ಚನ್ನಿ ಪಂಜಾಬ್ ಸಿಎಂ ಆಗ್ತಿರೋದು ದಲಿತರಿಗೆ ಅವಮಾನ ಎಂದ ಬಿಜೆಪಿ!
* ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ
* ಅಚ್ಚರಿಯ ರೀತಿಯಲ್ಲಿ ಚರಣಜಿತ್ ಚನ್ನಿ ಆಯ್ಕೆ
* ಅಕಾಲಿ ದಳ, ಬಿಜೆಪಿಗೆ ಶಾಕ್ ಕೊಟ್ಟ ಕಾಂಗ್ರೆಸ್ ಆಯ್ಕೆ
* ಚನ್ನಿ ಪಂಜಾಬ್ ಸಿಎಂ ಆಗ್ತಿರೋದು ದಲಿತರಿಗೆ ಅವಮಾನ ಎಂದ ಬಿಜೆಪಿ
ಚಂಡೀಗಢ(ಸೆ.20): ಪಂಜಾಬ್ ಕಾಂಗ್ರೆಸ್‌ನಲ್ಲಿ ದೀರ್ಘಕಾಲದ ಭಿನ್ನಾಭಿಪ್ರಾಯದ ಬಳಿಕ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಅಮರೀಂದರ್ ಸಿಂಗ್ ರಾಜೀನಾಮೆ ಬಳಿಕ ಚರಣಜಿತ್ ಸಿಂಗ್ ಚನ್ನಿ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿದ್ದು, ಸೋಮವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆಧರೆ ಪ್ರಮಾಣವಚನಕ್ಕೂ ಮುನ್ನ ಪ್ರಾಬಲಪಡಿಸಲುರ್ಥನೆ ಸಲ್ಲಿಸಲು ಅವರು ರೂಪನಗರದ ಗುರುದ್ವಾರ ಶ್ರೀ ಕಟಲಘರ್ ಸಾಹಿಬ್‌ಗೆ ತಲುಪಿದ್ದಾರೆ. ಇನ್ನು ದಲಿತ ನಾಯಕ ಚನ್ನಿ ಹೆಸರು ಸಿಎಂ ಸ್ಥಾನಕ್ಕೆ ಆಯ್ಕೆಯಾಗಿದ್ದು ಬಿಜೆಪಿ ಹಾಗೂ ಅಕಾಲಿದಳಕ್ಕೆ ಶಾಕ್ ಕೊಟ್ಟಂತಾಗಿದೆ.
ಚನ್ನಿ ಸಿಎಂ ಆಗುವುದು ದಲಿತರಿಗೆ ಮಾಡಿದ ಅವಮಾನ ಎಂದ ಬಿಜೆಪಿ
ಬಿಜೆಪಿ ಐಟಿ ಸೆಲ್ ನ ರಾಷ್ಟ್ರೀಯ ಉಸ್ತುವಾರಿ ಅಮಿತ್ ಮಾಳವೀಯ ಈ ಬಗ್ಗೆ ಟ್ವೀಟ್ ಮಾಡುತ್ತಾ ಚನ್ನಿಗೆ ಪ್ರಶ್ನೆಗಳನ್ನಸೆದಿದ್ದಾರೆ. ಗಾಂಧೀ ಕುಟುಂಬದಿಂದ ಆಯ್ಕೆಯಾದ ನವಜೋತ್ ಸಿಂಗ್ ಕುರ್ಚಿ ಚರಣಜಿತ್ ಸಿಂಗ್ ಚನ್ನಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಇದು, ಇಡೀ ದಲಿತ ಸಮುದಾಯಕ್ಕೆ ದೊಡ್ಡ ಅವಮಾನ. ದಲಿತ ಸಬಲೀಕರಣವನ್ನು ಸಂಪೂರ್ಣವಾಗಿ ದುರ್ಬಲಗೊಳಿಸು ಕಾಂಗ್ರೆಸ್ ಮಾಡಿದ ಷಡ್ಯಂತ್ರ , ಇದು ನಾಚಿಕೆಗೇಡಿನ ಸಂಗತಿ ಎಂದು ಮಾಳವೀಯ ಬರೆದಿದ್ದಾರೆ.
ಚನ್ನಿ ಯಾರು?
- ಸಿಖ್ ದಲಿತ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕ
- 58 ವರ್ಷದ ನಾಯಕ. 3 ಬಾರಿ ಶಾಸಕರಾಗಿದ್ದಾರೆ.
- 2015ರಿಂದ 2 ವರ್ಷ ಪ್ರತಿಪಕ್ಷ ನಾಯಕರಾಗಿದ್ದರು
- ಅಮರೀಂದರ್ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು
- ಅಮರೀಂದರ್ ನಾಯಕತ್ವದ ವಿರುದ್ಧ ದನಿ ಎತ್ತಿದ್ದರು
ದಲಿತರಿಗೇ ಏಕೆ ಸಿಎಂ ಪಟ್ಟ?
ಇತ್ತ ಬಿಜೆಪಿ ಕೂಡ ಮುಂದಿನ ಚುನಾವಣೆಯಲ್ಲಿ ದಲಿತ ಮುಖವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿಲು ಸಿದ್ಧತೆ ಮಾಡಿಕೊಂಡಿದೆ. ಒಂದು ವೇಳೆ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದರೆ ದಲಿತ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಬಿಜೆಪಿ ಘೋಷಣೆ ಮಾಡಿದೆ. ಅದೇ ರೀತಿ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಹೊರಟಿರುವ ಶಿರೋಮಣಿ ಅಕಾಲಿದಳ ಉಪ ಮುಖ್ಯಮಂತ್ರಿ ಅಭ್ಯರ್ಥಿ ದಲಿತ ಸಮುದಾಯದವರೇ ಆಗಲಿದ್ದಾರೆ ಎಂದು ಹೇಳಿದೆ. ಪಂಜಾಬ್‌ನಲ್ಲಿ ದಲಿತ ಸಮುದಾಯದ ಮತಗಳು ಮೂರನೇ ಒಂದರಷ್ಟಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಚರಣ್‌ಜಿತ್ ಸಿಂಗ್ ಆಯ್ಕೆ ಮಹತ್ವ ಪಡೆದುಕೊಂಡಿದೆ.