Asianet Suvarna News Asianet Suvarna News

'ಪ್ರತಿ ಬಾರಿಯೂ ಮೋದಿ ಚುನಾವಣೆಯಲ್ಲಿ ಗೆಲ್ಲೋದೇಕೆ..!' ಕೇಂದ್ರ ಸರ್ಕಾರಕ್ಕೆ ಭೇಷ್‌ ಎಂದ ಅಮೆರಿಕದ ತಜ್ಞ!

ಅಮೆರಿಕದ ಪ್ರಖ್ಯಾತ ಸಮಾಜಶಾಸ್ತ್ರಜ್ಞ ಪ್ರಸ್ತುತ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಫ್ರೊಫೆಸರ್‌ ಆಗಿರುವ ಡಾ.ಸಾಲ್ವಟೋರ್‌ ಬಾಬೋನೆಸ್‌, ಇತ್ತೀಚೆಗೆ ಟ್ವಿಟರ್‌ನಲ್ಲಿ ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ವಿಡಿಯೋ ಪೋಸ್ಟ್ ಮಾಡಿದ್ದರು. ಪ್ರತಿ ಬಾರಿಯೂ ಮೋದಿ ಚುನಾವಣೆಯಲ್ಲಿ ಗೆಲ್ಲೋದೇಕೆ ಎಂದು ಶೀರ್ಷಿಕೆ ನೀಡಿ ಅವರು ವಿಡಿಯೋ ಪೋಸ್ಟ್‌ ಮಾಡಿದ್ದರು.
 

Why does Modi win in Every Time  American sociologist praised the Government of India san
Author
First Published Nov 24, 2022, 3:46 PM IST

ನವದೆಹಲಿ (ನ.24): ಪ್ರಸ್ತುತ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕೆಲಸ ಮಾಡುತ್ತಿರುವ ಅಮೆರಿಕದ ಡಾ. ಸಾಲ್ವಟೋರ್‌ ಬಾಬೋನೆಸ್‌, ಪ್ರಧಾನಿ ನರೆಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿದ್ದಾರೆ. ಪ್ರತಿ ಬಾರಿಯೂ ಮೋದಿ ಚುನಾವಣೆಯಲ್ಲಿ ಗೆಲುವು ಕಾಣುವುದೇಕೆ ಎಂದು ಪ್ರಶ್ನೆ ಮಾಡಿ ವಿಡಿಯೋ ಟ್ವೀಟ್‌ ಮಾಡಿರುವ ಅವರು, ಇದಕ್ಕೆ ಒಂದೇ ಶಬ್ದದಲ್ಲಿ ಉತ್ತರ ಹೇಳಬೇಕೆಂದರೆ, ಸಾರ್ವಜನಿಕರ ಸೇವೆ ಎಂದು ಹೇಳಿದ್ದಾರೆ. ಜನರಿಗಾಗಿ ಕೆಲಸ ಮಾಡಬೇಕು ಎನ್ನುವ ಬದ್ಧತೆಯೇ ಅವರ ಈ ಸ್ಥಾನದ ಹಿಂದಿರುವ ಅತಿದೊಡ್ಡ ಕಾರಣವಾಗಿದೆ ಎಂದು ಹೇಳಿದ್ದಾರೆ. ಬಾಬೋನೆಸ್‌ ಹಂಚಿಕೊಂಡಿರುವ ವಿಡಿಯೋದಲ್ಲಿ, ಮೋದಿ ಎಂದಿಗೂ ತಮ್ಮನ್ನು ತಾವು ಮಾಸ್ಟರ್‌ ಎಂದು ಕರೆದುಕೊಂಡಿಲ್ಲ. ತಾವೊಬ್ಬ ಜನರ ಸೇವಕ ಎಂದೇ ಕರೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ಅವರ ಮಾತಿನೊಂದಿಗೆ ಬಾಬೋನೆಸ್‌ ತಮ್ಮ ಮಾತುಗಳನ್ನು ಆರಂಭಿಸಿದ್ದಾರೆ. 'ಪ್ರಜಾಪ್ರಭುತ್ವವು ಕಾಲಕಾಲಕ್ಕೆ ಪ್ರಯತ್ನಿಸುವ ಇತರ ಎಲ್ಲಾ ರೂಪಗಳಿಗೆ ಅಂಗೀಕರಿಸಲ್ಪಟ್ಟ ಸರ್ಕಾರದ ಕೆಟ್ಟ ರೂಪವಾಗಿದೆ ' ಎಂದು ಚರ್ಚಿಲ್‌ ಹೇಳಿತ್ತಾರೆ. ನನ್ನ ಕೆಲವು ಬುದ್ಧಿಜೀವಿ ಸ್ನೇಹಿತರು ಇದನ್ನು ನೋಡುತ್ತಾ ಪ್ರಜಪ್ರಭುತ್ವ ಎನ್ನುವವುದು ಎಷ್ಟು ಕೆಟ್ಟದು ಎನ್ನುತ್ತಾರೆ. ಆದರೆ, ಇದರ ಪೂರ್ಣ ಅರ್ಥ ಅವರಿಗೆ ಇನ್ನೂ ಅವರಿವಾಗಿಲ್ಲ.


