ದೇಶವನ್ನೇ ಬೆಚ್ಚಿಬೀಳಿಸಿದ್ದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಸಾವಿಗೀಡಾದ ರಾಜ ರಘುವಂಶಿ ಕುಟುಂಬದಲ್ಲಿ ಇದೀಗ ಸಂತಸ ಮನೆಮಾಡಿದೆ. ರಾಜನ ಅಣ್ಣನಿಗೆ ಗಂಡು ಮಗು ಜನಿಸಿದ್ದು, ಆತನೇ ಮರುಹುಟ್ಟು ಪಡೆದು ಬಂದಿದ್ದಾನೆ ಎಂದು ಕುಟುಂಬಸ್ಥರು ನಂಬಿದ್ದಾರೆ. ದುರಂತ ನಡೆದ ಮನೆಯಲ್ಲಿ ಈಗ ಸಂಭ್ರಮ ಮನೆಮಾಡಿದೆ.
ರಾಜ ರಘುವಂಶಿ ಮನೆಯಲ್ಲಿ ಸಂತಸ
ದೇಶವನ್ನೇ ಬೆಚ್ಚಿ ಬೀಳಿಸಿದ ಮೇಘಾಲಯದಲ್ಲಿ ನಡೆದಿದ್ದ ರಾಜ ರಘುವಂಶಿ ಹನಿಮೂನ್ ಪ್ರಕರಣದ ನಂತರ ಸಾವಿಗೀಡಾದ ರಾಜ ರಘುವಂಶಿ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಹೀಗಾಗಿ ಮಗ ರಾಜ ರಘುವಂಶಿ ಅವರ ದುರಂತ ಸಾವಿನ ನಂತರ ಆಘಾತ ಹಾಗೂ ದುಃಖದಿಂದ ದಿಕ್ಕೆಟ್ಟಿದ್ದ ಮನೆಯಲ್ಲಿ ಈಗ ಸಂತಸ ಮನೆ ಮಾಡಿದೆ. ರಾಜನ ಮನೆಯವರು ಆತನೇ ಮರುಹುಟ್ಟು ಪಡೆದು ಬಂದಿದ್ದಾನೆ ಎಂದು ಹೇಳುತ್ತಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಗಷ್ಟೇ ಜನಿಸಿದ ಮಗುವನ್ನು ಮನೆಯವರು ಸಂಭ್ರಮದಿಂದ ಬರಮಾಡಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ.
2025ರ ಮೇ 23ರಂದು ಮಧ್ಯಪ್ರದೇಶದ ಇಂದೋರ್‌ನ ಉದ್ಯಮಿ ರಾಜಾ ರಘವಂಶಿಯನ್ನು ಸ್ವತಃ ಕೈ ಹಿಡಿದ ಪತ್ನಿಯೇ ಹನಿಮೂನ್ ನೆಪದಲ್ಲಿ ಮೇಘಾಲಯಕ್ಕೆ ಕರೆದೊಯ್ದು ಭೀಕರವಾಗಿ ಕೊಲೆ ಮಾಡಿದ್ದಳು. ಈ ಹನಿಮೂನ್ ಕೊಲೆ ಪ್ರಕರಣ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿ ತಲ್ಲಣ ಸೃಷ್ಟಿಸಿತ್ತು. ಹೀಗಾದರೆ ಮದುವೆ ಆಗೋದು ಹೇಗೆ ಎಂದು ಯುವ ಸಮೂಹ ಭಯಪಟ್ಟಿತ್ತು. ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳ ಜಿಲ್ಲೆಯ ವೈಸಾವ್ಡಾಂಗ್ ಜಲಪಾತದ ಬಳಿ ಈ ಭೀಕರ ಕೃತ್ಯ ನಡೆದಿತ್ತು. ರಾಜಾ ಅವರನ್ನು ಕಡಿದು ಕೊಲ್ಲಲಾಯಿತು. ಅವರ ಪತ್ನಿಯೂ ಘಟನೆ ಬಳಿಕ ನಾಪತ್ತೆಯಾಗಿದ್ದರಿಂದ ಇಬ್ಬರು ಸಾವಿಗೀಡಾಗಿರಬಹುದು ಎಂಬ ಅನುಮಾನ ಕಾಡಿತ್ತು. ಆದರೆ ಸ್ಥಳೀಯ ಪೊಲೀಸರು ಹುಡುಕಾಟ ನಡೆಸಿದ ಕೆಲವು ದಿನಗಳ ನಂತರ ಜೂನ್ 2 ರಂದು ಅವರ ಕೊಳೆತ ದೇಹವು ಇಲ್ಲಿ ಪತ್ತೆಯಾಗಿತ್ತು.
ಆದರೆ ಈಗ ರಾಜ ರಘುವಂಶಿ ಕುಟುಂಬದಲ್ಲಿ ಹೊಸ ಅತಿಥಿಯ ಆಗಮನವಾಗಿದೆ. ರಾಜ ರಘುವಂಶಿ ಅವರ ಅತ್ತಿಗೆ ಅಂದರೆ ಅಣ್ಣನ ಹೆಂಡತಿ ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಕುಟುಂಬದವರು ರಾಜ ಎಂದೇ ನಾಮಕರಣ ಮಾಡಿದ್ದಾರೆ.
ರಾಜ ರಘುವಂಶಿ ಸಾವನ್ನಪ್ಪಿದ 9 ತಿಂಗಳಿಗೆ ಸರಿಯಾಗಿ ಕುಟುಂಬದಲ್ಲಿ ಮಗು ಜನನ
ರಾಜ ಅವರ ಹಿರಿಯ ಸೋದರ ಸಚಿನ್ ಹಾಗೂ ಅವರ ಪತ್ನಿಗೆ ಈ ಮಗು ಜನಿಸಿದೆ. ಸಚಿನ್ ಅವರು ಹೇಳುವಂತೆ, ರಾಜ ರಘುವಂಶಿ ಅವರ ಸಾವಿನ ನಂತರ 13ನೇ ದಿನದ ಕಾರ್ಯಕ್ರಮದಲ್ಲಿ ಕಾಮಕ್ಯ ದೇಗುಲದಲ್ಲಿ ಪುರೋಹಿತರಾಗಿ ಕೆಲಸ ಮಾಡುತ್ತಿರುವ ಒಬ್ಬರು, ರಾಜ ರಘುವಂಶಿ ಅವರ ಸಾವು ಸಹಜ ಸಾವು ಅಲ್ಲದೇ ಇರುವುದರಿಂದ ಅವರು ನಿಮ್ಮದೇ ಕುಟುಂಬದಲ್ಲಿ 29 ವರ್ಷದ ಅವರು ಮತ್ತೆ ಹುಟ್ಟಿ ಬರುತ್ತಾರೆ ಎಂದು ಹೇಳಿದ್ದರು ಎಂದು ಸಚಿನ್ ಹೇಳಿದ್ದಾರೆ.
ರಾಜ ರಘುವಂಶಿ ಮರುಜನ್ಮ ಪಡೆದಿದ್ದಾನೆ ಎಂದು ವಾದಿಸಲು ಸಚಿನ್ ತನ್ನ ಮಗುವಿನ ಜನನದ ಸಮಯವನ್ನು ಸಹ ತೋರಿಸಿದರು. ರಾಜಾ ಚಾಂದ್ರಮಾನ ಪಾಕ್ಷಿಕದ ಹನ್ನೊಂದನೇ ದಿನದಂದು ಸುಮಾರು 2:40 ಕ್ಕೆ ನಿಧನರಾದರು, ಆದರೆ ಮಗು ಅದೇ ದಿನ ಸುಮಾರು 2:42 ಕ್ಕೆ ಜನಿಸಿದೆ ಎಂದು ಅವರು ಹೇಳಿದರು. ರಾಜನ ಅತ್ತಿಗೆ ಯಾವಾಗಲೂ ನನ್ನ ಕಿರಿಯ ಸಹೋದರನಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದಳು. ಅವನನ್ನು ತನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಳು. ಈಗ ಆಕೆಯ ಹೊಟ್ಟೆಯಲ್ಲಿ ಆತ ಮರುಜನ್ಮ ಪಡೆದಿದ್ದಾನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸುತ್ತಲೂ ಸ್ನೇಹಿತರೇ ಇದ್ದರೂ ಆತ ಮುಳುಗಿದ್ದು ಒಬ್ಬರಿಗೂ ಗೊತ್ತಾಗೇ ಇಲ್ಲ: ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಯುವಕ ಸಾವು
ಇಷ್ಟರವರೆಗೆ ಆಗಿದ್ದೆಲ್ಲವೂ ದೈವೆಚ್ಛೆ. ತಿಂಗಳುಗಟ್ಟಲೆ ದುಃಖದಿಂದ ಬಳಲುತ್ತಿದ್ದ ನಮ್ಮ ಕುಟುಂಬಕ್ಕೆ ರಾಜನ ಜನನವೂ ಸ್ವಲ್ಪ ಸಮಾಧಾನ ತಂದಿದೆ ಎಂದು ಸಚಿನ್ ಅವರ ತಾಯಿ ಉಮಾ ರಘುವಂಶಿ ಹೇಳಿದರು. ನಾವು ಅವನನ್ನು 'ರಾಜ' ಎಂದು ಕರೆದಾಗ, ಅವರು ನಮ್ಮನ್ನು ಹಿಂದಿನಿಂದಲೂ ಗುರುತಿಸಿದಂತೆ ನೋಡುತ್ತಾನೆ ಎಂದು ಅವರು ಹೇಳಿಕೊಂಡಿದ್ದಾರೆ.
