ಆನೆ ಕೊಂದ ದುರುಳರ ವಿರುದ್ಧ ಕೇರಳ MP ರಾಹುಲ್ ಮೌನ; ಕಿಡಿ ಕಾರಿದ ಮೇನಕಾ ಗಾಂಧಿ!

ಗರ್ಭಿಣಿ ಆನೆ ಕೊಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ವರದಿ ಕೇಳಿದ ಬೆನ್ನಲ್ಲೇ ಇದೀಗ ಬಿಜೆಪಿ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಘಟನೆ ಖಂಡಿಸಿದ್ದಾರೆ. ಇಷ್ಟೇ ಅಲ್ಲ ವಯನಾಜ್ ಎಂಪಿ ರಾಹುಲ್ ಗಾಂಧಿ ಮೌನ ವಹಿಸಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

Menaka Gandhi slams Rahul Gandhi silent on culprits of Kerala elephant death

ನವದೆಹಲಿ(ಜೂ.04): ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ನೆಡದ ಆನೆ ಕೊಂದ ಪ್ರಕರಣ ದಿಲ್ಲಿಯಲ್ಲಿ ಸದ್ದು ಮಾಡುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ವರದಿ ಕೇಳಿದೆ.  ಇದೀಗ ಬಿಜೆಪಿ ಸಂಸದೆ, ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಘಟನೆಯನ್ನು ಖಂಡಿಸಿದ್ದಾರೆ. ಈ ಘಟನೆಗೆ ಎಡೆ ಮಾಡಿಕೊಟ್ಟ ಹಲವರ ತಲೆದಂಡಕ್ಕೆ ಮೇನಕಾ ಗಾಂಧಿ ಆಗ್ರಹಿಸಿದ್ದಾರೆ.

ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!..

ಕೇರಳ ವನ್ಯಜೀವಿ ಕಾರ್ಯದರ್ಶಿಯನ್ನು ತಕ್ಷಣವೇ ವಜಾ ಮಾಡಬೇಕು, ವನ್ಯಜೀವಿ ಸಂರಕ್ಷಣಾ ಸಚಿವ ರಾಜೀನಾಮೆ ನೀಡಬೇಕು ಎಂದು ಮೇನಕಾ ಆಗ್ರಹಿಸಿದ್ದಾರೆ. ಇದರೊಂದಿಗೆ ವಯನಾಡು ಎಂಪಿ ರಾಹುಲ್ ಗಾಂಧಿ ಮೌನ ವಹಿಸಿರುವುದನ್ನು ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ರಾಹುಲ್ ಗಾಂಧಿ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಉದ್ದೇಶ ಪೂರ್ವಕ ಕೊಲೆಗೆ ಸಮ; ಗರ್ಭಿಣಿ ಆನೆ ಕೊಂದ ಘಟನೆ ಖಂಡಿಸಿದ ರತನ್ ಟಾಟಾ!.

ವನ್ಯಪ್ರಾಣಿಗಳ ವಿಚಾರದಲ್ಲಿ ಮಲ್ಲಪುರಂ ಅತ್ಯಂತ ಹಿಂಸಾತ್ಮಕ ಜಿಲ್ಲೆಯಾಗಿದೆ. ಅತೀ ಹೆಚ್ಚು ಪ್ರಾಣಿ ಹಿಂಸೆಗಳು ಮಲ್ಲಪುರಂ ಜಿಲ್ಲೆಯಲ್ಲಿ ವರದಿಯಾಗಿದೆ. ಇದೀಗ ಗರ್ಭಿಣಿ ಆನೆಗೆ ಹಣ್ಣಿಲ್ಲಿ ಸ್ಫೋಟಕ ನೀಡಿ ಕೊಂದ ಘಟನೆ ಭಾರತವೇ ತಲೆ ತಗ್ಗಿಸಬೇಕಾಗಿದೆ. ರಾಹುಲ್ ಗಾಂಧಿ ಲೋಕಸಭಾ ಕ್ಷೇತ್ರವಾಗಿರುವ ವಯನಾಡಿಗೆ  ಅಂಟಿಕೊಂಡಿರುವ ಮಣಪ್ಪುರಂ ಜಿಲ್ಲೆಯಲ್ಲಿ ಘನಘೋರ ಘಟನೆ ನಡೆದಿದೆ. ಆದರೆ ರಾಹುಲ್ ಗಾಂಧಿ ಮೌನವಾಗಿದ್ದಾರೆ. ಯಾವುದೇ ಕ್ರಮ ತೆಗೆದುಕೊಂಡಿಲ್ಲ? ಎಂದು ಮೇನಕಾ ಪ್ರಶ್ನಿಸಿದ್ದಾರೆ.

ಗರ್ಭೀಣಿ ಆನೆ ಕೊಂದ ಸುದ್ದಿ ಕೇಳಿ ಮರುಗಿದ ಕೊಹ್ಲಿ, ರೋಹಿತ್; ಜನತೆಗೆ ಮನವಿ ಮಾಡಿದ ಕ್ರಿಕೆಟರ್ಸ್! 

ದೇಶದಲ್ಲೇ ಮಣಪ್ಪುರಂ ಅತ್ಯಂತ ಘನಘೋರ ಜಿಲ್ಲೆಯಾಗಿದೆ. ಇಲ್ಲಿನ ಪಂಚಾಯ್ ದಾರಿಯಲ್ಲಿ ವಿಷ ಹಾಕಿ, ಹಲವು ಪ್ರಾಣಿ-ಪಕ್ಷಿಗಳ ಸಾವಿಗೂ ಕಾರಣವಾಗಿದೆ. ದೇಶದಲ್ಲಿ ಅತೀ ಹೆಚ್ಚು ಪ್ರಾಣಿ ಪಕ್ಷಿಗಳ ಮೇಲಿನ ಹಿಂಸೆ ದಾಖಲಾಗಿರುವುದು ಮಣಪ್ಪುರಂ ಜಿಲ್ಲೆಯಲ್ಲಿ ಎಂದು ಮೇನಕಾ ಗಾಂಧಿ ಹೇಳಿದ್ದಾರೆ. 

ಮನುಷ್ಯನ ಮೋಜಿಗೆ ಆನೆ ಬಲಿ;ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನೋವಿನ ನುಡಿಗಳಿವು!

ಭಾರತದಲ್ಲಿ ಆನೆಗಳು ಅಳಿವಿನಂಚಿನಲ್ಲಿದೆ. ಶೀಘ್ರದಲ್ಲೇ ಹುಲಿಯ ವಿನಾಶದ ಅಂಚಿನಲ್ಲಿರುವ ಜೀವಿಗಳ ಪಟ್ಟ ಆನೆಗಳು ಸಿಗುವು ಸಾಧ್ಯತೆ ಇದೆ. ಭಾರತದಲ್ಲಿ ಇದೀಗ 20,000 ಅನೆಗಳು ಮಾತ್ರ ಉಳಿದಿವೆ. ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಇದು ಆತಂತಕಕಾರಿ ಎಂದು ಮೇನಕಾ ಗಾಂಧಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios