ಮಥುರಾ ಮಸೀದಿ ಸಮೀಕ್ಷೆಗೆ ಶಾಹಿ ಈದ್ಗಾ ಮಸೀದಿ ಸಮಿತಿ ಆಕ್ಷೇಪಣೆ: ಅರ್ಜಿ ಸಲ್ಲಿಸಲು ನಿರ್ಧಾರ
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜನವರಿ 2ರ ಬಳಿಕ ಮಸೀದಿಯ ಸಮೀಕ್ಷೆ ನಡೆಸಿ ಜನವರಿ 20ರಂದು ತನಗೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

ಮಥುರಾ: ಇಲ್ಲಿನ ಕೃಷ್ಣ ದೇಗುಲದ (Krishna Temple) ಪಕ್ಕದಲ್ಲಿರುವ ಶಾಹಿ ಮಸೀದಿಯ ಸಮೀಕ್ಷೆಗೆ (Shahi Masjid Survey) ಜಿಲ್ಲಾ ನ್ಯಾಯಾಲಯ (District Court) ಶನಿವಾರ ಆದೇಶಿಸಿದ ಹಿನ್ನೆಲೆಯಲ್ಲಿ, ಆದೇಶವನ್ನು ಪ್ರಶ್ನಿಸಿ ಜನವರಿ 20ರಂದು ಅರ್ಜಿ (Plea) ಸಲ್ಲಿಸುವುದಾಗಿ ಶಾಹಿ ಈದ್ಗಾ ಮಸೀದಿ ಸಮಿತಿ (Shahi Idgah Masjid Committee) ಹೇಳಿದೆ. ‘ಮಥುರಾದ (Mathura) ಕೃಷ್ಣ ದೇಗುಲದ ಪಕ್ಕದಲ್ಲೇ ಇರುವ ಶಾಹಿ ಈದ್ಗಾ ಮಸೀದಿಯು ಕೃಷ್ಣನ ಜನ್ಮ ಸ್ಥಳವಾಗಿದ್ದು, ಇಲ್ಲಿ ಹಿಂದಿದ್ದ ಕೇಶವ ದೇವ ದೇಗುಲವನ್ನು 1669-70ರಲ್ಲಿ ಮೊಘಲ್ ದೊರೆ ಔರಂಗಜೇಬ್ ಧ್ವಂಸಗೊಳಿಸಿದ್ದ. ಬಳಿಕ ಅಲ್ಲಿ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ ಮಸೀದಿ ಇರುವ ಸ್ಥಳ ಕೃಷ್ಣ ಜನ್ಮಭೂಮಿ ಎಂದು ಖಚಿತಪಡಿಸಿಕೊಳ್ಳಲು ಅದರ ಸಮೀಕ್ಷೆಗೆ ಆದೇಶ ನೀಡಬೇಕು’ ಎಂದು ಹಿಂದೂ ಸೇನಾ ಸಂಘಟನೆಯ ವಿಷ್ಣು ಗುಪ್ತಾ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜನವರಿ 2ರ ಬಳಿಕ ಮಸೀದಿಯ ಸಮೀಕ್ಷೆ ನಡೆಸಿ ಜನವರಿ 20ರಂದು ತನಗೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.
