ತಮ್ಮ ಇಷ್ಟದ ಎಲ್‌ಪಿಜಿ ಸಿಲಿಂಡರ್‌ ಪೂರೈಕೆದಾರರ ಮುಖಾಂತರ ತಮ್ಮ ಎಲ್‌ಪಿಜಿ ಸಿಲಿಂಡರ್‌ ಪಡೆಯಲು ಅವಕಾಶ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಅವಕಾಶ ಚಂಡೀಗಢ, ಕೊಯಮತ್ತೂರು, ಗುರುಗ್ರಾಮ, ಪುಣೆ ಮತ್ತು ರಾಂಚಿಯಲ್ಲಿ ಪ್ರಾಯೋಗಿಕವಾಗಿ ಜಾರಿ

ನವದೆಹಲಿ (ಜೂ.11): ಗ್ರಾಹಕರು ಇನ್ನು ಮುಂದಿನ ದಿನಗಳಲ್ಲಿ ತಮ್ಮ ಇಷ್ಟದ ಎಲ್‌ಪಿಜಿ ಸಿಲಿಂಡರ್‌ ಪೂರೈಕೆದಾರರ ಮುಖಾಂತರ ತಮ್ಮ ಎಲ್‌ಪಿಜಿ ಸಿಲಿಂಡರ್‌ ಪಡೆಯುವ ಅವಕಾಶವೊಂದನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಮಾಡಿಕೊಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲಿಗೆ ಈ ವ್ಯವಸ್ಥೆಯನ್ನು ಚಂಡೀಗಢ, ಕೊಯಮತ್ತೂರು, ಗುರುಗ್ರಾಮ, ಪುಣೆ ಮತ್ತು ರಾಂಚಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಇದು ಯಶಸ್ವಿಯಾದರೆ ದೇಶಾದ್ಯಂತ ಈ ವ್ಯವಸ್ಥೆ ಜಾರಿಯಾಗುವ ನಿರೀಕ್ಷೆಯಿದೆ.

4 ದಿನದಲ್ಲಿ 2ನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆ; ಜನಸಾಮಾನ್ಯರಿಗೆ ಮತ್ತೆ ಹೊರೆ!

ಪ್ರಸ್ತುತ ಓರ್ವ ನಿಗದಿತ ಡೀಲರ್‌ನಿಂದ ಮಾತ್ರವೇ ಗ್ರಾಹಕರು ತಮ್ಮ ಎಲ್‌ಪಿಜಿ ಸಿಲಿಂಡರ್‌ ಅನ್ನು ರೀಫಿಲ್‌ ಮಾಡಿಕೊಳ್ಳಬಹುದಾಗಿದೆ. ಇದರಿಂದ ಕಡಿಮೆ ಸಿಲಿಂಡರ್‌ಗಳ ಲಭ್ಯತೆ ಇರುವ ಕಡೆಗಳಲ್ಲಿ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮಿಷ್ಟದ ಡೀಲರ್‌ಗಳಿಂದ ಸಿಲಿಂಡರ್‌ ಪಡೆಯುವ ಸೌಲಭ್ಯ ಒದಗಿಸಲು ಕೇಂದ್ರ ನಿರ್ಧರಿಸಿದೆ.