ಈ ಕೋಟ್‌ನ ಅರ್ಥವನ್ನು ನಾನು ಇಲ್ಲಿ ಹೇಳುತ್ತೇನೆ. 'ಪ್ರಜಾಪ್ರಭುತ್ವವು ಕಾಲಕಾಲಕ್ಕೆ ಪ್ರಯತ್ನಿಸಿದ ಇತರ ಎಲ್ಲ ರೂಪಗಳಿಗೆ ಅಂಗೀಕರಿಸಲ್ಪಟ್ಟ ಅತ್ಯಂತ ಕೆಟ್ಟ ಸರ್ಕಾರದ ರೂಪವಾಗಿದೆ, ಆದರೆ ನಮ್ಮ ದೇಶದಲ್ಲಿ ಜನರು ಆಡಳಿತವನ್ನು ಮುಂದುವರೆಸಬೇಕು, ಸಾರ್ವಜನಿಕ ಅಭಿಪ್ರಾಯವು ಆಳಬೇಕು ಎಂಬ ಭಾವನೆ ವ್ಯಾಪಕವಾಗಿದೆ. ಮಂತ್ರಿಗಳ ಕಾರ್ಯಗಳನ್ನು ಎಲ್ಲಾ ಸಾಂವಿಧಾನಿಕ ವಿಧಾನಗಳಿಂದ ನಿರ್ದೇಶಿಸಬೇಕು ಮತ್ತು ನಿಯಂತ್ರಿಸಬೇಕು, ಏಕೆಂದರೆ ಅವರು ಜನರ ಸೇವಕರು ಮತ್ತು ಯಜಮಾನರಲ್ಲ ಎನ್ನುವುದೇ ಆಗಿದೆ.

ಮೋದಿ ಈ ಮಾತನ್ನು ಅರ್ಥ ಮಾಡಿಕೊಂಡಿದ್ದಾರೆ: ಮೋದಿ ವಿನ್‌ಸ್ಟನ್‌ ಚರ್ಚಿಲ್ ಅವರ ಅಭಿಮಾನಿಯೇ ಎನ್ನುವುದು ನನಗೆ ಅನಿಸಿಲ್ಲ. ಬಹುಶಃ ಭಾರತೀಯರು ಯಾರೂ ಅವರ ಅಭಿಮಾನಿ ಆಗಿರಲು ಸಾಧ್ಯವೂ ಇಲ್ಲ. ಆದರೆ, ಮೋದಿ ಅವರ ಪ್ರಖ್ಯಾತಿ ಕಳೆದ ಎರಡು ದಶಕದಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಚರ್ಚಿಲ್‌ ಅವರ ಮಾತಿನ ಸಾರವನ್ನು ತುಂಬಾ ಉತ್ತಮವಾಗಿ ತಿಳಿದುಕೊಂಡಿದ್ದಾರೆ. ಮೋದಿ ಕೌಶಲ್ಯಯುತವಾದ ಆಡಳಿತಾರ ಎಂದೇನೂ ಹೇಳೋದಿಲ್ಲ. ಕಳೆದ 20 ವರ್ಷಗಳಲ್ಲಿ ಮೋದಿ ಹಾಗೂ ಬಿಜೆಪಿ ವಿಫಲವಾದ ಸಾಕಷ್ಟು ಉದಾಹಣರಗಳಿವೆ. ಮೋದಿ ಅವರ ಯಶಸ್ಸಿಗೆ ರಾಷ್ಟ್ರೀಯತೆಯೊಂದೇ ಕಾರಣವಲ್ಲ. ಕಾಂಗ್ರೆಸ್‌ ಪಕ್ಷ 'ರಾಷ್ಟ್ರೀಯ' ಎನ್ನುವುದನ್ನು ತನ್ನ ಮಧ್ಯದ ಅಕ್ಷರವನ್ನಾಗಿ ಮಾತ್ರವೇ ಉಳಿಸಿಕೊಂಡಿದೆ. ಆದರೆ, ಮೋದಿಯ ಯಶಸ್‌ಸು ಕೇವಲ ಹಿಂದುತ್ವದ ಕಾರಣಕ್ಕಾಗಿ ಅಲ್ಲ. ಯಾಕೆಂದರೆ, ದೇಶದ ಶೇ. 20ರಷ್ಟು ಮುಸ್ಲಿಮರು ಬಿಜೆಪಿಯ ಹಿಂದುತ್ವ ಅಜೆಂಡಾದ ಕಾರಣಕ್ಕಾಗಿಯೇ ವೋಟ್‌ ಮಾಡೋದಿಲ್ಲ.

ಜಾಗತಿಕ ಸೂಚ್ಯಂಕಗಳಲ್ಲಿ ಭಾರತದ ಸಾಧನೆ ಕಳಪೆ ಏಕೆ..? ಆರ್ಥಿಕ ಸಲಹಾ ಮಂಡಳಿ ಸದಸ್ಯರು ಹೇಳುವುದು ಹೀಗೆ..