ಕಾಶಿ ರೀತಿ ಮಥುರಾ ಮಸೀದಿ ಸರ್ವೇಗೆ ಆದೇಶ
ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಇದೆ ಎನ್ನುವ ಕಾರಣಕ್ಕೆ ಸಮೀಕ್ಷೆಗೆ ಆದೇಶ ನೀಡಿದ ರೀತಿಯಲ್ಲೇ, ಮಥುರಾದಲ್ಲಿ ಶಾಹಿ ಈದ್ಗಾ ಮಸೀದಿಯಲ್ಲೂ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಮಥುರಾ ಜಿಲ್ಲಾ ನ್ಯಾಯಾಲಯ ಶನಿವಾರ ಮಹತ್ವದ ಆದೇಶ ಹೊರಡಿಸಿದೆ.‘ಮಥುರಾ ಕೃಷ್ಣ ದೇಗುಲದ ಪಕ್ಕದಲ್ಲೇ ಇರುವ ಶಾಹಿ ಈದ್ಗಾ ಮಸೀದಿಯು ಕೃಷ್ಣನ ಜನ್ಮ ಸ್ಥಳವಾಗಿದ್ದು, ಇಲ್ಲಿ ಹಿಂದಿದ್ದ ಕೇಶವ ದೇವ ದೇಗುಲವನ್ನು 1669-70ರಲ್ಲಿ ಮೊಗಲ್ ದೊರೆ ಔರಂಗಜೇಬ್ ಧ್ವಂಸಗೊಳಿಸಿದ್ದ. ಬಳಿಕ ಅಲ್ಲಿ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ ಮಸೀದಿ ಇರುವ ಸ್ಥಳ ಕೃಷ್ಣ ಜನ್ಮಭೂಮಿ ಎಂದು ಖಚಿತಪಡಿಕೊಳ್ಳಲು ಅದರ ಸಮೀಕ್ಷೆಗೆ ಆದೇಶ ನೀಡಬೇಕು’ ಎಂದು ಹಿಂದೂ ಸೇನಾ ಸಂಘಟನೆಯ ವಿಷ್ಣುಗುಪ್ತಾ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿ: Krishna Janmabhoomi case: ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಮಥುರಾ ಕೋರ್ಟ್ ಆದೇಶ
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜನವರಿ 2 ರ ಬಳಿಕ ಮಸೀದಿಯ ಸಮೀಕ್ಷೆ ನಡೆಸಿ ಜನವರಿ 20ರಂದು ತನಗೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ. ಈ ಹಿಂದೆ ಇದೇ ರೀತಿಯ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಥುರಾದ ಸಿವಿಲ್ ನ್ಯಾಯಾಲಯ ವಜಾಗೊಳಿಸಿತ್ತು.
1991ರ ಪ್ರಾರ್ಥನಾ ಮಂದಿರಗಳ ಕಾಯ್ದೆ ಅನ್ವಯ, 1947ರ ಆಗಸ್ಟ್ 15ರಂದು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಅಯೋಧ್ಯೆ ಪ್ರಕರಣ ಹೊರತು ಉಳಿದ ಎಲ್ಲಾ ಪ್ರಕರಣಗಳಿಗೂ ಈ ಕಾಯ್ದೆ ಅನ್ವಯ. ಹೀಗಾಗಿ ಇಂಥ ಅರ್ಜಿ ಸ್ವೀಕರಿಸಿದರೆ ದೇಶಾದ್ಯಂಥ ಇಂಥ ಸಾವಿರಾರು ಅರ್ಜಿ ಸಲ್ಲಿಕೆಯಾಗಬಹುದು ಎಂದು ಹೇಳಿ ಹಿಂದೂ ಸಂಘಟನೆಗಳ ಅರ್ಜಿ ವಜಾಗೊಳಿಸಿತ್ತು. ಬಳಿಕ ಜಿಲ್ಲಾ ನ್ಯಾಯಾಲಯಕ್ಕೆ ಈ ಕುರಿತು ಮೇಲ್ಮನವಿ ಸಲ್ಲಿಸಲಾಗಿತ್ತು. ಅಲ್ಲಿಯೂ ಅರ್ಜಿ ಸುದೀರ್ಘ ಬಾಕಿ ಉಳಿದ ಹಿನ್ನೆಲೆಯಲ್ಲಿ ಅರ್ಜಿದಾರರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಅರ್ಜಿ ವಿಚಾರಣೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತ್ತು.
ಇದನ್ನೂ ಓದಿ: ಮಥುರಾ ಹೈ ಅಲರ್ಟ್, ಮಸೀದಿಯ ಒಳಗೆ ಹನುಮಾನ್ ಚಾಲಿಸಾ ಪಠಣ ಮಾಡ್ತೇವೆ ಎಂದ ಹಿಂದು ಮಹಾಸಭಾ!