ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಬಾವ್ಲಾ​ದಲ್ಲಿ ನಡೆಸಿದ ಸಮಾವೇಶದಲ್ಲಿ ಭಾರೀ ಭದ್ರತಾ ವೈಫಲ್ಯ ಕಂಡು ಬಂದಿದೆ. ಪ್ರಧಾನಿ ಸಮಾವೇಶದ ವೇಳೆ, ನಿಷೇಧವಿದ್ದರೂ ಕ್ಯಾಮರಾ ಡ್ರೋನ್‌ ಹಾರಿಸಲಾಗಿದ್ದು, ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಡ್ರೋನ್‌ ಅನ್ನು ಹೊಡೆದುರುಳಿಸಿದ್ದಾರೆ.

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಬಾವ್ಲಾ​ದಲ್ಲಿ ನಡೆಸಿದ ಸಮಾವೇಶದಲ್ಲಿ ಭಾರೀ ಭದ್ರತಾ ವೈಫಲ್ಯ ಕಂಡು ಬಂದಿದೆ. ಪ್ರಧಾನಿ ರಾರ‍ಯಲಿಯ ವೇಳೆ, ನಿಷೇಧವಿದ್ದರೂ ಕ್ಯಾಮರಾ ಡ್ರೋನ್‌ ಹಾರಿಸಲಾಗಿದ್ದು, ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಡ್ರೋನ್‌ ಅನ್ನು ಹೊಡೆದುರುಳಿಸಿದ್ದಾರೆ. ಈ ಘಟನೆಯ ಸಂಬಂಧ 3 ಜನರನ್ನು ಬಂಧಿಸಲಾಗಿದೆ. ಶೀಘ್ರದಲ್ಲೇ ಚುನಾವಣೆ ಎದುರಿಸಲಿರುವ ಗುಜರಾತ್‌ನಲ್ಲಿ ಮೋದಿ ಗುರುವಾರ ಪಾಲನ್‌ಪುರ್‌, ಮೊಡಸಾ, ದಹೆಗಾಮ್‌ ಹಾಗೂ ಬಾವ್ಲಾ (ಅಹಮದಾಬಾದ್‌)ನಲ್ಲಿ ಸಮಾವೇಶ ನಡೆಸಿದ್ದರು. 

ಡ್ರೋನ್‌ (Drone) ಹಾರಾಟ ನಿಷೇಧವಿದ್ದರೂ ಬಾವ್ಲಾ​ದಲ್ಲಿ ಮೂವರು ಆರೋಪಿಗಳು ಕ್ಯಾ​ಮರಾ ಇದ್ದ ಡ್ರೋನ್‌ ಹಾರಿ​ಸಿ​ದ್ದ​ರು. ಇದನ್ನು ಭದ್ರತಾ ಸಿಬ್ಬಂದಿ (Security guard) ಹೊಡೆದು ರುಳಿಸಿದ್ದಾರೆ. ಆದರೆ ಡ್ರೋನ್‌ನಲ್ಲಿ ಯಾವ ಸ್ಫೋಟಕ ಸಾಧನವೂ (explosive device) ಪತ್ತೆಯಾಗಿಲ್ಲ. ಆದರೂ ಇದನ್ನು ಹಾರಿಸಿದರ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚಲು ತನಿಖೆ (investigation) ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.ಈ ಹಿಂದೆ ಜ.5ರಲ್ಲಿ ಪಂಜಾಬ್‌ನಲ್ಲಿ ಪ್ರಧಾನಿ ಸಾಗಬೇಕಾದ ಹೆದ್ದಾರಿಯನ್ನು ಪ್ರತಿಭಟನಾಕಾರರು ತಡೆ ಹಿಡಿದ್ದರು. ಇದನ್ನು ಗಂಭೀರ ಭದ್ರತಾ ಲೋಪ ಎಂದು ಪರಿಗಣಿಸಿ ತನಿಖೆಗಾಗಿ ಸುಪ್ರೀಂ ಕೋರ್ಟ್‌ (Supreme Court) ಸಮಿತಿಯನ್ನು ನೇಮಕ ಮಾಡಲಾಗಿತ್ತು.

ಲಚಿತ್ ಬೋರ್ಫುಕನ್ 400ನೇ ಜಯಂತಿ ವರ್ಷಾಚರಣೆ ಸಮಾರೋಪ, ಪ್ರಧಾನಿ ಮೋದಿ ಭಾಷಣ!

'ಪ್ರತಿ ಬಾರಿಯೂ ಮೋದಿ ಚುನಾವಣೆಯಲ್ಲಿ ಗೆಲ್ಲೋದೇಕೆ..!' ಕೇಂದ್ರ ಸರ್ಕಾರಕ್ಕೆ ಭೇಷ್‌ ಎಂದ ಅಮೆರಿಕದ ತಜ್ಞ!