ಸರ್ಕಾರದ ಬಗ್ಗೆಯೇ ಟೀಕೆ ಮಾಡಿದ ಸಚಿವನನ್ನು ವಜಾ ಮಾಡಿದ ಅಶೋಕ್ ಗ್ಲೆಹೊಟ್
ನಮ್ಮ ಸರ್ಕಾರ ಮಣಿಪುರ ಕುರಿತಾಗಿ ಟೀಕೆ ಮಾಡುವ ಬದಲು ನಮ್ಮ ರಾಜ್ಯದ ಮಹಿಳೆಯರ ಕುರಿತಾಗಿ ಚಿಂತೆ ಮಾಡಬೇಕು ಎಂದು ಹೇಳಿದ್ದ ರಾಜಸ್ಥಾನದ ಸಚಿವ ರಾಜೇಂದ್ರ ಗುಧಾರನ್ನು ಮುಖ್ಯಮಂತ್ರಿ ಅಶೋಕ್ ಗ್ಲೆಹೊಟ್ ತಮ್ಮ ಕ್ಯಾಬಿನೆಟ್‌ನಿಂದ ವಜಾ ಮಾಡಿದ್ದಾರೆ.
ಜೈಪುರ (ಜು.21): ಮಣಿಪುರದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿಯೇ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ದೂಷಣೆಗಳ ಬಗ್ಗೆ ಮಾತನಾಡಬೇಕು ಎಂದು ರಾಜಸ್ಥಾನ ಸರ್ಕಾರದ ಸಚಿವ ರಾಜೇಂದ್ರ ಗುಧಾ ಶುಕ್ರವಾರ ವಿಧಾನಸಭೆಯಲ್ಲಿಯೇ ಹೇಳಿದ್ದರು. ಇದರ ಬೆನ್ನಲ್ಲಿಯೇ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗ್ಲೆಹೊಟ್, ರಾಜೇಂದ್ರ ಗುಧಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿವ ರಾಜೇಂದ್ರ ಗುಧಾ ಅವರನ್ನು ಸ್ಥಾನದಿಂದ ವಜಾಗೊಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಮೂಲಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದೆ. ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿರುವ ರಾಜೇಂದ್ರ ಗುಧಾ, ವಿಧಾನಸಭೆಯಲ್ಲಿ ತಮ್ಮದೇ ಸರ್ಕಾರವನ್ನು ಟೀಕೆ ಮಾಡಿದ್ದರು. ವಿಧಾನಸಭೆಯಲ್ಲಿ ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುತ್ತಿರುವ ವೇಳೆ, ಅವರು ತಮ್ಮದೇ ಸರ್ಕಾರದ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಚಿವರ ಹೇಳಿಕೆಯ ಬೆನ್ನಲ್ಲಿಯೇ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ರಾಜಸ್ಥಾನದಲ್ಲಿ ನಮ್ಮ ಸರ್ಕಾರವೇ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ವಿಫಲವಾಗಿದೆ. ಮಣಿಪುರದ ಬಗ್ಗೆ ಪ್ರತಿಕ್ರಿಯಿಸುವ ಮುನ್ನ ನಾವು ನಮ್ಮ ಮನೆಯಲ್ಲಿಯೇ ಏನಾಗುತ್ತಿದೆ ಎಂದು ನೋಡಬೇಕು' ಎಂದು ವಿಧಾನಸಭೆಯಲ್ಲಿ ಹೇಳಿದ್ದರು.
ರಾಜಭವನದ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗ್ಲೆಹೊಟ್, ಸಚಿವ ರಾಜೇಂದ್ರ ಗುಧಾ ಅವರನ್ನು ವಜಾ ಮಾಡುವ ಕುರಿತಂತೆ ರಾಜ್ಯ ಪಾಲ ಕಲರಾಜ್ ಮಿಶ್ರಾ ಅವರಿಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಮುಖ್ಯಮಂತ್ರಿಯ ಶಿಫಾರಸನ್ನು ರಾಜ್ಯಪಾಲರು ತಕ್ಷಣವೇ ಒಪ್ಪಿದ್ದಾರೆ ಎನ್ನಲಾಗಿದೆ.
