Asianet Suvarna News Asianet Suvarna News

ಬ್ರಿಟಿಷ್ ಕಹಿನೆನಪುಗಳಿಗೆ ಮೋದಿ ಸರ್ಕಾರದ ಕೊಕ್

ವಸಾಹತುಶಾಹಿ ಆಡಳಿತ ಕಹಿ ನೆನಪು ಅಳಿಸಿ ಹಾಕಲು ಕೇಂದ್ರ ಸರ್ಕಾರ ಇತ್ತೀಚೆಗೆ ನೌಕಾಪಡೆ ಧ್ವಜ, ದೆಹಲಿ ರಾಜಪಥದ ಹೆಸರು ಬದಲಾವಣೆಯಂಥ ಮಹತ್ವದ ನಿರ್ಧಾರ ಕೈಗೊಂಡಿದೆ. ಆದರೆ ಈ ಹಾದಿಯಲ್ಲಿ ಕೇಂದ್ರದ ಕ್ರಮ ಇದೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ ಇಂಥ ಹಲವು ನಿರ್ಧಾರ ಪ್ರಕಟಿಸಿದೆ. ಅವುಗಳು ಹೀಗಿವೆ.

Modi Govt's Coke for British Bitter Memories akb
Author
First Published Sep 7, 2022, 7:38 AM IST

ನವದೆಹಲಿ: ವಸಾಹತುಶಾಹಿ ಆಡಳಿತ ಕಹಿ ನೆನಪು ಅಳಿಸಿ ಹಾಕಲು ಕೇಂದ್ರ ಸರ್ಕಾರ ಇತ್ತೀಚೆಗೆ ನೌಕಾಪಡೆ ಧ್ವಜ, ದೆಹಲಿ ರಾಜಪಥದ ಹೆಸರು ಬದಲಾವಣೆಯಂಥ ಮಹತ್ವದ ನಿರ್ಧಾರ ಕೈಗೊಂಡಿದೆ. ಆದರೆ ಈ ಹಾದಿಯಲ್ಲಿ ಕೇಂದ್ರದ ಕ್ರಮ ಇದೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ ಇಂಥ ಹಲವು ನಿರ್ಧಾರ ಪ್ರಕಟಿಸಿದೆ. ಅವುಗಳು ಹೀಗಿವೆ.

ಲೋಕ ಕಲ್ಯಾಣ ಮಾರ್ಗ

2016ರಲ್ಲಿ ಪ್ರಧಾನಿ ನಿವಾಸವಿರುವ ರೇಸ್‌ ಕೋರ್ಸ್‌ ರಸ್ತೆಯ (Race Course Road) ಹೆಸರನ್ನು ಲೋಕ ಕಲ್ಯಾಣ ಮಾರ್ಗ (Lok Kalyana Marg) ಎಂದು ಬದಲಾಯಿಸಲಾಗಿದೆ. ದೇಶದ ಪ್ರಧಾನಿ ನಿವಾಸಕ್ಕೆ ಹೋಗುವ ರಸ್ತೆಯ ಹೆಸರು ಭಾರತೀಯ ಸಂಸ್ಕೃತಿ ಬಿಂಬಿಸುವಂತಿರಬೇಕು ಎನ್ನುವ ನಿಟ್ಟಿನಲ್ಲಿ ಇದನ್ನು ಮರುನಾಮಕರಣ ಮಾಡಲಾಯಿತು.


ನೇತಾಜಿ ಪುತ್ಥಳಿ

ಬ್ರಿಟಿಷರ ಆಳ್ವಿಕೆ ಅವಧಿಯಲ್ಲಿ ಇಂಡಿಯಾ ಗೇಟ್‌ನಲ್ಲಿದ್ದ (India Gate) ಕಿಂಗ್‌ 5ನೇ ಜಾರ್ಜ್ (King George V) ಪ್ರತಿಮೆಯನ್ನು ಸ್ಥಳಾಂತರಗೊಳಿಸಿದ ಬಳಿಕ ಅಲ್ಲಿ ಸ್ವಾತಂತ್ರ್ಯ ಹೋರಾಟಗಾರನಾದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪುತ್ಥಳಿಯನ್ನು ನಿರ್ಮಿಸಲಾಗುತ್ತಿದೆ. ನೇತಾಜಿಯವರ 125ನೇ ಜಯಂತಿ ಅಂಗವಾಗಿ ಪ್ರಧಾನಿ ಈ ಘೋಷಣೆ ಮಾಡಿದ್ದರು.

ವಸಾಹತುಶಾಹಿ ಕಹಿ ನೆನಪು ಅಳಿಸಲು Rajpathಗೆ ಇನ್ನು ‘ಕರ್ತವ್ಯಪಥ’ ಎಂದು ಮರುನಾಮಕರಣ..!
ಅಬೈಡ್‌ ವಿಥ್‌ಮಿ ಗೆ ಕೊಕ್‌

2022ರ ಗಣರಾಜ್ಯೋತ್ಸವದಲ್ಲಿ ಬ್ರಿಟಿಷರ ಕಾಲದ ಗೀತೆಯಾದ ‘ಅಬೈಡ್‌ ವಿಥ್‌ ಮಿ’ಯನ್ನು ತೆಗೆದು ಅದರ ಬದಲಾಗಿ ಲತಾ ಮಂಗೇಶ್ಕರ್‌ (Lata Mangeshkar) ಅವರ ‘ಏ ಮೇರೆ ವತನ್‌ ಕೆ ಲೋಗೊಂ’ ನುಡಿಸಲಾಯಿತು. ಬೀಟಿಂಗ್‌ ರಿಟ್ರೀಟ್‌ (beating retreat) ಸಮಾರಂಭದಲ್ಲಿ ಭಾರತೀಯ ಗೀತೆಗಳಿಗೆ ಪ್ರಾಧಾನ್ಯತೆ ನೀಡಲಾಯಿತು.


