ಮುಂಬೈ(ಜೂ.04): ದೇವರ ನಾಡು ಅನ್ನೋ ಖ್ಯಾತಿಗಳಿಸಿರುವ ಕೇರಳದಲ್ಲಿ ಗರ್ಭಿಣಿ ಆನೆ ಕೊಂದ ಘಟನೆ ಆಘಾತಕಾರಿಯಾಗಿದೆ. ಸ್ಫೋಟಕವಿಟ್ಟು ಪೈನಾಪಲ್ ನೀಡಿ ಗರ್ಭಿಣಿ ಆನೆಯನ್ನು ಕೊಲ್ಲಲಾಗಿದೆ. ಸ್ಫೋಟಕಿಂದ ಸಂಪೂರ್ಣ ಬಾಯಿ ಸ್ಫೋಟಕೊಂಡು ನೋವು ತಾಳಲಾರದೆ ನದಿಯಲ್ಲಿ ನಿಂತು ಪ್ರಾಣಬಿಟ್ಟಿದೆ. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತದ ಮಾನ ಹರಾಜಾಗಿದೆ. ಈ ಘೋರ ಘಟನೆಯನ್ನು ಉದ್ಯಮಿ ರತನ್ ಟಾಟಾ ಕಟುವಾಗಿ ಖಂಡಿಸಿದ್ದಾರೆ.

ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!.

ನಾನು ತೀವ್ರ ದುಃಖಿತ ಹಾಗೂ ಆಘಾತಗೊಂಡಿದ್ದೇನೆ. ಕಟುಕರ ಗುಂಪೊಂದು ಮುಗ್ದ ಗರ್ಭಿಣೆ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್ ನೀಡಿ ಕೊಲ್ಲಲಾಗಿದೆ ಅನ್ನೋ ಘಟನೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೂಕ ಪ್ರಾಣಿಗಳ ಮೇಲೆ ನಡೆಯುವ ಇಂತಹ ಕ್ರೂರ ಘಟನೆಗಳು, ಪೂರ್ವನಿಯೋಜಿತ ಮನುಷ್ಯನ ಕೊಲೆಗೆ ಸಮ. ನ್ಯಾಯ ಸಿಗಲಿ ಎಂದು ರಟನ್ ಟಾಟಾ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

 

ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!...

ಪ್ರಾಣಿಗಳನ್ನು ಅತೀಯಾಗಿ ಪ್ರೀತಿಸುವ ರತನ್ ಟಾಟಾ ಈ ಘಟನೆಯಿಂದ ನೊಂದಿದ್ದಾರೆ. 82 ವರ್ಷದ ಹಿರಿಯ ಉದ್ಯಮಿ ರತನ್ ಟಾಟಾ ಮಾತ್ರವಲ್ಲ, ದೇಶದ ಪ್ರತಿಯೊಬ್ಬರು ಈ ಘಟನೆಯನ್ನು ಖಂಡಿಸಿದ್ದಾರೆ. ಕೇರಳ ಸರ್ಕಾರ ಆನೆ ಕೊಂದ ಪ್ರಕರಣದ ತನಿಖೆ ನಡೆಸಲು ವನ್ಯ ಜೀವಿ ವಿಭಾಗಕ್ಕೆ ಸೂಚಿಸಿದೆ. ಇತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಆನೆ ಕೊಂದ ಪ್ರಕರಣವನ್ನು ಕೇಂದ್ರ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಕೇರಳ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿದೆ.