರ ಚದುರ ಮೀಟರ್ ವಿಸ್ತಾರದಲ್ಲಿ ಕಾರ್ಗೋ ಸೇವೆ ಮುಂದುವರಿಯಲಿದ್ದು, ಒಂದು ಬಾರಿ 100 ಮೆಟ್ರಿಕ್ ಟನ್ ಸಾಮರ್ಥ್ಯದ ಸರಕು ಸಾಗಿಸಬಹುದಾಗಿದೆ. ವಾರ್ಷಿಕವಾಗಿ 1500 ಮೆಟ್ರಿಕ್ ಟನ್ ನಷ್ಟು ಗೂಡ್ಸ್ ಗುರಿ ಹೊಂದಲಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದ ಹಳೆ ಕಟ್ಟಡವನ್ನು 46.27 ಲಕ್ಷ ವೆಚ್ಚದಲ್ಲಿ ಎಎಐ (Airports Authority of India) ಕಾರ್ಗೋ ಲಾಜಿಸ್ಟಿಕ್ಸ್ ಆ್ಯಂಡ್ ಅಲೈಡ್ ಸರ್ವೀಸಸ್ ಕಂಪನಿ ಲಿ. ಸಹಯೋಗದಲ್ಲಿ ಕಾರ್ಗೋ ಸೇವೆ ಆರಂಭವಾಗಿದೆ.
ಕೇಂದ್ರ ವಿಮಾನಯಾನ ಸಚಿವಾಲಯ ಈಚೆಗೆ ಕೃಷಿ ಉಡಾನ್ 2.0 ಯೋಜನೆಯಡಿ 53 ವಿಮಾನ ನಿಲ್ದಾಣಗಳನ್ನು(Airport) ಆಯ್ಕೆ ಮಾಡಿತ್ತು. ಅದರಲ್ಲಿ ಹುಬ್ಬಳ್ಳಿಯನ್ನು(Hubballi) ಕೂಡ ಸೇರ್ಪಡೆ ಮಾಡಲಾಗಿದೆ. ಕೈಗಾರಿಕಾ ಉತ್ಪನ್ನಗಳ ಸರಕು ಸಾಗಣೆಗೆ ಇದರಿಂದ ಉದ್ಯಮಿಗಳಿಗೆ ಸಾಕಷ್ಟು ನೆರವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಕುಮಾರ ಠಾಕರೆ ತಿಳಿಸಿದ್ದಾರೆ.