Asianet Suvarna News Asianet Suvarna News

ಸುಳ್ಳು ಹೇಳಿ ಸಿಕ್ಕಿ ಬಿದ್ದ ಮೆಹಬೂಬಾ ಮುಫ್ತಿ, ಗೃಹಬಂಧನ ಠುಸ್ ಪಟಾಕಿ ಎಂದ ಪೊಲೀಸ್!

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಬಿಜೆಪಿ ತೋರುತ್ತಿರುವ ಆಸಕ್ತಿಯಿಂದ ಇತರ ಪಕ್ಷಗಳು ಕಂಗಲಾಗಿದೆ. ಇದರ ನಡುವೆ ರಾಜಕೀಯ ತಂತ್ರಗಾರಿಕೆ ಬಳಸಿದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪೇಚಿಗೆ ಸಿಲುಕಿದ್ದಾರೆ. ಗೃಹಬಂಧನ ಬಾಂಬ್ ಸಿಡಿಸಲು ಯತ್ನಿಸಿದ ಮುಫ್ತಿಗೆ ಪೊಲೀಸರು ಖಡಕ್ ತಿರುಗೇಟು ನೀಡಿದ್ದಾರೆ.

Mehbooba Mufti claims she is house arrest during amit shah visit Srinagar Police refuse allegation with proof ckm
Author
First Published Oct 5, 2022, 4:26 PM IST

ಶ್ರೀನಗರ(ಅ.05):  ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿ ರಾಜಕೀಯವಾಗಿ ಸದ್ದು ಮಾಡಲು ಯತ್ನಿಸಿದ ಪಿಡಿಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ ಮುಖಭಂಗ ಅನುಭವಿಸಿದ್ದಾರೆ.  ಅಮಿತ್ ಶಾ ಭೇಟಿಯಿಂದ ಜಮ್ಮು ಮತ್ತು ಕಾಶ್ಮೀರದ ಹಲವು ನಾಯರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಪೊಲೀಸರು ನನ್ನ ಮನೆಯ ಗೇಟ್ ಲಾಕ್ ಮಾಡಿದ್ದಾರೆ. ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ಮುಫ್ತಿ ಟ್ವಿಟರ್ ಮೂಲಕ ಆರೋಪ ಮಾಡಿದ್ದರು. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಬಿಜೆಪಿ ನಾಯಕರು ಸ್ಥಳೀಯ ಧನಿಗಳನ್ನು ಹತ್ತಿಕ್ಕುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಆರೋಪ ಮಾಡಿದ್ದರು. ಆದರೆ ಮುಫ್ತಿ ಆರೋಪ ಮಾಡಿದ ಬೆನ್ನಲ್ಲೇ ಶ್ರೀನಗರ ಪೋಲಿಸರು ಫೋಟೋ ಸಮೇತ ಸಾಕ್ಷಿ ನೀಡಿದ್ದಾರೆ. ಯಾರನ್ನೂ ಗೃಹಬಂಧನದಲ್ಲಿ ಇಟ್ಟಿಲ್ಲ. ಮುಫ್ತಿ ಸಂಚರಿಸಲು ಯಾವುದೇ ಅಡೆ ತಡೆ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ರಾಜಕೀಯ ಸಂಚಲನ ಸೃಷ್ಟಿಸಲು ಸಿಡಿಸಿದ ಪಟಾಕಿ ಠುಸ್ ಆಗಿದೆ.

ಕೇಂದ್ರ ಗೃಹ ಸಚಿವರು(Amit shah) ಕಾಶ್ಮೀರದಲ್ಲಿ(Jammu and Kashmir) ಸಂಚರಿಸುತ್ತಿದ್ದಾರೆ. ಡ್ರಮ್ ಬಾರಿಸುತ್ತಾ ಕಾರ್ಯಕ್ರಮ ಉದ್ಘಾಟಿಸುತ್ತಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿಯಾಗಿರುವ(Mehbooba Mufti) ನಾನು ಮನೆಯಲ್ಲಿ ಬಂಧಿಯಾಗಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತನ ಮದುವೆಗಾಗಿ ಪಠಾಣ್‌ಗೆ ತೆರಳಬೇಕಿತ್ತು. ಆದರೆ ಗೃಹಬಂಧನದಲ್ಲಿ ಇರಿಸಲಾಗಿದೆ. ಮಾಜಿ ಮುಖ್ಯಮಂತ್ರಿಯ ಮೂಲಭೂತ ಹಕ್ಕುಗಳನ್ನು ಕಸಿಯಲಾಗುತ್ತಿದೆ ಅಂದರೆ ಇನ್ನು ಸಾಮಾನ್ಯ ಜನರ ಕತೆ ಏನು? ಎಂದು ಮೆಹಬೂಬ ಮುಫ್ತಿ ಪ್ರಶ್ನಿಸಿದ್ದಾರೆ.

