ಗಗನಕ್ಕೇರಿದ್ದ ಎಲ್‌ಪಿಜಿ ದರ| ಪೆಟ್ರೋಲ್‌, ಡೀಸೆಲ್‌ ಬಳಿಕ ಎಲ್‌ಪಿಜಿ ಬೆಲೆ 10 ರು. ಇಳಿಕೆ!| ಏಪ್ರಿಲ್‌ 1ರಿಂದ 812ಕ್ಕೆ ಇಳಿಕೆ

ನವದೆಹಲಿ(ಏ.01): ಗಗನಕ್ಕೇರಿದ್ದ ಎಲ್‌ಪಿಜಿ ದರವನ್ನು 10 ರು. ಇಳಿಸುವ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ಕೇಂದ್ರ ಸರ್ಕಾರ ಕೊಂಚ ತಗ್ಗಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 10 ರು. ಕಡಿಮೆ ಮಾಡಿರುವುದಾಗಿ ಬುಧವಾರ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ತಿಳಿಸಿದೆ.

ಸದ್ಯ 14.2 ಕೇಜಿ ತೂಕದ ಸಿಲಿಂಡರ್‌ನ ಮಾರುಕಟ್ಟೆಬೆಲೆ 822 ರು. ಇದ್ದು, ಏಪ್ರಿಲ್‌ 1ರಿಂದ ಅದು 812ಕ್ಕೆ ಇಳಿಕೆಯಾಗಲಿದೆ. ಫೆಬ್ರವರಿಯಿಂದ ಈಚೆಗೆ ಅಡುಗೆ ಅನಿಲದ ಸಿಲಿಂಡರ್‌ ಬೆಲೆ 125 ರು. ಏರಿಕೆಯಾಗಿತ್ತು.

ಈ ನಡುವೆ, ಶತಕದ ಅಂಚು ತಲುಪಿದ್ದ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳು ಮತ್ತಷ್ಟುತಗ್ಗಲಿವೆ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ. ಈಗಾಗಲೇ ಕಳೆದೊಂದು ವಾರದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳು ಮೂರು ಬಾರಿ ಇಳಿಕೆಯಾಗಿವೆ.