ರಾಜ್‌ಕೋಟ್(ಡಿ.14): ಕನಸುಗಳನ್ನು ಬೆನ್ನತ್ತು..ಎಂಬ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸಲಹೆಯನ್ನು ಕೇಳಿದರವರು ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಸಾಧ್ಯವಾದುದನ್ನು ಮಾಡಿ ತೋರಿಸುತ್ತಾರೆ.

ಅದರಂತೆ ತಮ್ಮ ಕನಸುಗಳನ್ನು ಬೆನ್ನತ್ತಿದ್ದ ಹಸನ್ ಸಫಿನ್, ಕೇವಲ 22 ವರ್ಷದ ಪ್ರಾಯದಲ್ಲಿ ಐಪಿಎಸ್ ಅಧಿಕಾರಿಯಾಗಿ ಇಡೀ ದೇಶದ ಗಮನ ಸೆಳೆದಿದ್ದಾರೆ.

ಖಾಕಿ ತೊಟ್ಟ ಸಿಂಹಿಣಿ: ಅತ್ಯಾಚಾರಿಯನ್ನು ಸೌದಿಯಿಂದ ಎಳೆದು ತಂದ ಲೇಡಿ ಐಪಿಎಸ್!

ಹೌದು, 22 ವರ್ಷದ ಹಸನ್ ಸಫಿನ್ ಕಳೆದ ವರ್ಷದ UPSC ಪರೀಕ್ಷೆಯಲ್ಲಿ 570ನೇ ರ್ಯಾಂಕ್ ಪಡೆಯುವ ಮೂಲಕ ಐಪಿಎಸ್ ಸೇವೆಗೆ ಆಯ್ಕೆಯಾಗಿದ್ದಾರೆ.

ಗುಜರಾತ್’ನ ಕನೋದಾರ್ ಗ್ರಾಮದ ವಜ್ರದ ಗಣಿಯಲ್ಲಿ ಕಾರ್ಮಿಕರಾಗಿ ದುಡಿಯುವ ಮುಸ್ತಫಾ ಹಸನ್ ಹಾಗೂ ನಸೀಂಭಾನು ಅವರ ಪುತ್ರರಾದ ಹಸನ್ ಸಫಿನ್, ಕಷ್ಟಪಟ್ಟು ಓದಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಐಎಎಸ್ ಆಗುವ ಕನಸು ಕಂಡಿದ್ದ ಹಸನ್, ಐಪಿಎಸ್’ಗೆ ಆಯ್ಕೆಯಾಗಿದ್ದು  ದೇಶದ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಯಚೂರು: ವಿದ್ಯಾರ್ಥಿಗಳ ಜತೆ ಬಿಸಿಊಟ ಸೇವಿಸಿ ಸರಳತೆ ಮೆರೆದ IPS ಆಫೀಸರ್

ಅಂದಹಾಗೆ ಇದೇ ಡಿ.23ರಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ.