Asianet Suvarna News Asianet Suvarna News

ಬೆಡ್ ಶೀಟ್ 11 ಲಕ್ಷ, TV 2 ಲಕ್ಷ, ಒಟ್ಟು 82 ಲಕ್ಷ ರೂ, ಸರ್ಕಾರ ದುಡ್ಡಲ್ಲಿ ಮೆಹಬೂಬಾ ಮನೆ ರೀಪೇರಿ!

ಪಿಡಿಪಿ ಪಕ್ಷದ ನಾಯಕಿ, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿ ಎನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅನ್ನೋ ಕುರಿತು ಚರ್ಚೆಗಳಿವೆ. ಆದರೆ ಸರ್ಕಾರದ ದುಡ್ಡಲ್ಲಿ  11 ಲಕ್ಷ ರೂಪಾಯಿ ಬೆಡ್ ಶೀಟ್, 2 ಲಕ್ಷ ರೂಪಾಯಿ ಟಿವಿ, 40 ಲಕ್ಷ ರೂಪಾಯಿ ಮನೆ ವಸ್ತುಗಳನ್ನು  ಖರೀದಿಸಿದ್ದಾರೆ. ಇದು ಮಾಹಿತಿ ಹಕ್ಕು ಕಾಯ್ದೆ ಅಡಿ ಬಹಿರಂಗವಾಗಿದೆ.

Mehbooba Mufti as Kashmir CM spent Rs 82 lakh in  6 month span for refurbishment of residence ckm
Author
Bengaluru, First Published Jan 5, 2021, 5:28 PM IST

ಶ್ರೀನಗರ(ಜ.05): ಮೆಹಬೂಬಾ ಮುಫ್ತಿ ಜಮ್ಮ ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ವೇಳೆ 6 ತಿಂಗಳಲ್ಲಿ ಬರೋಬ್ಬರಿ 82 ಲಕ್ಷ ರೂಪಾಯಿ ಸರ್ಕಾರದ  ಹಣ ಖರ್ಚು ಮಾಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಈ ವಿಚಾರ ಬೆಳಕಿಗೆ ಬಂದಿದೆ. ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 2018ರ ಜನವರಿಯಿಂದ ಜೂನ್ ತಿಂಗಳ ವರಗೆ ಮುಫ್ತಿ ತಮ್ಮ ನಿವಾಸ ನವೀಕರಣಕ್ಕೆ 82 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

ಗಡಿಯಲ್ಲಿ ನೆತ್ತರು ಹರಿಸಿದ ಪಾಕ್‌ ಜತೆ ಚರ್ಚೆಗೆ ಮುಫ್ತಿ ಸಲಹೆ.

ಇದು ಸರ್ಕಾರದ ದುಡ್ಡ. ಶ್ರೀಗನರದ ಗುಪ್ಕರ್ ರಸ್ತೆಯಲ್ಲಿರುವ ತಮ್ಮ ಆಫೀಶಿಯಲ್ ನಿವಾಸ ನವೀಕರಣಕ್ಕೆ ಸರ್ಕಾರದಿಂದ 82 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತ  ಇನಾಮ್ ಉನ್ ನಬಿ ಸೌದಗರ್ ಮಾಹಿತಿ ಹಕ್ಕು ಕಾಯ್ದೆ ಮೂಲಕ ಈ ವಿಚಾರ ಬೆಳಕಿಗೆ ತಂದಿದ್ದಾರೆ. 
ಕಾಶ್ಮೀರದ 7 ಪಕ್ಷಗಳ ಕೂಟಕ್ಕೆ ಫಾರೂಖ್‌ ಅಬ್ದುಲ್ಲಾ ಮುಖ್ಯಸ್ಥ!. 

 ಟಿವಿ, ಮನೆ ಪೀಠೋಪಕರಣ, ಬೆಡ್, ಸೇರಿದಂತೆ ಹಲವು ವಸ್ತುಗಳನ್ನು ಮೆಹಬೂಬಾ ಮುಫ್ತಿ ಖರೀದಿಸಿದ್ದಾರೆ. 2 ಲಕ್ಷ ರೂಪಾಯಿ LED ಟಿವಿ, ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಗಾರ್ಡನ್ ಅಂಬ್ರೆಲ್ಲಾ, 11.62 ಲಕ್ಷ ರೂಪಾಯಿ ಬೆಡ್‌ಶೀಟ್, 25 ಲಕ್ಷ ರೂಪಾಯಿ ಮೌಲ್ಯದ ಪಿಠೋಪಕರಣ, 28  ಲಕ್ಷ ರೂಪಾಯಿ ಮೌಲ್ಯದ ಕಾರ್ಪೆಟ್, 40 ಲಕ್ಷ ರೂಪಾಯಿ ಮೌಲ್ಯದ ಪಾತ್ರೆ ಸೇರಿದಂತೆ ಅಡುಗೆ ಸಾಮಾನುಗಳನ್ನು ಮುಫ್ತಿ ಖರೀದಿಸಿದ್ದಾರೆ.

ಒಟ್ಟು ಸರ್ಕಾರಿಂದ 82 ಲಕ್ಷ ರೂಪಾಯಿ ಮನೆ ನವೀಕರಣಕ್ಕೆ ಪಡೆದುಕೊಂಡಿದ್ದಾರೆ.  ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. 

Follow Us:
Download App:
  • android
  • ios