ಹುತಾತ್ಮರಾದ ನಾಲ್ವರು ಜಮ್ಮು ಪೊಲೀಸ್ ಕುಟುಂಬಕ್ಕೆ ಉದ್ಯೋಗ: ನೇಮಕಾತಿ ಪತ್ರ ನೀಡಿದ ಅಮಿತ್ ಷಾ

ಕಳೆದ ರಾತ್ರಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕರೆ ಮಾಡಿ ಗೃಹಬಂಧನ(house arrest) ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಪಠಾಣ್‌ಗೆ ಪ್ರಯಾಣ ಮಾಡಲು ಅನುಮತಿ ನಿರಾಕರಿಸಲಾಗಿದೆ. ಪೊಲೀಸರು(Srinagar Police) ನಮ್ಮ ಮನೆಯ ಗೇಟ್ ಲಾಕ್ ಮಾಡಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರದ ಕಾನೂನು ಸುವ್ಯವಸ್ಥೆ ಎಂದು ಮೆಹಬೂಬೂ ಮುಫ್ತಿ ಟ್ವೀಟ್ ಮಾಡಿದ್ದಾರೆ.

 

 

ಈ ಟ್ವೀಟ್‌ಗೆ ಶ್ರೀನಗರ ಪೊಲೀಸರು ಖಡಕ್ ತಿರುಗೇಟು ನೀಡಿದ್ದಾರೆ. ಮೆಹಬೂಬ ಮುಫ್ತಿ ಪಠಾಣ ಪ್ರಯಾಣ ಮಾಡಲು ಅಥವಾ ಇನ್ಯಾವುದೇ ಪ್ರದೇಶಕ್ಕೆ ಪ್ರಯಾಣ ಮಾಡಲು ಅನುಮತಿ ನಿರಾಕರಿಸಿಲ್ಲ. ಮುಫ್ತಿ ಮುಕ್ತವಾಗಿ ಪ್ರಯಾಣ ಮಾಡಬಹುದು. ಇನ್ನು ಮುಪ್ತಿಯವರು ಒಳಗಿನಿಂದ ಗೇಟ್ ಫೋಟೋ ತೆಗೆದು ಪೋಸ್ಟ್ ಮಾಡಿದ್ದಾರೆ. ಒಳಗಿನಿಂದ ಅವರೇ ಗೇಟ್ ಲಾಕ್ ಮಾಡಿಕೊಂಡು ಬಂಗಲೆಯಲ್ಲಿ ಕುಳಿತಿದ್ದಾರೆ. ಪೊಲೀಸರು ಮುಫ್ತಿ ಮನೆಯಲ್ಲಿ ಲಾಕ್ ಮಾಡಿಲ್ಲ ಎಂದು ಶ್ರೀಗನರ ಪೊಲೀಸರು ಖಡಕ್ ಉತ್ತರ ನೀಡಿದ್ದಾರೆ.

ಜಮ್ಮು ಕಾಶ್ಮೀರದ ಭಾಷಾವಾರು ಗುಂಪು Pahari ಸಮುದಾಯಕ್ಕೆ ಮೀಸಲಾತಿ ಘೋಷಿಸಿದ Amit Shah

ಪೊಲೀಸರ ಟ್ವೀಟ್ ವೈರಲ್ ಆಗುತ್ತಿದ್ದಂತೆ ಮುಫ್ತಿ ಸೈಲೆಂಟ್ ಆಗಿದ್ದಾರೆ. ಇದೀಗ ಮುಫ್ತಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಕಾರ್ಯಕರ್ತನ ಮದುವೆಗೆ ಹೋಗಲು ಇಷ್ಟವಿಲ್ಲ ಎಂದರೆ ಇತರ ಹಲವು ಕಾರಣ ನೀಡಬಹುದು. ಆದರ ಕೇಂದ್ರದ ಮೇಲೆ ಗೂಬೆ ಕೂರಿಸಿ ಕಾರ್ಯಕರ್ತನಲ್ಲೇ ಆಕ್ರೋಶ ಹುಟ್ಟು ಹಾಕಿದ್ದೀರಿ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

Follow Us:
Download App:
  • android
  • ios