ಮೇಘಾಲಯ ಹನಿಮೂನ್ ಕೊಲೆ ಪ್ರಕರಣದ ಹಿನ್ನೆಲೆ
ಇಂದೋರ್‌ನ ರಾಜ ರಘುವಂಶಿ ಹಾಗೂ ಆತನ ಪತ್ನಿ ಸೋನಂ( 25) ತನ್ನ ಪ್ರಿಯಕರ ರಾಜ್ ಕುಶ್ವಾಹ್ ಜೊತೆ ಸೇರಿ ಮೊದಲೇ ಪ್ಲಾನ್ ಮಾಡಿ ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳ ಜಿಲ್ಲೆಯ ವೈಸಾವ್ಡಾಂಗ್ ಜಲಪಾತದ ಬಳಿ ಮೇ 23, 2025 ರಂದು ರಾಜಾ ಅವರನ್ನು ಕಡಿದು ಕೊಂದಿದ್ದರು.ಜೂನ್ 2 ರಂದು ಅವರ ಕೊಳೆತ ದೇಹವು ಪತ್ತೆಯಾಗಿತ್ತು. ಈ ಹತ್ಯೆಯನ್ನು ಪೂರ್ವನಿಯೋಜಿತ ಮತ್ತು ಧಾರ್ಮಿಕ ವಿಧಿವಿಧಾನಗಳಿಂದ ನಡೆಸಲಾಗಿದೆ ಎಂದು ರಾಜ ರಘುವಂಶಿ ಕುಟುಂಬದವರು ಆರೋಪಿಸಿದ್ದರು. ಘಟನೆಯ ನಂತರ ರಾಜ ರಘುವಂಶಿ ಪತ್ನಿ ಸೋನಂ ಹಾಗೂ ಆಕೆಯ ಗೆಳೆಯ ರಾಜ್ ಕುಶ್ವಾಹ್ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ. ಕೊಲೆಯ ನಂತರ ನಾಪತ್ತೆಯಾಗಿದ್ದ ಸೋನಂ ಘಟನೆ ನಡೆದ ಸ್ಥಳದಿಂದ 1,200 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಗಾಜಿಪುರದಲ್ಲಿ ಪತ್ತೆಯಾಗಿದ್ದರು. ಜೂನ್ 9, 2025 ರಂದು ಅವರು ಪೊಲೀಸರಿಗೆ ಶರಣಾಗಿದ್ದರು.
ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಣ್ಣ ಬಳಿದ ನಾಲ್ಕೇ ತಿಂಗಳಿಗೆ ಆನೆ ಚಂಚಲ್ ಸಾವು: ಬಣ್ಣ ಹಾಕಿದ್ದಕ್ಕೆ ಪ್ರಾಣಿಪ್ರಿಯರ ತೀವ್ರ ಆಕ್ರೋಶ
ಘಟನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 2025 ರಲ್ಲಿ, ಮೇಘಾಲಯ ಪೊಲೀಸರು 790 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ದೇಶವನ್ನೇ ಬೆಚ್ಚಿಬೀಳಿಸಿದ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿದರು. ಸೋನಂ ಮತ್ತು ಆಕೆಯ ಪ್ರಿಯಕರ ಸೇರಿದಂತೆ ಐದು ಜನರ ಮೇಲೆ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶದ ಆರೋಪ ಹೊರಿಸಲಾಗಿದೆ.


