ವಸಾಹತುಶಾಹಿ ವಿರುದ್ಧ ಮೋದಿ ದಿಟ್ಟ ಹೆಜ್ಜೆ, ನೌಕಾಪಡೆಯ ಸೇಂಟ್ ಜಾರ್ಜ್ ಕ್ರಾಸ್ ಕೈಬಿಟ್ಟ ಕೇಂದ್ರ!
ಬ್ರಿಟಿಷರ ವಸಾಹತುಶಾಹಿ ವಿರುದ್ಧ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಭಾರತೀಯ ನೌಕಾಪಡೆಯ ಧ್ವಜದಲ್ಲಿರುವ ಸೇಂಟ್ ಜಾರ್ಜ್ ಕ್ರಾಸ್ ಕೈಬಿಟ್ಟಿದೆ. ಸೆಪ್ಟೆಂಬರ್ 2 ರಂದು ಮೋದಿ ಹೊಸ ಧ್ವಜ ಅನಾವರಣ ಮಾಡಲಿದ್ದಾರೆ.
ನವದೆಹಲಿ(ಆ.30): ಭಾರತ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ಅಜಾದಿ ಕಾ ಅಮೃತ ಮಹೋತ್ಸವದಲ್ಲಿದ್ದರೂ ಭಾರತ ಹಲವು ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಬ್ರಿಟಿಷರ ವಸಾಹತುಶಾಹಿಯಿಂದ ಹೊರಬಂದಿಲ್ಲ. ಇದೀಗ ಕೇಂದ್ರ ಸರ್ಕಾರ ವಸಾಹತುಶಾಹಿ ವಿರುದ್ದ ದಿಟ್ಟ ಹೆಜ್ಜೆ ಇಟ್ಟಿದೆ. ಭಾರತೀಯ ನೌಕಾಪಡೆಯ ಧ್ವಜದಲ್ಲಿರುವ ಸೇಂಟ್ ಜಾನ್ ಕ್ರಾಸ್ ಕೈಬಿಟ್ಟಿದೆ. ಪ್ರಧಾನ ಮಂತ್ರಿ ಕಾರ್ಯಾಲಯ ಈ ಕುರಿತು ಸ್ಪಷ್ಟನೆ ನೀಡಿದೆ. ವಸಾಹತುಶಾಹಿಯನ್ನು ತೊಡೆದು ಹಾಕುವಲ್ಲಿ ಪ್ರಧಾನಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನೌಕಾಪಡೆಯ ಧ್ವಜದಲ್ಲಿ ಸೇಂಟ್ ಜಾನ್ ಕ್ರಾಸ್ ತೊಡೆದು ಹಾಕಿದೆ. ಸೆಪ್ಟೆಂಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಕೊಚ್ಚಿಯ ನೌಕಾನೆಲೆಯಲ್ಲಿ ಹೊಸ ಧ್ವಜ ಅನಾವರಣ ಮಾಡಲಿದ್ದಾರೆ. ಹೊಸ ಧ್ವಜ ವಸಾಹತುಶಾಹಿಯನ್ನು ತೊಡೆದು, ಶ್ರೀಮತ ಭಾರತದ ಕಡಲ ಪರಂಪರಿಯ ಪ್ರತೀಕವಾಗಲಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ಸದ್ಯ ನೌಕಾಪಡೆ ಲಾಂಚನ ಹಾಗೂ ಧ್ವಜದಲ್ಲಿ ಬಿಳಿ ಬಣ್ಣದ ಮೇಲೆ ಕೆಂಪು ಪಟ್ಟಿಯ ಕ್ರಾಸ್ ಇದೆ. ಇದ ಎಡಭಾಗದಲ್ಲಿ ಭಾರತದ ರಾಷ್ಟ್ರಧ್ವಜವಿದೆ. ಕೆಂಪು ಪಟ್ಟೆಗಳನ್ನು ಹೊಂದಿರುವ ಬಿಳಿ ಧ್ವಜ , ಸೇಂಟ್ ಜಾರ್ಜ್ ಶಿಲುಬೆಯನ್ನು ಸಂಕೇತಿಸುತ್ತದೆ. ಇಷ್ಟೇ ಅಲ್ಲ ಈ ಧ್ವಜ ಯುನೈಟೆಡ್ ಕಿಂಗ್ಡಮ್ ಜ್ಯಾಕ್ ಪ್ರತಿನಿಧಿಸುತ್ತದೆ. ಇದೀಗ ಭಾರತೀಯ ನೌಕಾಪಡೆ ಲಾಂಛನ ಹಾಗೂ ಧ್ವಜದಲ್ಲಿರುವ ಶಿಲುಬೆಯನ್ನೆ ತೆಗೆದು ಹೊಸ ಧ್ವಜ ಅನಾವರಣ ಮಾಡಲಾಗುತ್ತಿದೆ. ನೂತನ ಧ್ವಜ ಹಾಗೂ ಲಾಂಛನದ ಕುರಿತು ಯಾವುದೇ ಮಾಹಿತಿ ಹೊರಬಂದಿಲ್ಲ. ಸೆಪ್ಟೆಂಬರ್ 2 ರಂದು ಮೋದಿ ಕೇರಳದ ಕೊಚ್ಚಿ ಶಿಪ್‌ಯಾರ್ಡ್‌ನ ಐಎನ್ಎಸ್ ವಿಕ್ರಾಂತ್‌ನಲ್ಲಿ ನೂತನ ಧ್ವಜ ಅನಾವರಣ ಮಾಡಲಿದ್ದಾರೆ.
