ವಸಾಹತುಶಾಹಿ ಕಹಿ ನೆನಪು ಅಳಿಸಲು Rajpathಗೆ ಇನ್ನು ‘ಕರ್ತವ್ಯಪಥ’ ಎಂದು ಮರುನಾಮಕರಣ..!
ಕೆಂಪುಕೋಟೆಯಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ವಸಾಹತುಶಾಹಿ ಮನಸ್ಥಿತಿಗೆ ಸಂಬಂಧಿಸಿದ ಚಿಹ್ನೆಗಳ ನಿರ್ಮೂಲನೆಗೆ ಒತ್ತು ನೀಡಿದ್ದರು. ಈಗ, ಆ ನಿಟ್ಟಿನಲ್ಲಿ ರಾಜಪಥವನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನವದೆಹಲಿ: ವಸಾಹತುಶಾಹಿ ಇತಿಹಾಸದ ಕಹಿ ನೆನಪನ್ನು ಅಳಿಸಲು (Abolition of Colonial Mindset) ಇತ್ತೀಚೆಗೆ ನೌಕಾಪಡೆಯ ಧ್ವಜದಲ್ಲಿ ಬದಲಾವಣೆ ಮಾಡಿದ್ದ ಕೇಂದ್ರ ಸರ್ಕಾರ, ಇದೀಗ ಅಂಥದ್ದೇ ಯತ್ನದ ಭಾಗವಾಗಿ ದೆಹಲಿಯ ‘ರಾಜಪಥ’ (Rajpath) ಮತ್ತು ಸೆಂಟ್ರಲ್ ವಿಸ್ತಾ ಲಾನ್‌ನ ಜಾಗದ ಹೆಸರನ್ನು ‘ಕರ್ತವ್ಯಪಥ’ (KartavyaPath) ಎಂದು ಬದಲಾಯಿಸಲು ನಿರ್ಧರಿಸಿದೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಹೆಸರು ಬದಲಾವಣೆಯ ಪ್ರಸ್ತಾಪವನ್ನು ಅನುಮೋದಿಸಬೇಕಾಗಿದ್ದು, ಸೆಪ್ಟೆಂಬರ್ 7ರಂದು ರಾಜಪಥದ ಹೆಸರನ್ನು ಕರ್ತವ್ಯಪಥ ಎಂದು ಬದಲಾಯಿಸುವ ಬಗ್ಗೆ ವಿಶೇಷ ಸಭೆ ಆಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಸೆಂಟ್ರಲ್ ವಿಸ್ತಾವನ್ನು (Central Vista) ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 8ರಂದು ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ. ಈ ಪ್ರಸ್ತಾವದ ಅನ್ವಯ ಇಂಡಿಯಾ ಗೇಟ್ ಬಳಿ ಇರುವ ನೇತಾಜಿ ಪ್ರತಿಮೆಯಿಂದ ರಾಷ್ಟ್ರಪತಿ ಭವನದವರೆಗೆ ಇರುವ 3.2 ಕಿ.ಮೀ ಉದ್ದದ ರಸ್ತೆ ಮತ್ತು ಪ್ರದೇಶವನ್ನು ಕರ್ತವ್ಯಪಥ ಎಂದು ಮರುನಾಮಕರಣ ಮಾಡಲಾಗುವುದು ಎನ್ನಲಾಗಿದೆ.
ನೇತಾಜಿ ಪ್ರತಿಮೆಯಿಂದ ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ರಸ್ತೆ ಮತ್ತು ಪ್ರದೇಶವನ್ನು ಕರ್ತವ್ಯ ಪಥ ಎಂದು ಕರೆಯಲಾಗುವುದು. ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಗುರುತಿಸುವ 2047 ರ ಪೂರ್ವದಲ್ಲಿ ಪ್ರಧಾನ ಮಂತ್ರಿಯವರು ಕರ್ತವ್ಯದ ಮಹತ್ವವನ್ನು ಈ ಮೂಲಕ ನೆನಪಿಸುತ್ತಾರೆ. ಆಗಸ್ಟ್ 15 ರಂದು ಕೆಂಪು ಕೋಟೆಯ (Red Fort) ಆವರಣದಿಂದ ಮಾಡಿದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಷಣದಲ್ಲಿ ವಸಾಹತುಶಾಹಿ ಮನಸ್ಥಿತಿಗೆ ಸಂಬಂಧಿಸಿದ ಚಿಹ್ನೆಗಳ ನಿರ್ಮೂಲನೆಗೆ ಪ್ರಧಾನಿ ಮೋದಿ ಒತ್ತು ನೀಡಿದ್ದರು. ಅದರಂತೆ, ಕಳೆದ ವಾರ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್ ಉಡಾವಣೆ ಸಂದರ್ಭದಲ್ಲಿ ನೌಕಾಪಡೆಯು ತನ್ನ ಧ್ವಜವನ್ನು ಬದಲಾಯಿಸಿತು.
Redeveloped central vista ಸೆ.8ಕ್ಕೆ ಪ್ರಧಾನಿ ಮೋದಿ ಉದ್ಘಾಟನೆ, 20 ತಿಂಗಳ ಬಳಿಕ ಸಾರ್ವಜನಿಕರಿಗೆ ಮುಕ್ತ!
