ಶ್ರೀನಗರ (ನ.15): ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿ, ನೆತ್ತರು ಹರಿಸಿದ ಪಾಕಿಸ್ತಾನ ಜತೆ ಕೇಂದ್ರ ಸರ್ಕಾರ ಶಾಂತಿ ಮಾತುಕತೆ ನಡೆಸಬೇಕು ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸಲಹೆ ನೀಡಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

 ಭಾರತ-ಪಾಕ್‌ ಗುಂಡಿನ ಚಕಮಕಿಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಮುಫ್ತಿ, ಗಡಿ ನಿಯಂತ್ರಣ ಪ್ರದೇಶದಲ್ಲಿ ಉಭಯ ದೇಶಗಳ ಸೈನಿಕರ ಸಾವು-ನೋವುಗಳನ್ನು ನೋಡುವುದು ಅತ್ಯಂತ ದುಃಖಕರ ಸಂಗತಿ. 

ಯೋಧರ ಜೊತೆ ಮೋದಿ ದೀಪಾವಳಿ, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ! ..

ಹೀಗಾಗಿ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ಮುಖಂಡರು ತಮ್ಮ ರಾಜಕೀಯ ಒತ್ತಾಸೆಯನ್ನು ಬದಿಗಿಟ್ಟು ಶಾಂತಿ ಮಾತುಕತೆಗೆ ಮುಂದಾಗಬೇಕಿದೆ.

ದೇಶದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಒಪ್ಪಿಕೊಂಡಿರುವ ಕದನ ವಿರಾಮವನ್ನು ಪುನಃಸ್ಥಾಪಿಸುವುದು ಅಗತ್ಯವಾಗಿದೆ ಎಂದಿದ್ದಾರೆ.