ಸೀತೆಯ ಸೌಂದರ್ಯಕ್ಕೆ ರಾಮ ಹಾಗೂ ರಾವಣ ಇಬ್ಬರೂ ಹುಚ್ಚರಾಗಿದ್ದರು: ರಾಜಸ್ಥಾನ ಸಚಿವನ ಹೇಳಿಕೆ
'ಮುಖ್ಯಮಂತ್ರಿ ಅಶೋಕ್ ಗ್ಲೆಹೊಟ್ ಅವರು, ರಾಜ್ಯ ಸಚಿವರಾಗಿರುವ ರಾಜೇಂದ್ರ ಗುಧಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವ ಶಿಫಾರಸನ್ನು ಜುಲೈ 21ರ ಸಂಜೆ ರಾಜ್ಯಪಾಲರಿಗೆ ಕಳುಹಿಸಿದ್ದರು. ಇನ್ನು ಮುಖ್ಯಮಂತ್ರಿಯವರ ಶಿಫಾರಸನ್ನು ರಾಜ್ಯಪಾಲರು ತಕ್ಷಣವೇ ಒಪ್ಪಿಕೊಂಡಿದ್ದಾರೆ' ಎಂದು ರಾಜಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಧಿಕೃತ ಹೇಳಿಕೆಯಲ್ಲಿ ರಾಜೇಂದ್ರ ಗುಧಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು ಕಾರಣವೇನು ಎನ್ನುವುದನ್ನು ತಿಳಿಸಲಾಗಿಲ್ಲ.
ಬೆಂಗ್ಳೂರಲ್ಲಿ ರಾಜಸ್ಥಾನ ಭವನಕ್ಕೆ ಜಾಗ ಕೊಡಿ: ಕರ್ನಾಟಕ ಸಿಎಂಗೆ ಗೆಹ್ಲೋಟ್ ಪತ್ರ
"ಸಿಎಂಗೆ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯವಿಲ್ಲ! ಅವರದೇ ಸಚಿವ ರಾಜೇಂದ್ರ ಗುಧಾ ಅವರು ವಿಧಾನಸಭೆಯಲ್ಲಿ ಸತ್ಯವನ್ನು ಹೇಳಿದಾಗ, ಗೆಹ್ಲೋಟ್ ಅವರಿಗೆ ತುಂಬಾ ಕಷ್ಟವಾಗಿದೆ. ಸತ್ಯ ಹೇಳಿದ್ದಕ್ಕಾಗಿ ಅವರನ್ನೇ ಹುದ್ದೆಯಿಂದ ತೆಗೆದುಹಾಕಲಾಗಿದೆ' ಎಂದು ರಾಜಸ್ಥಾನ ಸರ್ಕಾರದ ಸಚಿವ ಸ್ಥಾನದಿಂದ ರಾಜೇಂದ್ರ ಗುಧಾ ಅವರನ್ನು ವಜಾ ಮಾಡಿದ್ದಕ್ಕೆ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಟ್ವೀಟ್ ಮಾಡಿದ್ದಾರೆ..
ಕಾಂಗ್ರೆಸ್ ಶೈಲಿಯ ಮಹಿಳಾ ಸಬಲೀಕರಣ, ಪ್ರಜಾಸತ್ತಾತ್ಮಕ ಮನೋಧರ್ಮವನ್ನು ಪ್ರೇರೇಪಿಸಿದ ಇಂದಿರಾ ಗಾಂಧಿ! ರಾಜಸ್ಥಾನ ಸರ್ಕಾರದಲ್ಲಿ ಒಬ್ಬ ಸಚಿವರನ್ನು ಸತ್ಯ ಹೇಳಿದ್ದಕ್ಕಾಗಿ ತೆಗೆದುಹಾಕಲಾಗಿದೆ. ಮೊಹಬ್ಬತ್ ಕಿ ದುಕಾನ್‌ನಲ್ಲಿ ಪ್ರಾಮಾಣಿಕ ಗ್ರಾಹಕರಿಗೆ ಯಾವುದೇ ಜಾಗ ಇರೋದಿಲ್ಲ. ಈ ದುಕಾನ್‌ನಲ್ಲಿ ಭ್ರಷ್ಟರು ಮತ್ತು ಸುಳ್ಳುಗಾರರಿಗೆ ಮಾತ್ರ ಸ್ವಾಗತ ಎಂದು ಬಿಜೆಪಿ ಟ್ವೀಟ್ ಮಾಡಿದೆ.