ದ್ವೀಪ ಮರುನಾಮಕರಣ

ಅಂಡಮಾನ್‌ ನಿಕೋಬಾರ್‌ ದ್ವೀಪ (Andaman and Nicobar Island) ಸಮೂಹದಲ್ಲಿರುವ ಮೂರು ದ್ವೀಪಗಳನ್ನು ಪ್ರಧಾನಿ 2018ರಲ್ಲಿ ಮರುನಾಮಕರಣ ಮಾಡಿದರು. ರೋಸ್‌ ಐಲೆಂಡ್‌ ದ್ವೀಪವನ್ನು ‘ನೇತಾಜಿ ಸುಭಾಷ್‌ ಚಂದ್ರ ಬೋಸ್‌ ದ್ವೀಪ (Netaji Subhash Chandra Bose Island), ನೀಲ್‌ ಐಲೆಂಡ್‌ (Neil Island) ಅನ್ನು ಶಹೀದ್‌ ದ್ವೀಪ ಹಾಗೂ ಹ್ಯಾಲ್‌ಲಾಕ್‌ ಐಲೆಂಡ್‌ ಅನ್ನು ಸ್ವರಾಜ್‌ ದ್ವೀಪ (Swaraj Island) ಎಂದು ಮರುನಾಮಕರಣ ಮಾಡಲಾಗಿದೆ.

ನೌಕಾಪಡೆಗೆ ಹೊಸ ಧ್ವಜ

ನೌಕಾಪಡೆಯ ಧ್ವಜದಲ್ಲಿದ್ದ ಸೇಂಟ್‌ ಜಾರ್ಜ್‌ ಕ್ರಾಸ್‌ (St. George's Cross) ಅನ್ನು ಕೈಬಿಟ್ಟು, ಮಹಾರಾಷ್ಟ್ರದ (Maharashtra)  ಛತ್ರಪತಿ ಶಿವಾಜಿ ಮಹಾರಾಜರಿಂದ (Chhatrapati Shivaji Maharaj) ಸ್ಫೂರ್ತಿ ಪಡೆದ ಅಷ್ಟಭುಜಾಕೃತಿಯ ನೀಲಿ ಚಿಹ್ನೆಯನ್ನು ಅಳವಡಿಸಲಾಗಿದೆ. ಇದರಲ್ಲಿ ರಾಷ್ಟ್ರೀಯ ಲಾಂಛನ ಹಾಗೂ ಲಂಗರಿನ ಚಿತ್ರವಿದೆ.

ವಸಾಹತುಶಾಹಿ ವಿರುದ್ಧ ಮೋದಿ ದಿಟ್ಟ ಹೆಜ್ಜೆ, ನೌಕಾಪಡೆಯ ಸೇಂಟ್ ಜಾರ್ಜ್ ಕ್ರಾಸ್ ಕೈಬಿಟ್ಟ ಕೇಂದ್ರ!
ನೂತನ ರಾಷ್ಟ್ರೀಯ ಶಿಕ್ಷಣ ನೀತಿ

ಬ್ರಿಟಿಷರ ಕಾಲದ ಇಂಗ್ಲೀಷ್‌ ಆಧಾರಿತ ಕಲಿಕಾ ಪದ್ಧತಿಯ ಬದಲಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy) ಘೋಷಿಸಿದ್ದಾರೆ. ಇದು ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.


ಫೆ.1ಕ್ಕೆ ಬಜೆಟ್‌, ಹಳೆಯ ಕಾಯ್ದೆ ರದ್ದು

ಫೆಬ್ರುವರಿ ತಿಂಗಳಿನ ಕೊನೆಯ ದಿನಂದು ಬಜೆಟ್‌ ಘೋಷಿಸುವ ಸಂಪ್ರದಾಯ ಕೈಬಿಟ್ಟು ಬಜೆಟ್‌ ಅನ್ನು ಫೆ. 1ಕ್ಕೆ ಘೋಷಿಸಲಾಗುತ್ತಿದೆ. ರೇಲ್ವೆ ಬಜೆಟ್‌ (Railway Budget) ಅನ್ನು ಕೇಂದ್ರ ಬಜೆಟ್‌ನೊಂದಿಗೆ (Union Budget) ಸೇರಿಸಲಾಗಿದೆ. ಜೊತೆಗೆ ಮೋದಿ ಸರ್ಕಾರ (Modi government) ಬ್ರಿಟಿಷರ ಕಾಲದ ಹಳೆಯ 1500ಕ್ಕೂ ಹೆಚ್ಚು ಕಾಯ್ದೆಗಳನ್ನು ರದ್ದುಗೊಳಿಸಿದೆ.

Follow Us:
Download App:
  • android
  • ios