ಈ ಹಿಂದೆ ಪ್ರಧಾನಿ ನಿವಾಸವಿರುವ ರಸ್ತೆಯ ಹೆಸರನ್ನು ರೇಸ್ ಕೋರ್ಸ್ ರಸ್ತೆಯಿಂದ ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಅತ್ಯಂತ ಜನಪ್ರಿಯ ಸಾರ್ವಜನಿಕ ಸ್ಥಳವೆಂದು ಪರಿಗಣಿಸಲಾಗಿರುವ ಈ ವಿಸ್ತರಣೆಯು ಕೆಂಪು ಗ್ರಾನೈಟ್ ನಡಿಗೆ ಮಾರ್ಗಗಳೊಂದಿಗೆ 1.1 ಲಕ್ಷ ಚದರ ಮೀಟರ್‌ನ ಸುತ್ತಲೂ ಹಸಿರಿನಿಂದ ಕೂಡಿದೆ. ರಾಜಪಥದ ಉದ್ದಕ್ಕೂ 133 ಕ್ಕೂ ಹೆಚ್ಚು ದೀಪದ ಕಂಬಗಳು, 4,087 ಮರಗಳು, 114 ಆಧುನಿಕ ಫಲಕಗಳು ಮತ್ತು ಮೆಟ್ಟಿಲುಗಳ ಉದ್ಯಾನಗಳಿವೆ. ಸೆಂಟ್ರಲ್ ವಿಸ್ಟಾ ಅವೆನ್ಯೂವನ್ನು ಮೀಸಲಾದ ವಿತರಣಾ ವಲಯಗಳೊಂದಿಗೆ ಪರಿಷ್ಕರಿಸಲಾಗಿದೆ, ಅಲ್ಲಿ ಐಸ್ ಕ್ರೀಮ್ ಜತೆಗೆ 16 ರಾಜ್ಯಗಳ ಆಹಾರವೂ ಲಭ್ಯವಿರುತ್ತದೆ. ಸಾರ್ವಜನಿಕ ಸೌಲಭ್ಯಗಳಿಗಾಗಿ ಹೊಸ ಬ್ಲಾಕ್‌ಗಳು ಮತ್ತು 1000 ಕ್ಕೂ ಹೆಚ್ಚು ಕಾರುಗಳಿಗೆ ಪಾರ್ಕಿಂಗ್ ವಲಯಗಳು ಇರುತ್ತವೆ.
ಇದು ರಾಷ್ಟ್ರದ ಪವರ್ ಕಾರಿಡಾರ್ ಆಗಿರುವ ಸೆಂಟ್ರಲ್ ವಿಸ್ಟಾದ ಮಹತ್ವಾಕಾಂಕ್ಷೆಯ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಪೂರ್ಣಗೊಂಡ ಮೊದಲ ಹಂತವಾಗಿದೆ. ಸಂಪೂರ್ಣ ಯೋಜನೆಯು ಹೊಸ ತ್ರಿಕೋನ ಸಂಸತ್ತಿನ ಕಟ್ಟಡ, ಸಾಮಾನ್ಯ ಕೇಂದ್ರ ಕಾರ್ಯದರ್ಶಿ, ಪ್ರಧಾನ ಮಂತ್ರಿಯ ಹೊಸ ನಿವಾಸ ಮತ್ತು ಕಚೇರಿ ಹಾಗೂ ಉಪರಾಷ್ಟ್ರಪತಿಯ ಹೊಸ ಎನ್‌ಕ್ಲೇವ್ ಅನ್ನು ಕಲ್ಪಿಸುತ್ತದೆ.
Teachers Dayಗೆ ಹೊಸ ಯೋಜನೆ ಘೋಷಿಸಿದ ಪ್ರಧಾನಿ ಮೋದಿ, ದೇಶದ 14,500 ಶಾಲೆಗಳ ಉನ್ನತೀಕರಣ!
ಹಿನ್ನೆಲೆ:
1911ರಲ್ಲಿ ಭಾರತದ ಬ್ರಿಟಿಷ್ ಸಾಮ್ರಾಜ್ಯದ ರಾಜಧಾನಿಯನ್ನು ಕೋಲ್ಕತಾದಿಂದ ದೆಹಲಿಗೆ ವರ್ಗಾಯಿಸಿದ್ದನ್ನು ಘೋಷಿಸಲು ಬ್ರಿಟನ್ ಸಾಮ್ರಾಟ 5ನೇ ಕಿಂಗ್ ಜಾಜ್‌ರ್ ದೆಹಲಿಗೆ ಭೇಟಿ ನೀಡಿದ್ದರು. ಅವರ ಗೌರವಾರ್ಥವಾಗಿ ಈಗ ‘ರಾಜಪಥ’ ಎಂದು ಕರೆಯಲಾಗುವ ‘ಕಿಂಗ್ಸ್‌ವೇ’ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 1905ರಲ್ಲಿ ಇದನ್ನು ಉದ್ಘಾಟಿಸಲಾಯಿತು. ಸ್ವಾತಂತ್ರ್ಯದ ಬಳಿಕ ‘ಕಿಂಗ್ಸ್‌ವೇ’ಯನ್ನು ಹಿಂದಿ ಭಾಷೆಯಲ್ಲಿ ಅನುವಾದಿಸಿ ‘ರಾಜಪಥ’ ಎಂದು ನಾಮಕರಣ ಮಾಡಲಾಯಿತು.