ಹಾಗಾದರೆ ಮೋದಿ ಯಶಸ್ಸಿಗೆ ಕಾರಣವೇನು?: ಮೋದಿ ಅವರ ನಿರಂತರ ಯಶಸ್ಸಿಗೆ ಕಾರಣವೇನು ಎನ್ನುವ ಅನುಮಾನ ಎಲ್ಲರಿಗೂ ಕಾಡುತ್ತದೆ. ತಾನು ದೇಶದ ಪ್ರಧಾನಿಯಲ್ಲ ತಾನೊಬ್ಬ ಪ್ರಧಾನ ಸೇವಕ ಎನ್ನುವುದನ್ನು ಅವರು ಸ್ಪಷ್ಟವಾಗಿ ನಂಬಿದ್ದಾರೆ. ಹಾಗೇನಾದರೂ ಮೋದಿಯನ್ನು ಚುನಾವಣೆಯಲ್ಲಿ ಸೋಲಿಸಬೇಕೆಂದಾದಲ್ಲಿ ಅವರ ಎದುರಾಳಿ ಕೂಡ ಮೋದಿಯಷ್ಟೇ ಪ್ರಾಮಾಣಿಕವಾಗಿ ಜನರ ಕೆಲಸವನ್ನು ಬದ್ಧತೆಯಿಂದ ಆಗಬೇಕು. ಬಹುಶಃ ಇದೇ ಕಾರಣಕ್ಕಾಗಿ ರಾಹುಲ್‌ ಗಾಂಧಿಗಿಂತ ಆಮ್‌ ಆದ್ಮಿ ಪಾರ್ಟಿಯ ಅರವಿಂದ್‌ ಕೇಜ್ರಿವಾಲ್‌, ಬಿಜೆಪಿಗೆ ಹಾಗೂ ಮೋದಿಗೆ ದೊಡ್ಡ ಆತಂಕವಾಗಿ ಕಾಣುತ್ತಾರೆ. ಕಾಂಗ್ರೆಸ್‌ ಎಷ್ಟೇ ಜನಕ್ಕಾಗಿ ಕೆಲಸ ಮಾಡಿದರೂ, ಕಠಿಣ ಪರಿಶ್ರಮಿ ಎನ್ನುವ ಟ್ಯಾಗ್‌ ಹಾಗೂ ಜನರಿಗಾಗಿ ಕೆಲಸ ಮಾಡುವ ವ್ಯಕ್ತಿ ಎನ್ನುವುದು ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಹೊಂದಿಕೊಳ್ಳುತ್ತದೆ. ಇದು ಚುನಾವಣೆಯಂಥ ಹಂತದಲ್ಲಿ ಪ್ರಧಾನವಾಗಿ ಗೆಲ್ಲಲು ಸಹಾಯ ಮಾಡುತ್ತದೆ ಎಂದಿದ್ದಾರೆ.

G 20 ಅಧ್ಯಕ್ಷರಾಗಿ ಭಾರತಕ್ಕಿರುವ ಅವಕಾಶ ಹಾಗೂ ಸವಾಲುಗಳೇನು..?

ಯಾರಿವರು ಸಾಲ್ವಟೋರ್‌ ಬಾಬೋನಸ್‌: ಸಾಲ್ವಟೋರ್ ಬಾಬೋನಸ್‌ (salvatore-babones)  ಅಮೆರಿಕದ ಸಮಾಜಶಾಸ್ತ್ರಜ್ಞ ಮತ್ತು ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅವರು ಅಕ್ಟೋಬರ್ 5, 1969 ರಂದು ಯುಎಸ್ಎಯ ನ್ಯೂಜೆರ್ಸಿಯಲ್ಲಿ ಜನಿಸಿದ್ದರು. ಬಾಬೋನಸ್‌ ಹಲವಾರು ಪುಸ್ತಕಗಳು ಮತ್ತು ಶೈಕ್ಷಣಿಕ ಲೇಖನಗಳನ್ನು ಬರೆದಿದ್ದಾರೆ. ಅವರು ಅನೇಕ ಪುಸ್ತಕಗಳ ಲೇಖಕರು, ಅನೇಕ ಶೈಕ್ಷಣಿಕ ಲೇಖನಗಳು. ವಿದೇಶಾಂಗ ವ್ಯವಹಾರಗಳ ಹೊರತಾಗಿ, ಅವರು ಅಲ್-ಜಜೀರಾ ಇಂಗ್ಲಿಷ್, ಕ್ವಾಡ್ರಾಂಟ್, ದಿ ಆಸ್ಟ್ರೇಲಿಯನ್ ಮತ್ತು ಟ್ರೂಥೌಟ್‌ಗಾಗಿಯೂ ಕೆಲಸ ಮಾಡಿದ್ದಾರೆ. 2003 ರಲ್ಲಿ, ಅವರು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಮಾಡಿದ್ದರು. ಇದರ ನಂತರ, 2003 ಮತ್ತು 2008 ರ ನಡುವೆ, ಅವರು ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. 2008 ರಿಂದ, ಅವರು ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.

Follow Us:
Download App:
  • android
  • ios