ಆರ್‌ಸಿ-ಬಿಲ್ ಗೇಟ್ಸ್ ಭೇಟಿ : ಕೃತಕ ಬುದ್ಧಿಮತ್ತೆ ಬಗ್ಗೆ ಚರ್ಚೆ
ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಅವರು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಬುಧವಾರ ಅವರ ಕಚೇರಿಯಲ್ಲಿ ಭೇಟಿ ಮಾಡಿದರು.
ನವದೆಹಲಿ: ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಅವರು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಬುಧವಾರ ಅವರ ಕಚೇರಿಯಲ್ಲಿ ಭೇಟಿ ಮಾಡಿದರು. ಈ ವೇಳೆ ಕೃತಕ ಬುದ್ಧಿಮತ್ತೆ (artificial intelligence)ಸೇರಿ ಅನೇಕ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಿದರು. ಬಳಿಕ ನಮ್ಮಿಬ್ಬರ ಜಂಟಿ ಕೆಲಸಕ್ಕಾಗಿ ಧನ್ಯವಾದಗಳು ರಾಜೀವ್ ಎಂದು ತಾವು ಸಹಿ ಮಾಡಿ ಬರೆದಿದ್ದ ತಮ್ಮದೇ ಪುಸ್ತಕದ ಪ್ರತಿಯನ್ನು ರಾಜೀವ್ ಅವರಿಗೆ ಗೇಟ್ಸ್ ನೀಡಿದರು.
ಇಂಟೆಲ್‌ನಲ್ಲಿ ರಾಜೀವ್ ಕೆಲಸ ಮಾಡುತ್ತಿದ್ದ 1980ರ ದಶಕ ಮಧ್ಯದಿಂದಲೂ ಅವರಿಗೆ ಗೇಟ್ಸ್ (Bill Gates)ಪರಿಚಿತರು. ಭೇಟಿ ವೇಳೆ ತಾವು ಇಂಟೆಲ್‌ನಲ್ಲಿದ್ದಾಗ ಕೆಫೆಟೆರಿಯಾದಲ್ಲಿ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಹಾಗೂ ಲ್ಯಾರ್ರಿ ಎಲ್ಲಿಸನ್ ಅವರು ಚರ್ಚೆಯಲ್ಲಿ ತೊಡಗಿರುವುದನ್ನು ನೋಡುವುದು ಸಾಮಾನ್ಯವಾಗಿತ್ತು ಎಂಬುದನ್ನು ರಾಜೀವ್ ನೆನಪಿಸಿಕೊಂಡರು. ತಮ್ಮ ರಾಜಕೀಯ ಜೀವನ ಪ್ರಾರಂಭಿಸುವ ಮೊದಲು 30 ವರ್ಷಗಳ ಕಾಲ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ರಾಜೀವ್, 1986ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ತಮ್ಮ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಮೊದಲು ಕೆಲಸಕ್ಕೆ ಸೇರಿದ ಸಂಸ್ಥೆಯೇ ಮೈಕ್ರೋಸಾಫ್ಟ್ (Microsoft)ಆಗಿತ್ತು.
ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..
ಒರಾಕಲ್ ಸಿಇಒ ಪತ್ನಿ ಜೊತೆ 67 ವರ್ಷದ ಬಿಲ್ ಗೇಟ್ಸ್ ಡೇಟಿಂಗ್!