ಪ್ರಧಾನಿ ನರೇಂದ್ರ ಮೋದಿ ವಿದೇಶ ಭೇಟಿಗಾಗಿ ಸರ್ಕಾರದಿಂದ 5 ವರ್ಷದಲ್ಲಿ 254 ಕೋಟಿ ಖರ್ಚು!

"ಲಭ್ಯವಿರುವ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯವರ ವಿದೇಶ ಪ್ರವಾಸದ ವೆಚ್ಚ 2,54,87,01,373 ರೂಪಾಯಿಗಳು" ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಮೇಲ್ಮನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
 

Minister V Muraleedharan Informs Govt Spent Over Rs 254 Crore On Pm Modi Foreign Visits In 5 Years san

ನವದೆಹಲಿ (ಜು.21): ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳಿಗೆ ಸರ್ಕಾರ 254.87 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ರಾಜ್ಯಸಭೆಗೆ ಗುರುವಾರ ಸರ್ಕಾರದಿಂದ ಅಧಿಕೃತವಾಗಿ ಮಾಹಿತಿ ನೀಡಲಾಗಿದೆ.  "ಲಭ್ಯವಿರುವ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯವರ ವಿದೇಶ ಪ್ರವಾಸದ ವೆಚ್ಚ 2,54,87,01,373 ರೂಪಾಯಿಗಳು" ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಮೇಲ್ಮನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರ ಲಿಖಿತ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಜುಲೈ 20 ರಂದು ಈ ಮಾಹಿತಿ ನೀಡಿದ್ದಾರೆ. “ಲಭ್ಯವಿರುವ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯವರ ವಿದೇಶ ಪ್ರವಾಸದ ವೆಚ್ಚ  2,54,87,01,373 ರೂಪಾಯಿ' ಎಂದಿದ್ದಾರೆ.

2019ರ ಫೆಬ್ರವರಿ 21 ರಿಂದ 2022 ನವೆಂಬರ್ 16ರ ನಡುವೆ ಮೋದಿಯವರ ವಿದೇಶ ಪ್ರವಾಸಗಳಿಗೆ 22 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಈ ವರ್ಷದ ಫೆಬ್ರವರಿಯಲ್ಲಿ, ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ವಿದೇಶ ಪ್ರವಾಸಗಳ ವೆಚ್ಚದ ಕುರಿತು ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು. "ರಾಷ್ಟ್ರಪತಿಗಳ ಭೇಟಿಗಳಿಗಾಗಿ 6,24,31,424 ರೂಪಾಯಿಗಳನ್ನು, ಪ್ರಧಾನ ಮಂತ್ರಿಗಳ ಭೇಟಿಗಾಗಿ 22,76,76,934 ರೂಪಾಯಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರ ವಿದೇಶ ಭೇಟಿಗಳಿಗಾಗಿ 20,87,01,475 ಮೊತ್ತವನ್ನು ಸರ್ಕಾರ ವೆಚ್ಚ ಮಾಡಿದೆ" ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಸರ್ಕಾರದ ಬಗ್ಗೆಯೇ ಟೀಕೆ ಮಾಡಿದ ಸಚಿವನನ್ನು ವಜಾ ಮಾಡಿದ ಅಶೋಕ್‌ ಗ್ಲೆಹೊಟ್

ಲಿಖಿತ ಉತ್ತರದಲ್ಲಿ ಮೋದಿ ಈ ಅವಧಿಯಲ್ಲಿ ಭೇಟಿ ನೀಡಿದ 21 ದೇಶಗಳ ಪಟ್ಟಿಯನ್ನು ಸಹ ಒಳಗೊಂಡಿದೆ. ಗುರುವಾರ, ವಿದೇಶಾಂಗ ಸಚಿವಾಲಯವು ಪ್ರತ್ಯೇಕ ಉತ್ತರದಲ್ಲಿ, ಫೆಬ್ರವರಿ 2021 ರಿಂದ ಜೂನ್ 2023 ರ ನಡುವೆ ಮೋದಿಯವರ ವಿದೇಶ ಪ್ರವಾಸಗಳಿಗೆ 30 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚವಾಗಿದೆ ಎಂದು ತಿಳಿಸಿದೆ. ಸಿಪಿಐ(ಎಂ) ಸಂಸದ ವಿ. ಶಿವದಾಸನ್ ಅವರ ಲಿಖಿತ ಪ್ರಶ್ನೆಗೆ ಉತ್ತರವಾಗಿ ಮಾಹಿತಿ ನೀಡಿದ ಮುರಳೀಧರನ್‌ “ಲಭ್ಯವಿರುವ ಮಾಹಿತಿಯ ಪ್ರಕಾರ, ಫೆಬ್ರವರಿ 2021 ರಿಂದ ಜೂನ್ 2023 ರವರೆಗೆ ಪ್ರಧಾನಿಯವರ ವಿದೇಶ ಪ್ರವಾಸದ ವೆಚ್ಚ ರೂ. 30,80,47,075 ರೂಪಾಯಿ' ಎಂದಿದ್ದಾರೆ.

ಮಣಿಪುರ ಯುವತಿಯರ ಬೆತ್ತಲೆ ಪ್ರಕರಣಕ್ಕೆ ಪ್ರಧಾನಿಯ ಟೀಕಿಸಿದ ಕಿಶೋರ್‌, 'ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ..'

ಸಚಿವಾಲಯದ ಉತ್ತರವು ಈ ಅವಧಿಯಲ್ಲಿ ಪ್ರಧಾನ ಮಂತ್ರಿಯವರ 20 ವಿದೇಶಿ ಪ್ರವಾಸಗಳನ್ನು ಪಟ್ಟಿಮಾಡಿದೆ, 2021ರ ಮಾರ್ಚ್ 26-27ರ ನಡುವೆ ಬಾಂಗ್ಲಾದೇಶಕ್ಕೆ ಅವರ ಪ್ರವಾಸದಿಂದ ಪ್ರಾರಂಭಿಸಿ 2023ರ ಜೂನ್ 20-25ರ ನಡುವೆ ಯುಎಸ್ ಮತ್ತು ಈಜಿಪ್ಟ್‌ಗೆ ಭೇಟಿಯನ್ನು ಇದು ಒಳಗೊಂಡಿದೆ.

Latest Videos
Follow Us:
Download App:
  • android
  • ios