ಭಾರತದಲ್ಲಿ ಬ್ರಿಟಿಷರು ಮಾಡಿದ್ದು ಬರೀ ಲೂಟಿಯೇ: ಬ್ರಿಟನ್ ಶಿಕ್ಷಣ ಪದ್ಧತಿ ಈಗಲೂ ಇರುವುದು ದುರ್ದೈವ: ಶಶಿ ತರೂರ್
1950ರಿಂದ ಇಲ್ಲೀವರೆಗೆ 4 ಬಾರಿ ಭಾರತೀಯ ನೌಕಾಪಡೆ ಲಾಂಛನ, ಧ್ವಜ ಬದಲಾಗಿದೆ. ಆದರೆ ವಸಾಹತುಶಾಹಿಯಿಂದ ಮುಕ್ತಿ ಪಡೆದಿರಲಿಲ್ಲ. 2001ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಸಾಹತುಶಾಹಿಗೆ ಮುಕ್ತಿ ನೀಡಿದ್ದರು. 2001 ರಿಂದ 2004ರ ವರೆಗೆ ನೌಕಾಪಡೆ ಹೊಸ ಧ್ವಜದಡಿಯಲ್ಲಿ ಕಾರ್ಯನಿರ್ವಹಿಸಿತ್ತು. ಇದರಲ್ಲಿ ಸೇಂಟ್ ಜಾರ್ಜ್ ಶಿಲುಬೆಯನ್ನು ತೆಗೆದುಹಾಕಿ ಅಶೋಕ ಚಕ್ರ ಲಾಂಛನವನ್ನು ಸೇರಿಸಲಾಗಿತ್ತು. ಆದರೆ 2004ರಲ್ಲಿ ಮತ್ತೆ ಸೇಂಟ್ ಜಾನ್ ಶಿಲುಭೆಯನ್ನು ತರಲಾಯಿತು. 2004ರಲ್ಲಿ ಬದಲಾದ ಬಳಿಕ ಇದೀಗ 2022ರಲ್ಲಿ ಮೋದಿ ಸರ್ಕಾರ ವಸಾಹತುಶಾಹಿ ಅಂತ್ಯಗೊಳಿಸಲು ಸೇಂಟ್ ಜಾರ್ಜ್ ಶಿಲುಬೆಯನ್ನು ತೆಗುದು ಹಾಕಿ, ಹೊಸ ಧ್ವಜ ಅನಾವರಣ ಮಾಡುತ್ತಿದೆ.
ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಭಾಷಣ ಮಾಡಿದ್ದರು. ಈ ವೇಳೆ ಭಾರತವನ್ನು ವಸಾಹತುಶಾಹಿಗಳಿಂದ ಮುಕ್ತಿಗೊಳಿಸಬೇಕು. ಇದರ ಅಗತ್ಯತೆ ಕುರಿತು ಪ್ರಧಾನಿ ಮೋದಿ ವಿವರಿಸಿದ್ದರು ಭಾರತ ಗುಲಾಮಗಿರಿಯ ಕುರುಹುಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರಯತ್ನಿಸಬೇಕು. ಪ್ರತಿಯೊಬ್ಬರು ತಮ್ಮ ಸುತ್ತಮತ್ತಲಿನಲ್ಲಿರುವ ವಸಾಹತುಶಾಹಿ, ಗುಲಾಮಗಿರಿಯನ್ನು ತೊಡೆದುಹಾಕಲು ಕರೆ ನೀಡಿದ್ದರು. ಇದೀಗ ಭಾರತೀಯ ನೌಕಾಪಡೆಯಲ್ಲಿದ್ದ ಧ್ವಜ ಕೂಡ ಭಾರತೀಯತೆಯನ್ನು ಪಡೆದುಕೊಳ್ಳುತ್ತಿದೆ.
ಬ್ರಿಟಿಷರು ಹೇರಿದ ವಸಾಹತುಶಾಹಿ ಮನಸ್ಥಿತಿಯಿಂದ ಭಾರತದ ಪ್ರತಿಭೆಗಳು ಹುದುಗಿ ಹೋಗಿದೆ. ನಾವು ನಮ್ಮ ಭಾಷೆಗಳ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ಪೂರ್ವಜರು ಆ ಭಾಷೆಗಳನ್ನು ಜಗತ್ತಿಗೆ ಕೊಟ್ಟಿದ್ದರೆ. ಆದರೆ ನಾವು ವಸಾಹತುಶಾಹಿ ಮನಸ್ಥಿತಿಯಿಂದ ನಮ್ಮ ಭಾಷೆ, ಸಂಸ್ಕೃತಿಯನ್ನು ಹೆಮ್ಮೆ ಪಡಲು ಹಿಂಜರಿಕೆಯ ಅಗತ್ಯವಿಲ್ಲ ಎಂದು ಮೋದಿ ಭಾಷಣದಲ್ಲಿ ಹೇಳಿದ್ದರು.